ಸೋಮವಾರಪೇಟೆ, ಏ. 28: ವಿಧಾನ ಸಭಾ ಚುನಾವಣೆ ಹಿನ್ನೆಲೆ ಗಡಿ ಭಾಗದಲ್ಲಿ ಅಳವಡಿಸಲಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ದಿನದ 24 ಗಂಟೆಯೂ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದು, ಕೊಡಗು-ಹಾಸನ ಜಿಲ್ಲಾ ಗಡಿಭಾಗವಾದ ಬಾಣವಾರದಲ್ಲಿ ಪ್ರತಿಯೊಂದು ವಾಹನಗಳನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಸೋಮವಾರಪೇಟೆ, ಹೆಬ್ಬಾಲೆ, ಶನಿವಾರಸಂತೆಯಿಂದ ಕೊಣನೂರು-ಅರಕಲಗೂಡು ಮಾರ್ಗಕ್ಕೆ ತೆರಳುವ ಹಾಗೂ ಹಾಸನಜಿಲ್ಲೆಗೆ ಒಳಪಡುವ ಕೊಣನೂರು ಮಾರ್ಗದಿಂದ ಸೋಮವಾರಪೇಟೆಗೆ ಆಗಮಿಸುವ ವಾಹನಗಳನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಸೆಕ್ಟರ್ ಆಫೀಸರ್‍ರೊಂದಿಗೆ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಹಾಗೂ ಗೃಹರಕ್ಷಕದಳದ ಸಿಬ್ಬಂದಿಗಳು ದಿನದ 24 ಗಂಟೆಯೂ ತಪಾಸಣೆ ನಡೆಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಯಾವದೇ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ 4 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದ ಸೆಕ್ಟರ್ ಆಫೀಸರ್ ಸ್ವಾಮಿ ಅವರು, ಹಣ ಸಾಗಿಸುತ್ತಿದ್ದ ಕುಶಾಲನಗರ ಸಮೀಪದ
ಕೊಣನೂರು ಮಾರ್ಗದಿಂದ ಸೋಮವಾರಪೇಟೆಗೆ ಆಗಮಿಸುವ ವಾಹನಗಳನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಸೆಕ್ಟರ್ ಆಫೀಸರ್‍ರೊಂದಿಗೆ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಹಾಗೂ ಗೃಹರಕ್ಷಕದಳದ ಸಿಬ್ಬಂದಿಗಳು ದಿನದ 24 ಗಂಟೆಯೂ ತಪಾಸಣೆ ನಡೆಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಯಾವದೇ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ 4 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದ ಸೆಕ್ಟರ್ ಆಫೀಸರ್ ಸ್ವಾಮಿ ಅವರು, ಹಣ ಸಾಗಿಸುತ್ತಿದ್ದ ಕುಶಾಲನಗರ ಸಮೀಪದ ಯೋಗಾನಂದ ಬಡಾವಣೆ ನಿವಾಸಿಯೋರ್ವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸೋಮವಾರಪೇಟೆ ಭಾಗದ ಅಂಗಡಿಗಳಿಗೆ ಸೋಪ್ ಸರಬರಾಜು ಮಾಡಿ ಸಂಗ್ರಹಿಸಿದ್ದ ಹಣಕ್ಕೆ ಪೂರಕ ದಾಖಲಾತಿಗಳನ್ನು ಒದಗಿಸಿದ ನಂತರ ನ್ಯಾಯಾಲಯದ ಮೂಲಕ ಹಣವನ್ನು ನಿನ್ನೆ ದಿನ ವಾಪಸ್ ಪಡೆದು ಕೊಂಡಿರುವ ಒಂದು ಪ್ರಕರಣವನ್ನು ಹೊರತುಪಡಿಸಿದರೆ ಬೇರಿನ್ಯಾವ ಅಕ್ರಮಗಳೂ ನಡೆದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.