ಮಡಿಕೇರಿ, ಏ. 27: ವಿಧಾನಸಭಾ ಚುನಾವಣಾ ಪೊಲೀಸ್ ವೀಕ್ಷಕರಾಗಿ ನಿಯೋಜನೆಗೊಂಡಿರುವ ಸತ್ಯಜಿತ್ ನಾಯ್ಕ್ ತಾ. 23 ರಂದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವರದಿ ಮಾಡಿಕೊಂಡಿದ್ದಾರೆ.

ಡಾ. ಸತ್ಯಜಿತ್ ನಾಯ್ಕ್ ಅವರು 2008 ರ ಐಪಿಎಸ್ ಬ್ಯಾಚ್‍ನವರಾಗಿದ್ದು, ಒರಿಸ್ಸಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕರು ಚುನಾವಣಾ ಪೊಲೀಸ್ ದೂರುಗಳಿಗೆ ಸಂಬಂಧಿಸಿದಂತೆ 9449847572 ಸಂಪರ್ಕಿಸಬಹುದಾಗಿದೆ. ಹಾಗೆಯೇ ನಗರದ ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯಲ್ಲಿ ತೆರೆಯಲಾಗಿರುವ ಚುನಾವಣಾ ವೀಕ್ಷಕರ ಕಚೇರಿಯಲ್ಲಿ ಬುಧವಾರ ಮತ್ತು ಶುಕ್ರವಾರ ಹೊರತುಪಡಿಸಿ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಭೇಟಿ ಮಾಡಬಹುದಾಗಿದೆ. ಹಾಗೆಯೇ ವೀರಾಜಪೇಟೆಯ ಚುನಾವಣಾಧಿಕಾರಿ ಕಚೇರಿಯಲ್ಲಿ ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆವರಗೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ. (ತುರ್ತು ಸಭೆ, ಸಮಾರಂಭ ಮತ್ತು ಪ್ರವಾಸ ದಿನ ಹೊರತುಪಡಿಸಿ).