ಮಡಿಕೇರಿ, ಏ. 26: ಅಮ್ಮತ್ತಿ ಕಾವಾಡಿ ನಿವಾಸಿ ಪಂಜರಿ ಎರವರ ಪಟ್ಟು ಎಂಬಾತ ತನ್ನ ಪುತ್ರ ಕುಟ್ಟಪ್ಪ ಎಂಬಾತನಿಗೆ ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಕಡಿದು ಗಾಯಗೊಳಿಸಿರುವದಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಗಾಯಾಳು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.