ಸುಂಟಿಕೊಪ್ಪ,ಏ.26: ಕ್ಷುಲ್ಲಕ ಕಾರಣಕ್ಕೆ ಕಲಹ ನಡೆದು ಮೂವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕುಶಾಲನಗರ ಸಮೀಪದ ಕಡುವಿನ ಹೊಸಹಳ್ಳಿ ನಿವಾಸಿಯಾದ ಪುಟ್ನಂಜ ಎಂಬಾತ ಭಾನುವಾರ ರಾತ್ರಿ ಮೂವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ತಲೆಮರೆಸಿಕೊಂಡಿದ್ದ. ಜಿಲ್ಲಾ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಸೋಮವಾರಪೇಟೆ ಡಿವೈಎಸ್ಪಿ, ಕುಶಾಲನಗರ ವೃತ್ತನಿರೀಕ್ಷಕರ ಮಾರ್ಗದರ್ಶನದ ಮೇರೆ ಹಾಸನದ ಬಳಿಯಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್, ಎ.ಎಸ್.ಐ ಶಿವಪ್ಪ, ಸಿಬ್ಬಂದಿಗಳಾದ ಧನುಕುಮಾರ್, ರಹೆಮಾನ್, ಪುನೀತ್ಕುಮಾರ್ ಇವರುಗಳು ಯಶಸ್ವಿಯಾಗಿದ್ದಾರೆ.