ಮಡಿಕೇರಿ, ಏ. 26: 2008ರ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. ಈ ಚುನಾವಣೆ ಕೊಡಗಿಗೆ ಒಂದು ರೀತಿಯಲ್ಲಿ ಇತಿಹಾಸವೂ ಆಗಿದೆ. ವೀರಾಜಪೇಟೆ ಕ್ಷೇತ್ರದಿಂದ ಜಯಗಳಿಸಿದ ಕೆ.ಜಿ. ಬೋಪಯ್ಯ ಅವರು ವಿಧಾನ ಸಭೆಯ ಉಪಸಭಾಪತಿ ಹಾಗೂ ಸಭಾಧ್ಯಕ್ಷ ಸ್ಥಾನ ಈ ಎರಡು ಪದವಿಯನ್ನೂ ಅಲಂಕರಿಸಿದರೆ, ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಅವರು ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಈ ಅವಧಿ ಮುಕ್ತಾಯಗೊಂಡ ಬಳಿಕ ಎದುರಾಗಿದ್ದು, 2013ರ ಮಹಾ ಚುನಾವಣೆ. ಈ ಚುನಾವಣೆ ಎದುರಾದಾಗ ರಾಜಕೀಯವಾಗಿಯೂ ಮಡಿಕೇರಿ, ಏ. 26: 2008ರ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. ಈ ಚುನಾವಣೆ ಕೊಡಗಿಗೆ ಒಂದು ರೀತಿಯಲ್ಲಿ ಇತಿಹಾಸವೂ ಆಗಿದೆ. ವೀರಾಜಪೇಟೆ ಕ್ಷೇತ್ರದಿಂದ ಜಯಗಳಿಸಿದ ಕೆ.ಜಿ. ಬೋಪಯ್ಯ ಅವರು ವಿಧಾನ ಸಭೆಯ ಉಪಸಭಾಪತಿ ಹಾಗೂ ಸಭಾಧ್ಯಕ್ಷ ಸ್ಥಾನ ಈ ಎರಡು ಪದವಿಯನ್ನೂ ಅಲಂಕರಿಸಿದರೆ, ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಅವರು ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಈ ಅವಧಿ ಮುಕ್ತಾಯಗೊಂಡ ಬಳಿಕ ಎದುರಾಗಿದ್ದು, 2013ರ ಮಹಾ ಚುನಾವಣೆ. ಈ ಚುನಾವಣೆ ಎದುರಾದಾಗ ರಾಜಕೀಯವಾಗಿಯೂ ಅಭ್ಯರ್ಥಿಯಾಗಿದ್ದರೆ ಬಿ.ಎ. ಜೀವಿಜಯ ಜೆಡಿಎಸ್‍ನಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಹೊಸ ಅಭ್ಯರ್ಥಿಯಾಗಿ ಕೆ.ಎಂ. ಲೋಕೇಶ್ ಕಣಕ್ಕೆ ಇಳಿದಿದ್ದರು. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಎಂದು ಹೇಳಲಾಗುತ್ತಿತ್ತಾದರೂ ನೇರ ಸ್ಪರ್ಧೆ ಎದುರಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಡುವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಕೇಶ್ ಸೇರಿ ಕಣದಲ್ಲಿ ಒಟ್ಟು 14 ಮಂದಿ ಉಳಿದುಕೊಂಡಿದ್ದರು.
ಮೇ 5 ರಂದು ನಡೆದ ಚುನಾವಣೆಯ ಫಲಿತಾಂಶ ಮೇ 9 ರಂದು ಪ್ರಕಟಗೊಂಡಿತ್ತು. ಕ್ಷೇತ್ರದಲ್ಲಿ ರಂಜನ್ ಹಾಗೂ ಜೀವಿಜಯ ನಡುವಿನ ಸ್ಪರ್ಧೆ ಹಾವು - ಏಣಿ ಆಟದಂತೆ ಕೊನೆ
(ಮೊದಲ ಪುಟದಿಂದ) ಕ್ಷಣದವರೆಗೂ ಕೌತುಕ ಸೃಷ್ಟಿಸಿತ್ತು. ಅಂತಿಮವಾಗಿ ಜಯಗಳಿಸಿದ್ದು, ಬಿಜೆಪಿಯ ಅಪ್ಪಚ್ಚುರಂಜನ್ ಅವರು. ಇವರು 4629 ಮತಗಳ ಅಂತರದಿಂದ ಸಮೀಪದ ಸ್ಪರ್ಧಿ ಜೀವಿಜಯ ಅವರನ್ನು ಪರಾಭವಗೊಳಿಸಿದ್ದರು. ಆರಂಭಿಕ 15 ಸುತ್ತಿನ ಎಣಿಕೆಯಲ್ಲಿ ಹಿನ್ನಡೆ ಕಂಡಿದ್ದ ರಂಜನ್ ಕೊನೆಯ ನಾಲ್ಕು ಸುತ್ತಿನ ಮತ ಎಣಿಕೆಯಲ್ಲಿ ಇಷ್ಟು ಅಂತರದ ಜಯಗಳಿಸಿದ್ದರು.
ಈ ಚುನಾವಣೆಯಲ್ಲಿ ಅಪ್ಪಚ್ಚುರಂಜನ್ ಅವರು 56,696 ಮತ ಗಳಿಸಿದರೆ, ಬಿ.ಎ. ಜೀವಿಜಯ ಅವರಿಗೆ 52,067 ಮತ ದೊರೆತಿತ್ತು. ಕಾಂಗ್ರೆಸ್‍ನ ಅಭ್ಯರ್ಥಿ ಕೆ.ಎಂ. ಲೋಕೇಶ್ ಅವರಿಗೆ 32,313 ಮತ ಲಭ್ಯವಾಗಿತ್ತು. ಇತರ ಅಭ್ಯರ್ಥಿಗಳಾದ ಬಿಎಸ್‍ಪಿಯ ಎಸ್.ಪಿ. ಮಹದೇವಪ್ಪ ಅವರಿಗೆ 1294 ಮತ, ಜೆಡಿಯುನ ಕೆ.ಎಂ. ಬಷೀರ್ 694, ಸಿಪಿಐಎಂಎಲ್ (ರೆಡ್‍ಸ್ಟಾರ್)ನ ಡಿ.ಎನ್. ವನಜಾಕ್ಷಿ ನಿರ್ವಾಣಪ್ಪ 513, ಕೆಜೆಪಿಯ ಎಸ್.ಎನ್. ಶಂಭು ಲಿಂಗಪ್ಪ 5,714 ಮತಗಳಿಸಿದ್ದರು.
ಪಕ್ಷೇತರುಗಳಾದ ಡಿ.ಎಸ್. ಗುರು ಪ್ರಸಾದ್ 240, ಸಿ.ವಿ. ನಾಗೇಶ್ 679, ನಿಜಾಮುದ್ದೀನ್ ಎಂ.ಎ. 276, ಡಾ. ಬಿ.ಸಿ. ನಂಜಪ್ಪ 618, ರಫೀಕ್ 534, ಸಂತೋಷ್ ಕುಮಾರ್ ಎಂ.ವಿ. 681 ಹಾಗೂ ಹರೀಶ್ ಪೂವಯ್ಯ 1537 ಮತ ಪಡೆದಿದ್ದರು.
ವೀರಾಜಪೇಟೆ ಕ್ಷೇತ್ರ
ಈ ಕ್ಷೇತ್ರದಿಂದ ಒಟ್ಟು 9 ಮಂದಿ ಚುನಾವಣೆ ಎದುರಿಸಿದ್ದರು. ವೀರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಬಲ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರಿಗೆ ಇಲ್ಲಿ ಸ್ಪರ್ಧೆಯೊಡ್ಡಿದ್ದು, ಕಾಂಗ್ರೆಸ್‍ನಿಂದ ಅಭ್ಯರ್ಥಿಯಾಗಿದ್ದ ದಿ. ಬಿದ್ದಾಟಂಡ ಟಿ. ಪ್ರದೀಪ್ ಅವರು. ಇಲ್ಲಿ ಜೆಡಿಎಸ್‍ನ ಅಭ್ಯರ್ಥಿ ಮಾಜಿ ಶಾಸಕ ದಿ. ಡಿ.ಎಸ್. ಮಾದಪ್ಪ ಅವರು ಕಣದಲ್ಲಿದ್ದರೂ ಇವರ ಸ್ಪರ್ಧೆ ಹೇಳಿಕೊಳ್ಳುವಂತದ್ದಾಗಿರಲಿಲ್ಲ. ಕೆ.ಜಿ. ಬೋಪಯ್ಯ ಹಾಗೂ ಬಿ.ಟಿ. ಪ್ರದೀಪ್ ಸ್ಪರ್ಧೆಯ ಮತ ಎಣಿಕೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಕೆ.ಜಿ. ಬೋಪಯ್ಯ ಅವರಿಗೆ 2008ರ ಚುನಾವಣೆಯಲ್ಲಿ ದೊರೆತ ಗೆಲುವಿನ ಅಂತರ ಇಳಿಮುಖವಾದರೂ 3414 ಮತಗಳಿಂದ ಗೆಲುವಿನ ನಗೆ ಬೀರಿದರು. ಕೆ.ಜಿ. ಬೋಪಯ್ಯ ಅವರಿಗೆ 67,250 ಮತ ದೊರೆತರೆ ಸನಿಹದ ಸ್ಪರ್ಧಿ ಬಿ.ಟಿ. ಪ್ರದೀಪ್ ಅವರು 63,836 ಮತಗಳಿಸಿದ್ದರು.
ಜೆಡಿಎಸ್‍ನ ಡಿ.ಎಸ್. ಮಾದಪ್ಪ ಅವರಿಗೆ 5880 ಮತ ಲಭ್ಯವಾಗಿತ್ತು. ಉಳಿದಂತೆ ಇತರ ಸ್ಪರ್ಧಿಗಳಾದ ಬಿಎಸ್‍ಆರ್‍ನ ಅಯ್ಯಪ್ಪ ಎಂ.ಎನ್. 972, ಎಸ್‍ಡಿಪಿಐಯ ಉಸ್ಮಾನ್ ಕೆ.ಎ 527, ಸಿಪಿಐಎಂಎಲ್ (ರೆಡ್‍ಸ್ಟಾರ್)ನ ಚಂಗಪ್ಪ 425 ಮತಗಳಿಸಿದ್ದರು. ಪಕ್ಷೇತರರಾದ ಎಸ್.ಡಿ. ಉದಯ 662, ಮಾರಣ್ಣ ದಿಲೀಪ್ ಕುಮಾರ್ 685 ಹಾಗೂ ವಿಜಯಸಿಂಗ್ ಆರ್ ಡೇವಿಡ್‍ಗೆ 2140 ಮತ ದೊರೆತಿತ್ತು. ಈ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಜಯಗಳಿಸಿದ್ದ ಕೊಡಗಿನ ಎರಡೂ ಕ್ಷೇತ್ರದ ಅಭ್ಯರ್ಥಿಗಳು ಈ ತನಕ ವಿಪಕ್ಷದ ಶಾಸಕರುಗಳಾಗಿಯೇ ಕಾರ್ಯನಿರ್ವಹಿಸಿರುವದನ್ನು ಇಲ್ಲಿ ಸ್ಮರಿಸಬಹುದು.