ಮಡಿಕೇರಿ, ಏ. 27: ಚುನಾವಣಾ ಸಂದರ್ಭ ಕೋವಿಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಬೇಕೆಂಬ ಕುರಿತು ಸಿ.ಎನ್.ಸಿ. ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಆಕ್ಷೇಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡವರ ಪರಂಪರಾಗತ ಕೋವಿ ಹಕ್ಕನ್ನು ಚುನಾವಣಾ ಸಂಹಿತೆ ಹೆಸರಿನಲ್ಲಿ ಕಸಿದುಕೊಳ್ಳುವದು ಅಕ್ಷಮ್ಯ ಎಂದು ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.