ಮಡಿಕೇರಿ, ಏ. 26: ಕೊಡ್ಲಿಪೇಟೆಯ ಕಂದಾಯ ಕಚೇರಿಯಲ್ಲಿ ತಾ. 12.12.2010 ರಂದು ಹುಲಸೆ ಗ್ರಾಮದ ಹೆಚ್.ಎಸ್. ಲಿಂಗರಾಜು ಎಂಬವರಿಂದ ಖಾತೆ ಬದಲಾವಣೆ ಸಂಬಂಧ ರೂ. 2 ಸಾವಿರ ಲಂಚ ಸ್ವೀಕರಿಸುತ್ತಿದ್ದ ಆರೋಪ ಮೇರೆಗೆ ಅಲ್ಲಿನ ಕಂದಾಯ ನಿರೀಕ್ಷಕ ಆರ್. ಮಾದವ ಎಂಬವರಿಗೆ ನ್ಯಾಯಾಲಯ ದಂಡ ವಿಧಿಸಿದೆ.
ಆರೋಪಿಯು ಕೃಷಿಕ ಲಿಂಗರಾಜು ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ನಿರೀಕ್ಷಕ ಗಂಗಾಧರಪ್ಪ ನೇತೃತ್ವದಲ್ಲಿ ಧಾಳಿ ನಡೆಸಿ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಧೀಶರಾದ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮೀಜಿ ಆರೋಪ ಸಾಬೀತುಗೊಂಡ ಮೇರೆಗೆ 6 ತಿಂಗಳ ಸಜೆ ಮತ್ತು
(ಮೊದಲ ಪುಟದಿಂದ) ರೂ. 10 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದರೆ 5 ತಿಂಗಳ ಹೆಚ್ಚುವರಿ ಸಜೆ ಮತ್ತು ರೂ. 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಮರಳಿ ಈ ದಂಡ ಪಾವತಿಸದಿದ್ದರೆ ಪುನಃ 10 ತಿಂಗಳ ಸಜೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಈ ಸಂಬಂಧ ಸರಕಾರಿ ಅಭಿಯೋಜಕ ಎಂ.ಎಂ. ಕಾರ್ಯಪ್ಪ ವಕಾಲತ್ತು ವಹಿಸಿದ್ದರು.