ಚಿ| ಮೊಹಮದ್ ಅಕ್ರಂ ಸೌ| ಶಿಫಾ
ಹುದಿಕೇರಿಯ ಅಬ್ದುಲ್ ರಹೀಂ - ನಸೀಮಾ ದಂಪತಿಗಳ ಪುತ್ರ ಶೇಖ್ ಮೊಹಮದ್ ಅಕ್ರಂ ಹಾಗೂ ಕುಶಾಲನಗರದ ಅಬ್ದುಲ್ ಸಲೀಂ ಮುಮ್ತಾಝ್ ದಂಪತಿಗಳ ಪುತ್ರಿ ಶಿಫಾ ಇವರುಗಳ ವಿವಾಹ ತಾ. 26 ರಂದು ಕುಶಾಲನಗರದ ಎ.ಪಿ.ಸಿ.ಎಂ. ಎಸ್. ಕನ್ವೆನ್ಷನಲ್ ಹಾಲ್ನಲ್ಲಿ ನಡೆಯಿತು.
ಚಿ| ಗಣೇಶ್ ಸೌ| ಲಿಖಿತ
ಹೆರವನಾಡು ಗ್ರಾಮದ ಪೂವಪ್ಪ ಪೂಜಾರಿ - ವಾರಿಜಾಕ್ಷಿ ದಂಪತಿಗಳ ಪುತ್ರ ಗಣೇಶ್ (ವಿಕಾಸ್) ಹಾಗೂ ಅವಂದೂರು ಗ್ರಾಮದ ಜನಾರ್ದನ ಪೂಜಾರಿ - ಬೇಬಿ ದಂಪತಿಗಳ ಪುತ್ರಿ ಲಿಖಿತ (ದೀಪಿಕಾ) ಇವರುಗಳ ವಿವಾಹ ತಾ. 25 ರಂದು ಮಡಿಕೇರಿಯ ಕೊಡವ ಸಮಾಜದಲ್ಲಿ ನೆರವೇರಿತು.
ಸೌ| ಹೆಲನ್ ಚಿ| ರಜಿತ್
ಭಾಗಮಂಡಲದ ಕುದುಕುಳಿ ಭರತ್ - ಇಂದಿರಾ ದಂಪತಿಗಳ ಪುತ್ರಿ ಹೆಲನ್ (ತೀರ್ಥ) ಹಾಗೂ ಆರ್ಜಿ ಗ್ರಾಮದ ಮುಂಡಚಾಡಿರ ಸೋಮಯ್ಯ - ಲೀಲಾವತಿ ದಂಪತಿಗಳ ಪುತ್ರ ರಜಿತ್ ಇವರುಗಳ ವಿವಾಹ ತಾ. 27 ರಂದು ಮಡಿಕೇರಿಯ ಮೇಲಿನ ಗೌಡ ಸಮಾಜದಲ್ಲಿ ನೆರವೇರಿತು.
ಸೌ| ಗೊಂಬೆ ಚಿ| ಮಿಟ್ಟು
ಅಯ್ಯಂಗೇರಿ ಗ್ರಾಮದ ಎಂ.ಕೆ. ಅಪ್ಪಯ್ಯ - ಪೊನ್ನಮ್ಮ ದಂಪತಿಗಳ ಪುತ್ರಿ ಗೊಂಬೆ ಹಾಗೂ ಬಾವಲಿ ಗ್ರಾಮದ ದಾಸಪ್ಪ - ಕುಟ್ಟವ್ವ ದಂಪತಿಗಳ ಪುತ್ರ ಮಿಟ್ಟು ಇವರುಗಳ ವಿವಾಹ ತಾ. 27 ರಂದು ನಾಪೋಕ್ಲುವಿನ ಶ್ರೀ ಭಗವತಿ ದೇವಾಲಯದಲ್ಲಿ ನಡೆಯಿತು.