ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಕ್ರಿಕೆಟ್ ಉತ್ಸವ ಆಯೋಜನೆಗೆ 2030ರ ತನಕವೂ ವಿವಿಧ ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿರುವದು ವಿಶೇಷವಾಗಿದೆ. 1997ರಲ್ಲಿ ಕೌಟುಂಬಿಕ ಹಾಕಿ ಉತ್ಸವ ಆರಂಭಗೊಂಡರೆ, 2000ನೇ ಇಸವಿಯಲ್ಲಿ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅವರು ಕೀತಿಯಂಡ ಕಪ್ ಕೌಟುಂಬಿಕ ಕ್ರಿಕೆಟ್ ಉತ್ಸವವನ್ನು ಆಯೋಜನೆ ಮಾಡಿದ್ದು, ಇದು ಜಿಲ್ಲೆಯ ವಿವಿಧೆಡೆಗಳಲ್ಲಿ 2017ರ ತನಕವೂ ನಡೆದುಕೊಂಡು ಬಂದಿದೆ. ಈ ಬಾರಿ 2018ರಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಉತ್ಸವ ನಡೆಯುತ್ತಿದೆ. ಮುಂದಿನ ವರ್ಷದಿಂದ 2030ರ ತನಕವೂ ವಿವಿಧ ಕುಟುಂಬಗಳು ಈ ಉತ್ಸವ ಆಯೋಜನೆಗೆ ಮುಂದಾಗಿವೆ.