ಗೋಣಿಕೊಪ್ಪಲು, ಏ. 28: ಪೆÇನ್ನಂಪೇಟೆಯಲ್ಲಿ ಶ್ರೀ ರಾಮಕೃಷ್ಣ ಶಾರದಾಶ್ರಮ ಹಾಗೂ ಆಶ್ರಮ ಆಸ್ಪತ್ರೆ ನೆಲೆಗೊಳ್ಳಲು ಅಮ್ಮಕೊಡವ ಕುಟುಂಬಸ್ಥರಾದ ಪುತ್ತಾಮನೆ ಮುದ್ದಮಯ್ಯ-ಪೆÇನ್ನಮ್ಮ ದಂಪತಿ ಹಾಗೂ ಅಚ್ಚಿಯಂಡ ಕಾಳಮಯ್ಯ ಕುಟುಂಬಸ್ಥರು ಕಾರಣ. ಸುಮಾರು 2 ಎಕರೆ ನಿವೇಶನವನ್ನು 1927ರಲ್ಲಿ ನೀಡಿದ್ದರು. ರಾಮಕೃಷ್ಣಾಶ್ರಾಮ ನಿರ್ಮಾಣ ಸಂದರ್ಭ ಶಾಂಭವಾನಂದಜಿ ಒಳಗೊಂಡಂತೆ ಹಲವು ಸ್ವಾಮೀಜಿಗಳಿಗೆ ಅಮ್ಮಕೊಡವ ಕುಟುಂಬಸ್ಥರು ತಮ್ಮ ಮನೆಯನ್ನೇ ಬಿಟ್ಟುಕೊಟ್ಟು ಔದಾರ್ಯ ತೋರಿದ್ದರು. ಶ್ರೀ ರಾಮಕೃಷ್ಣ ಶಾರದಾಶ್ರಮ ಹಾಗೂ ಅಮ್ಮಕೊಡವ ಕುಟುಂಬಗಳ ನಡುವೆ ಅವಿನಾಭಾವ ಸಂಬಂಧವಿದೆ. ದೇಶವಿದೇಶದಿಂದ ಪೆÇನ್ನಂಪೇಟೆಗೆ ಭಕ್ತಾದಿಗಳು ಬಂದಾಗಲೂ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಉಪಚರಿಸುತ್ತಿದ್ದರು. ಮುದ್ದಮಯ್ಯ-ಪೆÇನ್ನಮ್ಮ ದಂಪತಿ ಮಹಾತ್ಮಾ ಗಾಂಧೀಜಿ ಪೆÇನ್ನಂಪೇಟೆಗೆ ಭೇಟಿ ನೀಡಿದ ಸಂದರ್ಭ ಅವರ ಸೇವೆಯನ್ನೂ ಮಾಡಿದ್ದರು. ಇದೀಗ ಕ್ರೀಡೆ ಮೂಲಕ ಅಮ್ಮಕೊಡವ ಕುಟುಂಬಗಳು ಒಗ್ಗಟ್ಟಾಗುತ್ತಿರುವದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ಭೋದ ಸ್ವರೂಪಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹಾತೂರು ಶಾಲಾ ಮೈದಾನದಲ್ಲಿ ಅಖಿಲ ಅಮ್ಮಕೊಡವ ಸಮಾಜ ಹಾಗೂ ಪುತ್ತಾಮನೆ ಕುಟುಂಬದ ಸಂಯುಕ್ತ ಆಶ್ರಯದಲ್ಲಿ 24 ತಂಡಗಳ ನಡುವೆ ನಡೆಯುತ್ತಿರುವ ‘ಪುತ್ತಾಮನೆ ಕಪ್ ಕ್ರಿಕೆಟ್’ಗೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಅನಾದಿಕಾಲದಿಂದಲೂ ಅಮ್ಮಕೊಡವ ಜನಾಂಗ ಸಸ್ಯಾಹಾರವನ್ನೇ ಸೇವಿಸುತ್ತಾ ಬಂದಿದ್ದು ಇದನ್ನು ಕೈಬಿಡದೆ ಮುಂದುವರಿಸಲು ಮನವಿ ಮಾಡಿದರು. ಅಮ್ಮಕೊಡವ ಸಂಸ್ಕೃತಿಗೆ ಜಿಲ್ಲೆಯಲ್ಲಿ ಶತಮಾನದ ಇತಿಹಾಸವಿದೆ. ಸಂಸ್ಕೃತಿಯ ಪೆÇೀಷಣೆಯೊಂದಿಗೆ, ಪೂರ್ವಾಪರ
(ಮೊದಲ ಪುಟದಿಂದ) ವಿಚಾರಧಾರೆಗಳೊಂದಿಗೆ ಒಗ್ಗಟ್ಟಿನಲ್ಲಿ ಸಾಗಲು ಸ್ವಾಮೀಜಿ ಹೇಳಿದರು.ಹಿರಿಯರಿಗೆ ಗೌರವ ಕೊಡುವ ಸಂಪ್ರದಾಯ ಮುಂದುವರಿಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಆಸ್ಪತ್ರೆ ಅಮೃತ ಮಹೋತ್ಸವ ಹೊಸ್ತಿಲಲ್ಲಿದ್ದು ಮೇ.23,24,25 ರಂದು ವಿವೇಕಾನಂದ ಆರೋಗ್ಯ ಧಾಮಕ್ಕೆ ಚಾಲನೆ ನೀಡಲಾಗುವದು. ಮೆಡಿಕಲ್ ಸೆಮಿನಾರ್, ಮಲ್ಟಿ ಸ್ಪೇಷಾಲಿಟಿ ಆರೋಗ್ಯ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮವಿದ್ದು ಇದೇ ಸಂದರ್ಭ ಎಲ್ಲರ ಸಹಕಾರಕ್ಕೆ ಮನವಿ ಮಾಡಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ‘ಶಕ್ತಿ’ ದೈನಿಕದ ಸಹಾಯಕ ಸಂಪಾದಕ ಚಿಲ್ಲಜಮ್ಮನ ನಾ. ಸೋಮೇಶ್ ಅವರು, ಕ್ರಿಕೆಟ್ ಹಬ್ಬಕ್ಕೆ ಮಾತ್ರ ಅಮ್ಮಕೊಡವ ಜನಾಂಗದ ಬಾಂಧವ್ಯ ಸೀಮಿತವಾಗಬಾರದು.ಪೆÇಮ್ಮಾಲೆ ಕೊಡಗಿನಲ್ಲಿ ಅಮ್ಮಕೊಡವರಿಗೆ ತಮ್ಮದೇ ಆದ ಭೀರ್ಯ ಇದೆ. ಭರತ ಖಂಡದಲ್ಲಿ ‘ಅಮ್ಮ’ ಎಂದರೆ ಪ್ರೀತಿ, ಮಮಕಾರ. ಅಂತಹಾ ವಿಶಿಷ್ಟ ನಾಮಧೇಯ ಅಮ್ಮಕೊಡವರದ್ದು. ಕಾವೇರಮ್ಮ, ಇಗ್ಗುತಪ್ಪ ನಮಗೆ ಒಳ್ಳೆಯ ಬದುಕನ್ನು ನೀಡಿದ್ದಾರೆ. ಅಮ್ಮ ಎಂಬ ಪದಕ್ಕೆ ನಾವು ಬೆಲೆ ನೀಡುವಂತಾಗಬೇಕು.ಅಮ್ಮ ಕೊಡವ ಜನಸಂಖ್ಯೆ ಕಡಿಮೆ ಇದೆ. ನಮ್ಮಲ್ಲಿ ಕಿಚ್ಚು ದ್ವೇಷಕ್ಕೆ ಅವಕಾಶ ಬೇಡ. ದೇವನೆಲದ ಸಂಸ್ಕೃತಿಯಲ್ಲಿ ನಾವೆಲ್ಲಾ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯೊಂದಿಗೆ ಬಾಳುವೆ ನಡೆಸೋಣ ಎಂದು ಹಾರೈಸಿದರು.
ಪುತ್ತಾಮನೆ ಕುಟುಂಬ ಮುಖ್ಯಸ್ಥರು, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಹಿರಿಯ ವ್ಯವಸ್ಥಾಪಕರಾದ ಪುತ್ತಾಮನೆ ಗಣೇಶ್ ಹಾಗೂ ರಾಧಾ ಗಣೇಶ್ ಅವರು ಕುಟುಂಬದ ಹಿರಿಯರ ಸಾಧನೆ ಪರಿಚಯಿಸಿದರು. ಪುತ್ತಾಮನೆಯ ಒಟ್ಟು 19 ಕುಟುಂಬವಿದ್ದು, ಉತ್ತರಕೊಡಗಿನ ಚೇರಳ ಶ್ರೀಮಂಗಲದಿಂದ ದೇವತಕ್ಕರಾಗಿ ಬಂದ ಇತಿಹಾಸವಿದೆ. ಪುತ್ತಾಮನೆ ದಿ.ಮುದ್ದಮ್ಮಯ್ಯ, ಪೆÇನ್ನಮ್ಮ ಮುದ್ದಮಯ್ಯ, ಡಾ. ಪುತ್ತಾಮನೆ ನಾಣಮಯ್ಯ, ಪುತ್ತಾಮನೆ ಗಣಪಮಯ್ಯ, ಮಾಜಿ ಭಾರತ ತಂಡದ ಹಾಕಿ ಆಟಗಾರ ಪುತ್ತಾಮನೆ ರೋಷನ್, ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ರಂಜನ್ ಸಾಧನೆ ಕುರಿತು ಪರಿಚಯಿಸಿದರು. ಪೆÇನ್ನಂಪೇಟೆಗೆ ಗಾಂಧೀಜಿ ಬಂದಾಗ ಮಾಡಲಾದ ಸೇವೆ, 30 ಮಹಿಳಾ ಸಮಾಜವನ್ನು ಹುಟ್ಟು ಹಾಕಿದ ಕೀರ್ತಿಯ ಬಗ್ಗೆ ವಿವರಿಸಿದರು.
ಇಂಡಿಯನ್ ಬ್ಯಾಂಕ್ನ ನಿವೃತ್ತ ಡಿವಿಷನಲ್ ಮೇನೇಜರ್ ಗುಂಬೀರ ಜಿ.ರಘು ಅವರು, ಅಮ್ಮ ಕೊಡವ ಕುಟುಂಬಗಳ ಸಮಗ್ರ ಮಾಹಿತಿ ಹಾಗೂ ಸಾಧನೆ ಕುರಿತು ಸ್ಮರಣ ಸಂಚಿಕೆಯನ್ನು ಹೊರತರುವಂತಾಗಬೇಕು. ಚಿ.ನಾ.ಸೋಮೇಶ್ ಅವರಂತಹ ಪತ್ರಕರ್ತರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ದಾಖಲೀಕರಣ ಆಗಬೇಕಾಗಿದೆ. ಕ್ರಿಕೆಟ್ನೊಂದಿಗೆ ಮಹಿಳೆಯರಿಗೂ ಯಾವದಾದರೂ ವಿಶೇಷ ಕ್ರೀಡಾಕೂಟ ಏರ್ಪಡಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಗುಂಬೀರ ಗಣೇಶ್ ಮಾತನಾಡಿ, ಕ್ರೀಡೆಯಲ್ಲಿ ಮನರಂಜನೆ ಹಾಗೂ ಜನಾಂಗ ಒಗ್ಗೂಡಲು ಅವಕಾಶವಿದೆ. ಜನಾಂಗದ ಅಭಿವೃದ್ಧಿ ಕಾರ್ಯ, ಶಿಕ್ಷಣ, ಆರೋಗ್ಯ ಕಾಳಜಿಯನ್ನೂ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಓರ್ವ ವ್ಯಕ್ತಿಯಿಂದ ಸಮಾಜ ನಿರ್ಮಾಣ ಅಸಾಧ್ಯ. ಎಲ್ಲರೂ ಒಗ್ಗೂಡಬೇಕು. ಈ ಬಾರಿ ಪುತ್ತಾಮನೆ ಕುಟುಂಬಸ್ಥರು ಕ್ರಿಕೆಟ್ ಹಬ್ಬವನ್ನು ಉತ್ತಮವಾಗಿ ಆಯೋಜಿಸಿದ್ದಾರೆ. ಅಮ್ಮಕೊಡವ ಕುಟುಂಬದ ಸದಸ್ಯತನ ಆಂದೋಲನಕ್ಕೆ ಎಲ್ಲರ ಸಹಕಾರ ಅಗತ್ಯ. ಅಮ್ಮಕೊಡವ ಸಮಾಜ ನಿರ್ಮಾಣಕ್ಕೆ ಎರಡು ಎಕರೆ ಜಾಗದ ಅವಶ್ಯಕತೆಯಿದ್ದು ನಮ್ಮ ಜನಾಂಗದ ದಾನಿಗಳು ಸಹಕರಿಸಿದ್ದಲ್ಲಿ ಸಮಾಜದ ಕಟ್ಟಡ ನಿರ್ಮಾಣ ಕಾರ್ಯ ಚುರುಕುಗೊಳಿಸಲಾಗುವದು ಎಂದು ನುಡಿದರು.
ಸಭೆಯಲ್ಲಿ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಚೊಟ್ಟೆಕೊರಿಯಂಡ ಕಾಳಮ್ಮಯ್ಯ ಬಾಲಕೃಷ್ಣ,ಕಾವೇರಿ ಮಹಿಳಾ ಅಮ್ಮಕೊಡವ ಸಂಘದ ಅಧ್ಯಕ್ಷೆ ರೇವತಿ ಪರಮೇಶ್ವರ್, ಮೈಸೂರಿನ ನಿವೃತ್ತ ಅಧ್ಯಾಪಕಿ ರೇವತಿ ರಾಧಾಕೃಷ್ಣ, ಪುತ್ತಾಮನೆ ಸರಸ್ವತಿ ಲಕ್ಷ್ಮಣ, ಸೀಮಾರಂಜನ್ ಮಾತನಾಡಿದರು.
ವೇದಿಕೆಯಲ್ಲಿ ಖಜಾಂಚಿ ಪುತ್ತಾಮನೆ ಪ್ರಸಾದ್, ನಾಪೆÇೀಕ್ಲು ಬೆಳೆಗಾರ ನೆರೆಯಂಡಮ್ಮಂಡ ಜನಾರ್ಧನ, ಪುತ್ತಾಮನೆ ಕುಮಾರಿ ಸುಭಾಶ್, ಡಾ. ಪುತ್ತಾಮನೆ ಕಿರಣ್, ಶ್ರೀ ಕೃಷ್ಣ ಅಮ್ಮಕೊಡವ ಸಮಾಜದ ಅಧ್ಯಕ್ಷ ಮನ್ನಕ್ಕಮನೆ ರಾಜು, ಉದ್ಯಮಿ ಅಚ್ಚಿಯಂಡ ಸುನಿಲ್, ಅಖಿಲ ಅಮ್ಮಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಮನ್ನಕ್ಕಮನೆ ಬಾಲಕೃಷ್ಣ ಉಪಸ್ಥಿತರಿದ್ದರು.
ಅತಿಥಿಗಳಿಗೆ ಹೂವಿನ ಗಿಡಗಳನ್ನು ನೀಡಿ ಸ್ವಾಗತಿಸಲಾಯಿತು. ಪ್ರಾರ್ಥನೆ ಲಲಿತಾ, ಶರೀನಾ,ಶಾಂಭವಿ ಪ್ರಸಾದ್, ವಿದ್ಯಾ ಜಗದೀಶ್, ಸ್ವಾಗತ ಪಿ.ಡಿ. ಜೀವನ್ ಹಾಗೂ ಶಾಂಭವಿ ಪ್ರಸಾದ್ ವಂದಿಸಿದರು. ನಿರೂಪಣೆ ಬಡಕಮ್ಮಂಡ ವಿನ್ನಾ, ಪುತ್ತಾಮನೆ ಸಂಧ್ಯಾ, ಪುತ್ತಾಮನೆ ಅನಿತಾ ನಿರ್ವಹಿಸಿದರು.
ಕ್ರೀಡಾ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಅತಿಥಿಗಳನ್ನು ತಳಿಯತಕ್ಕಿ ಬೊಳಕ್ ನೊಂದಿಗೆ ಕಾವೇರಿ ಮಹಿಳಾ ಸಂಘ ಹಾಗೂ ಪುತ್ತಾಮನೆ ಮಹಿಳೆಯರು ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಕರೆತಂದರು. ಹುದಿಕೇರಿಯ ಕೊಂಬುಕೊಟ್ಟು ವಾಲಗದ ಹಿಮ್ಮೇಳದೊಂದಿಗೆ ವಿವಿಧ ಅಮ್ಮಕೊಡವ ಕುಟುಂಬ ತಂಡಗಳು ತಮ್ಮ ತಮ್ಮ ಮನೆತನದ ಬ್ಯಾನರ್ ಹಾಗೂ ಬಾವುಟದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದರು. ಕ್ರಿಕೆಟ್ ಪಂದ್ಯಾಟವನ್ನು ಶ್ರೀ ಭೋದಸ್ವರೂಪಾನಂದ ಸ್ವಾಮೀಜಿ ಬ್ಯಾಟ್ ಮಾಡುವ ಮೂಲಕ ಹಾಗೂ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಬಾಲ್ ಮಾಡುವ ಮೂಲಕ ಉದ್ಘಾಟಿಸಲಾಯಿತು. ಇಂದು ಮೊದಲಿಗೆ ಅಖಿಲ ಅಮ್ಮಕೊಡವ ಸಮಾಜ ತಂಡ ಮತ್ತು ಅತಿಥೇಯ ಪುತ್ತಾಮನೆ ತಂಡಗಳ ನಡುವೆ ಪ್ರದರ್ಶನ ಪಂದ್ಯಾಟ ನಡೆಯಿತು.ಅನಿತಾ ಜೀವನ್, ವಿದ್ಯಾ, ಪ್ರೀತಿ ತಂಡದ ನೃತ್ಯ ಕಾರ್ಯಕ್ರಮ ಆಕರ್ಷಕವಾಗಿ ಮೂಡಿ ಬಂತು. - ಟಿ.ಎಲ್. ಶ್ರೀನಿವಾಸ್