ನಾಪೆÇೀಕ್ಲು, ಏ. 28: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಹದಿಮೂರನೇ ದಿನದ ಪಂದ್ಯಾಟದಲ್ಲಿ ಬೇಪಡಿಯಂಡ, ಪಾಲೇಂಗಡ, ಕುಮ್ಮಂಡ, ಕಲ್ಲೇಂಗಡ, ಚೋಡುಮಾಡ, ಬೊಳಿಯಾಡಿರ, ಅಲ್ಲಪಂಡ, ಮುಕ್ಕಾಟಿರ (ಹರಿಹರ), ತೀತಮಾಡ, ಚೆರುಮಂದಂಡ, ಚೇಂದಿರ, ಸೋಮೆಯಂಡ, ಮೂಕಂಡ ತಂಡಗಳು ಮುನ್ನಡೆ ಸಾಧಿಸಿವೆ.

ಬೇಪಡಿಯಂಡ ಮತ್ತು ಚೋಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೇಪಡಿಯಂಡ ತಂಡವು ಚೋಕಂಡ ತಂಡವನ್ನು 3-0 ಗೋಲಿನಿಂದ ಮಣಿಸಿತು. ಬೇಪಡಿಯಂಡ ತಂಡದ ಪರ ದಿಲನ್, ಪೆÇನ್ನಣ್ಣ, ಸುಬ್ಬಯ್ಯ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು.

ಪಾಲೇಂಗಡ ಮತ್ತು ಕೂಪದಿರ ತಂಡಗಳ ನಡುವಿನ ಪಂದ್ಯದಲ್ಲಿ ಪಾಲೇಂಗಡ ತಂಡವು ಕೂಪದಿರ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಪಾಲೇಂಗಡ ತಂಡದ ಪರ ಬೋಪಯ್ಯ ಎರಡು, ಸುನಿಲ್ ಒಂದು ಗೋಲು ದಾಖಲಿಸಿದರೆ, ಕೂಪದಿರ ತಂಡದ ಪರ ಸುಬ್ಬಯ್ಯ ಒಂದು ಗೋಲು ದಾಖಲಿಸಿದರು. ಚೇರಂಡ ಮತ್ತು ಕುಮ್ಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಮ್ಮಂಡ ತಂಡವು ಚೇರಂಡ ತಂಡವನ್ನು 5-0 ಗೋಲಿನಿಂದ ಪರಾಭವಗೊಳಿಸಿತು. ಕುಮ್ಮಂಡ ತಂಡದ ಪರ ನಿಖಿಲ್ ಉತ್ತಪ್ಪ, ನಾಗೇಶ್ ನಂಜಪ್ಪ, ದಿಲನ್ ಪೂವಯ್ಯ, ಬೋಸ್ ಚಂಗಪ್ಪ, ಕವನ್ ಕಾರ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಬೊಳ್ಳಿಮಾಡ ಮತ್ತು ಕಲ್ಲೇಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲ್ಲೇಂಗಡ ತಂಡವು ಬೊಳ್ಳಿಮಾಡ ತಂಡವನ್ನು 4-0 ಗೋಲಿನಿಂದ ಸೋಲಿಸಿತು. ತಂಡದ ಪರ ಚೇತನ್ ಎರಡು, ಮಿರು ಚಿನ್ನಪ್ಪ, ಮಿಥುನ್ ಕುಮಾರ್ ತಲಾ ಒಂದೊಂದು ಗೋಲು ದಾಖಲಿಸಿದರು. ಮಳವಂಡ ಮತ್ತು ಬೊಳಿಯಾಡಿರ ತಂಡಗಳ ನಡುವಿನ ಪಂದ್ಯದಲ್ಲಿ ಬೊಳಿಯಾಡಿರ ತಂಡವು ಮಳವಂಡ ತಂಡವನ್ನು 2-0 ಗೋಲಿನ ಅಂತರದಿಂದ ಮಣಿಸಿತು. ಬೊಳಿಯಾಡಿರ ತಂಡದ ಪರ ಪ್ರಸಿದ್ಧ್ ಅಯ್ಯಪ್ಪ, ಧನಿಶ್ ಬೋಪಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು. ಮಾಳೆಯಂಡ ಮತ್ತು ಚೋಡುಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೋಡುಮಾಡ ತಂಡವು ಮಾಳೆಯಂಡ ತಂಡವನ್ನು 1-0 ಗೋಲಿನಿಂದ ಮಣಿಸಿತು. ತಂಡದ ಪರ ಜೀವನ್ ಬೆಳ್ಯಪ್ಪ ಒಂದು ಗೋಲು ದಾಖಲಿಸಿ ತಂಡದ ಗೆಲವಿಗೆ ಕಾರಣರಾದರು. ಅಲ್ಲಪಂಡ ಮತ್ತು ಮಾಳೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಲ್ಲಪಂಡ ತಂಡವು ಮಾಳೇಟಿರ ತಂಡವನ್ನು 3-1 ಗೋಲಿನ ಅಂತರದಿಂದ ಸೋಲಿಸಿತು.

ಅಲ್ಲಪಂಡ ತಂಡದ ಪರ ಬನ್ಸಿ ಬೋಪಣ್ಣ ಎರಡು, ಮಿಲನ್ ನಾಣಯ್ಯ ಒಂದು ಗೋಲು ದಾಖಲಿಸಿದರೆ, ಮಾಳೇಟಿರ ತಂಡದ ಪರ ಅಪ್ಪಚ್ಚು ಒಂದು ಗೋಲು ದಾಖಲಿಸಿದರು. ಮುಕ್ಕಾಟಿರ (ಹರಿಹರ) ಮತ್ತು ಆದೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಆದೇಂಗಡ ತಂಡವನ್ನು 4-1 ಗೋಲಿನಿಂದ ಮಣಿಸಿತು. ಮುಕ್ಕಾಟಿರ ತಂಡದ ಪರ ಮಾಚಯ್ಯ, ವಿನೋದ್, ಭೀಮಯ್ಯ, ಮುತ್ತಣ್ಣ ತಲಾ ಒಂದೊಂದು ಗೋಲು ದಾಖಲಿಸಿದರೆ, ಆದೇಂಗಡ ತಂಡದ ಪರ ಪ್ರಮಖ್ ಒಂದು ಗೋಲು ದಾಖಲಿಸಿದರು.

ತೀತಮಾಡ ಮತ್ತು ಪೆÇನ್ನೋಲತಂಡ ತಂಡಗಳ ನಡುವಿನ ಪಂದ್ಯದಲ್ಲಿ ತೀತಮಾಡ ತಂಡವು ಪೆÇನ್ನೋಲತಂಡ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ತೀತಮಾಡ ತಂಡದ ಪರ ಅಜಿತ್, ಸುಜಿತ್ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಸಣ್ಣುವಂಡ ಮತ್ತು ಚೆರುಮಂದಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆರುಮಂದಂಡ ತಂಡವು ಸಣ್ಣುವಂಡ ತಂಡವನ್ನು 4-1 ಗೋಲಿನ ಅಂತರದಿಂದ ಸೋಲಿಸಿತು. ಚೆರುಮಂದಂಡ ತಂಡದ ಪರ ಗಣಪತಿ ಎರಡು, ಕಾರ್ಯಪ್ಪ, ಸೋಮಣ್ಣ ತಲಾ ಒಂದೊಂದು ಗೋಲು ದಾಖಲಿಸಿದರೆ, ಸಣ್ಣುವಂಡ ತಂಡದ ಪರ ಲೋಕೇಶ್ ಒಂದು ಗೋಲು ದಾಖಲಿಸಿದರು.

ಚೇಂದಿರ ಮತ್ತು ಕುಟ್ಟಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೇಂದಿರ ತಂಡವು ಕುಟ್ಟಂಡ ತಂಡವನ್ನು 1-0 ಗೋಲಿನಿಂದ ಮಣಿಸಿತು. ಚೇಂದಿರ ತಂಡದ ಪರ ಪುನೀತ್ ಪೆÇನ್ನಣ್ಣ ಒಂದು ಗೋಲು ದಾಖಲಿಸಿದರು. ಸೋಮೆಯಂಡ ಮತ್ತು ಕೇಚೆಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಸೋಮೆಯಂಡ ತಂಡವು ಕೇಚೆಟ್ಟಿರ ತಂಡವನ್ನು 5-0 ಗೋಲಿನ ಅಂತರದಿಂದ ಮಣಿಸಿತು. ಸೋಮೆಯಂಡ ತಂಡದ ಪರ ಅಪ್ಪಚ್ಚು, ಸುಜು ಎರಡು, ಪುನೀತ್ ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಮೂಕಂಡ ಮತ್ತು ಕಲ್ಯಾಟಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಂಡ ತಂಡವು ಕಲ್ಯಾಟಂಡ ತಂಡವನ್ನು ಸಡನ್ ಡೆತ್‍ನಲ್ಲಿ 7-6 ಗೋಲಿನ ಅಂತರದಿಂದ ಸೋಲಿಸಿತು.