ಶ್ರೀಮಂಗಲ, ಏ. 27: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ (ಹೆಚ್.ಆರ್.ಸಿ)ಯ ವಿಜಿಲೆನ್ಸ್ ಸ್ಕ್ವಾಡ್‍ನ ರಾಜ್ಯ ಅಧ್ಯಕ್ಷರಾಗಿ ಮೂಲತಃ ಕೊಡಗಿನ ಬಾದುಮಂಡ ಎಸ್. ಉಮೇಶ್ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಶ್ರೀಮಂಗಲ ಗ್ರಾಮದ ಬಾದುಮಂಡ ಸುಬ್ಬಯ್ಯ (ಪಾಪು) ಹಾಗೂ ಮುತ್ತಮ್ಮ ಅವರ ಪುತ್ರರಾಗಿರುವ ಉಮೇಶ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.