ನಾಪೆÉÇೀಕ್ಲು, ಏ. 26: ಕಳೆದ 15 ದಿನಗಳಿಂದ ಮೂರ್ನಾಡು-ಕುಂಬಳದಾಳು- ನಾಪೆÇೀಕ್ಲು ಮಾರ್ಗವಾಗಿ ಸಂಚರಿಸುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರವನ್ನು ವಿನಾಃಕಾರಣ ಸ್ಥಗಿತಗೊಳಿಸಿದ್ದು, ಕೂಡಲೇ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಾಗುವದು ಎಂದು ಗ್ರಾಮಸ್ಥರ ಪರವಾಗಿ ವಕೀಲರಾದ ನೆರವಂಡ ರಘು ದೇವಯ್ಯ ಹಾಗೂ ನೆರವಂಡ ಗಿರೀಶ್ ಆಗ್ರಹಿಸಿದ್ದಾರೆ. ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು ಬೆಳಿಗ್ಗೆ 9 ಗಂಟೆಗೆ ಕುಂಬಳದಾಳು ಗ್ರಾಮಕ್ಕಾಗಿ ತೆರಳಿ 9.15ಕ್ಕೆ ಈ ರಸ್ತೆ ಸಾರಿಗೆ ಸಂಸ್ಥೆ ಬಸ್ ನಾಪೆÇೀಕ್ಲು ಪಟ್ಟಣವನ್ನು ತಲಪುತ್ತಿತ್ತು. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸರಕಾರಿ ನೌಕರರಿಗೆ, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಈ ಬಸ್ ಸಂಚಾರವನ್ನು ಕಳೆದ 15 ವರ್ಷಗಳ ಹಿಂದೆ ಮಾಜಿ ಮಂತ್ರಿ ದಿ. ಎಂ.ಎಂ. ನಾಣಯ್ಯ ಅವರ ಪ್ರಯತ್ನದಿಂದ ಆರಂಭಿಸಲಾಗಿತ್ತು. ಆದರೆ ಇದೀಗ ಬಸ್ ಸೇವೆ ಸ್ಥಗಿತಗೊಳಿಸಿರುವದು ಈ ವಿಭಾಗದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಆದುದರಿಂದ ಕೂಡಲೇ ಬಸ್ ಸೇವೆಯನ್ನು ಎಂದಿನಂತೆ ಆರಂಭಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.