ಮಡಿಕೇರಿ, ಏ. 27: ನಗರದ ಶ್ರೀ ಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನಾಗ ದರ್ಶನ ಮತ್ತು ಪಾಷಾಣ ಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ದೈವಕೋಲ ಮೇ 7 ರಂದು ನೆರವೇರಲಿದೆ.
ಮೇ 6 ರಂದು ಸಂಜೆ 6 ಗಂಟೆಗೆ ಪಯ್ಯನೂರ್ ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ತಾ. 7 ರಂದು ಬೆಳಿಗ್ಗೆ 6 ಗಂಟೆಯಿಂದ ಮಹಾಗಣಪತಿ ಹೋಮ, ನವಕ ಪಂಚಗವ್ಯ ಕಲಶ ಪೂಜೆ, ನವಕ ಪಂಚಗವ್ಯ ಕಲಶಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಪಾಷಾಣ ಮೂರ್ತಿ ದೈವದ ಕಲಶ ಪೂಜೆ, ಅಲಂಕಾರ ಪೂಜೆ ಹಾಗೂ ಮಂಗಳಾರತಿ ನಡೆಯಲಿದೆ. ಬಳಿಕ ಪೆರ್ಲಂಪಾಡಿಯ ನಾಗ ಪಾತ್ರಿಗಳಾದ ರಮಾನಂದ ಭಟ್ ಅವರಿಂದ ನಾಗ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗ ದರ್ಶನ ನೆರವೇರಲಿದೆ. ಮಧ್ಯಾಹ್ನ 12.30 ಗಂಟೆಗೆ ಅನ್ನಸಂತರ್ಪಣೆ, ಸಂಜೆ 7.30 ಗಂಟೆಯಿಂದ ಪಾಷಾಣ ಮೂರ್ತಿ ದೈವಕೋಲ ನಡೆಯಲಿದೆ.