ವೀರಾಜಪೇಟೆ, ಏ. 27: ಕಡ್ಡಾಯವಾಗಿ ಮತದಾನ ಮಾಡುವಂತೆ ಜನತೆಯಲ್ಲಿ ಸಿ.ಐ.ಟಿ. ಕಾಲೇಜಿನ ಎನ್.ಎಸ್,ಎಸ್ ಘಟಕದಿಂದ ಮತದಾನ ಜಾಗೃತಿ ಅಭಿಯಾನ ವೀರಾಜಪೇಟೆ ನಗರದಲ್ಲಿ ಹಮ್ಮಿಕೊಂಡಿತ್ತು. ಪೊನ್ನಂಪೇಟೆ-ಹಳ್ಳಗಟ್ಟು ಗ್ರಾಮದಲ್ಲಿರುವ ಕೂರ್ಗ್ ತಾಂತ್ರಿಕ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯಾಡಿ ಮತದಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಸೇವಾ ಯೋಜನೆಯ 90 ಸೇವಕ ಮತ್ತು ಸೇವಕಿಯರನ್ನೊಳಗೊಂಡ ಜಾಥಾ ನಗರದ ದೊಡ್ಡಟ್ಟಿ ಚೌಕಿಯಿಂದ ಹೊರಟು ಮುಖ್ಯ ಬೀದಿ, ಖಾಸಾಗಿ ಬಸ್ ನಿಲ್ದಾಣ, ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣ ಮಾರ್ಗವಾಗಿ ದೊಡ್ಡಟ್ಟಿ ಚೌಕಿಯಲ್ಲಿ ಜಾಥಾ ಕೊನೆಗೊಂಡಿತು. ಘಟಕದ ಸೇವಕ ಮತ್ತು ಸೇವಕಿಯರು ಮತದಾನ ಮಾಡುವಂತೆ ಜಾಗೃತಿಗೊಳಿಸಿದರು. ಸುಂಕದ ಕಟ್ಟೆಯ ಸಮುದಾಯ ಭವನದಲ್ಲಿ ಸಮಾಪನಗೊಂಡು, ಕೂರ್ಗ್ ತಾಂತ್ರಿಕ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಎನ್.ಎಸ್. ಸುಜಿತ್ ಸಾರ್ವ ಜನಿಕರನ್ನು ಉದ್ದೇಶಿಸಿ ಮತದಾನ ಜಾಗೃತಿ ಬಗ್ಗೆ ಮಾಹಿತಿ ನೀಡಿದರು. ವೀರಾಜಪೇಟೆ ಸೆಕ್ಟರ್ ಅಧಿಕಾರಿ ಜಿ.ಎಸ್. ಲೊಕೇಶ್ ಮತ್ತು ಮಹದೇವ ಸ್ವಾಮಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಮಾಹಿತಿಗಳನ್ನು ಕಲೆ ಹಾಕಿದ ಸ್ಥಳೀಯರು ಹೊಸ ಯಂತ್ರದ ಬಗ್ಗೆ ಕುತೂಹಲದಿಂದ ವೀಕ್ಷಣೆ ಮಾಡಿದ್ದು ಮಾಹಿತಿಗಳನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಕೂರ್ಗ್ ತಾಂತ್ರಿಕ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಬಿ.ಎಲ್. ಪುರುಷೋತ್ತಮ, ಸಚಿನ್ ಕೆ.ಎಸ್., ರಾಜೇಶ್ ಟಿ.ಎನ್. ಮತ್ತು ವಿದ್ಯಾರ್ಥಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.