ಮಡಿಕೇರಿ, ಏ. 27: ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಪಕ್ಷಗಳ ಮುಖಂಡ ರೊಂದಿಗೆ ಸಭೆಯು ಚುನಾವಣಾ ವೀಕ್ಷಕ ಟಿ. ಶ್ರೀಕಾಂತ್ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಚುನಾವಣಾ ಸಾಮಾನ್ಯ ವೀಕ್ಷಕ ಟಿ. ಶ್ರೀಕಾಂತ್ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ರಾಜಕೀಯ ಪಕ್ಷಗಳ ಗಮನಕ್ಕೆ ತಂದರು. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಕುರಿತಂತೆ ಚುನಾವಣಾ ಆಯೋಗದ ನಿಯಮನುಸಾರ ವೆಚ್ಚ ಕುರಿತು ಮಾಹಿತಿ ನೀಡಿ ಅಭ್ಯರ್ಥಿಗಳ ವೆಚ್ಚ ಹಾಗೂ ಪಕ್ಷದ ವೆಚ್ಚ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಚುನಾವಣಾ ಪ್ರಚಾರಕ್ಕೆ ವಾಹನವನ್ನು ಬಳಸಲು ಪಡೆದ ಅನುಮತಿಯನ್ನು ನಿರ್ದಿಷ್ಟ ದಿನದಂದು ಬಳಸಲು ಅವಕಾಶವಿರುತ್ತದೆ.
ಕಾಲಮಿತಿ ಮುಗಿದ ನಂತರವೂ ಬಳಸುವದು ಕಂಡುಬಂದರೆ, ವೆಚ್ಚ ಮುಂದುವರಿಯಲಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕಿದೆ ಎಂದು ಚುನಾವಣಾ ವೀಕ್ಷಕರು ತಿಳಿಸಿದರು.
ಪ್ರಚಾರ ಸಮಯದಲ್ಲಿ ಧ್ವನಿವರ್ಧಕ ಬಳಸಲು ಚುನಾವಣಾ ಧಿಕಾರಿಯಿಂದ ಅನುಮತಿ ಪಡೆಯು ವದು ಕಡ್ಡಾಯ. ಚುನಾವಣಾ ನಿಯಮ ಸಂಬಂಧಿಸಿದಂತೆ ಸಂಶಯವಿದ್ದಲ್ಲಿ ಮಾಹಿತಿ ಪಡೆದುಕೊಳ್ಳ ಬಹುದಾಗಿದೆ ಎಂದು ಟಿ. ಶ್ರೀಕಾಂತ್ ವಿವರಿಸಿದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೊಸದಾಗಿ ಚುನಾವಣಾ ಆಯೋಗವು ಪ್ರತಿ ಮತಗಟ್ಟೆಯಲ್ಲಿ ಅಭ್ಯರ್ಥಿಗಳ ವಿವರ, ಚುನಾವಣಾಧಿಕಾರಿ ದೂರವಾಣಿ ಸಂಖ್ಯೆಗಳು ಹಾಗೂ ಚುನಾವಣಾ ನಿಯಮಗಳ ಕುರಿತು ಮಾಹಿತಿ ಇರಲಿದೆ ಎಂದು ಚುನಾವಣಾ ಸಾಮಾನ್ಯ ವೀಕ್ಷಕರು ತಿಳಿಸಿದರು.
ಭಾವಚಿತ್ರ ಸಹಿತ ಮತದಾರರ ಪಟ್ಟಿಯನ್ನು ಚುನಾವಣೆಗೆ ಏಳು ದಿನಗಳ ಮೊದಲು ಬಿಡುಗಡೆ ಮಾಡಲಾಗುವದು ಎಂದು ಇದೆ ಸಂದರ್ಭದಲ್ಲಿ ಅವರು ತಿಳಿಸಿದರು.
ಚುನಾವಣೆಯು ಪ್ರಾರಂಭ
ಸಭೆಯಲ್ಲಿ ಚುನಾವಣಾ ಪೊಲೀಸ್ ವೀಕ್ಷಕ ಸತ್ಯಜಿತ್ ನಾಯ್ಕ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್ ಕುಮಾರ್, ರಾಜಕೀಯ ಪಕ್ಷಗಳ ಪ್ರಮುಖರಾದ ಸಜಿಲ್ ಕೃಷ, ತೆನ್ನಿರಾ ಮೈನಾ ಇತರರು ಇದ್ದರು.