ಮಡಿಕೇರಿ, ಏ. 27: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಆಟದ ಮೈದಾನದಲ್ಲಿ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ಬಡುವಂಡ್ರ, ಮಂಞಂಡ್ರ, ಕಟ್ಟೆಮನೆ, ಇಳಂದಿಲ, ಕುಂಬಳಚೇರಿ, ಕುಂಚಡ್ಕ, ಬೊಳ್ತಜ್ಜೆ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ.
ಇಂದು ನಡೆದ ಪಂದ್ಯದಲ್ಲಿ ಕುಂಜಿಲನ ತಂಡ 6 ವಿಕೆಟ್‍ಗೆ 46 ರನ್ ಗಳಿಸದರೆ, ಮಂಞಂಡ್ರ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಕೊಳಂಬೆ ತಂಡ 6 ವಿಕೆಟ್‍ಗೆ 69 ರನ್ ಗಳಿಸಿದರೆ, ಬಡುವಂಡ್ರ ತಂಡ 2 ವಿಕೆಟ್ ನಷ್ಟದಲ್ಲಿ ಗೆದ್ದುಕೊಂಡಿತು. ಅಯ್ಯೇಟಿ ತಂಡ 4 ವಿಕೆಟ್ 105 ರನ್ ಕಲೆ ಹಾಕಿದರೆ, ಹೊದ್ದೇಟಿ ತಂಡ 7 ವಿಕೆಟ್‍ಗೆ 64 ರನ್ ಗಳಿಸಿ ಸೋಲನುಭವಿಸಿತು. ಅಚ್ಚಲ್ಪಾಡಿ ತಂಡ 6 ವಿಕೆಟ್‍ಗೆ 66 ರನ್ ಗಳಿಸಿದರೆ, ತಡಿಯಪ್ಪನ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು. ಕುಂಚಡ್ಕ ತಂಡ 9 ವಿಕೆಟ್‍ಗೆ 81 ರನ್ ಗಳಿಸಿದರೆ, ದಬ್ಬಡ್ಕ ತಂಡ 6 ವಿಕೆಟ್‍ಗೆ 45 ರನ್ ಗಳಿಸಿ 36 ರನ್‍ಗಳ ಅಂತರದಿಂದ ಸೋಲನುಭವಿಸಿತು.
ಪಾಂಡನ ತಂಡ 4 ವಿಕೆಟ್‍ಗೆ 55 ರನ್ ಗಳಿಸಿದರೆ, ಬೊಳ್ತಜ್ಜೆ ತಂಡ 4 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕುಂಬಳಚೇರಿ ತಂಡ 4 ವಿಕೆಟ್‍ಗೆ 86 ರನ್ ಗಳಿಸಿದರೆ, ಕೈಬಿಲಿ ತಂಡ 7 ವಿಕೆಟ್‍ಗೆ 71 ರನ್ ಗಳಿಸಿ 15 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕುಕ್ಕೇರ ತಂಡ 2 ವಿಕೆಟ್‍ಗೆ ಭರ್ಜರಿ 132 ರನ್ ಕಲೆ ಹಾಕಿದರೆ, ಪಾಂಡಿಮನೆ ಬಿ ತಂಡ 6 ವಿಕೆಟ್‍ಗೆ 69 ರನ್ ಗಳಿಸಿ 63 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕಟ್ರತನ ತಂಡ 5 ವಿಕೆಟ್‍ಗೆ 62 ರನ್‍ಗಳಿಸಿದರೆ, ಇದೇ ಪ್ರಥಮ ಬಾರಿಗೆ ಭಾಗವಹಿಸಿರುವ ಇಳಂದಿಲ ತಂಡ 4 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ತೋಟಂಬೈಲು ತಂಡ 7 ವಿಕೆಟ್‍ಗೆ 49 ರನ್ ಗಳಿಸಿದರೆ, ಕಟ್ಟೆಮನೆ ತಂಡ ಎರಡು ವಿಕೆಟ್ ನಷ್ಟದಲ್ಲಿ ಗುರಿ ತಲಪಿತು.
ಅಯ್ಯೇಟಿ ಹಾಗೂ ಮಂಞಂಡ್ರ ತಂಡಗಳ ಇನ್ನೊಂದು ಪಂದ್ಯದಲ್ಲಿ ಅಯ್ಯೇಟಿ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು 51 ರನ್ ಗಳಿಸಿದರೆ, ಮಂಞಂಡ್ರ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲಪಿತು. ಬಡುವಂಡ್ರ ತಂಡ 8 ವಿಕೆಟ್‍ಗೆ 59 ರನ್ ಗಳಿಸಿದರೆ, ತಡಿಯಪ್ಪನ ತಂಡ 4 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿ, 11 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕುಕ್ಕೇರ ತಂಡ 5 ವಿಕೆಟ್‍ಗೆ 42 ರನ್ ಗಳಿಸಿದರೆ, ಬೊಳ್ತಜ್ಜೆ ತಂಡ 5 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.