ಮಡಿಕೇರಿ, ಏ. 28: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಇಲ್ಲಿನ ಜ. ತಿಮ್ಮಯ್ಯ ಆಟದ ಮೈದಾನದಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ಬೊಳೆÀ್ತಜ್ಜಿ, ತೆಕ್ಕಡೆ ತಂಡಗಳು ಪ್ರಿ ಕ್ವಾರ್ಟರ್ ಫೈನಲ್‍ಗೆ ಪ್ರವೇಶಿಸಿವೆ. ಮಂಞÁಪುರ ಹಾಗೂ ಕೋಚನ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಹೊಸೋಕ್ಲು ತಂಡ 7 ವಿಕೆಟ್‍ಗೆ 74 ರನ್ ಗಳಿಸಿದರೆ, ಮಾವಾಜಿ ತಂಡ 5 ವಿಕೆಟ್‍ಗೆ 45 ರನ್ ಗಳಿಸಿ 29 ರನ್‍ಗಳ ಅಂತರದಿಂದ ಸೋಲನುಭವಿಸಿತು. ಮಾವಾಜಿ ಜಯಪ್ರಕಾಶ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಪಾಕಮುಕ್ಕಾಟಿ ‘ಬಿ’ ತಂಡ 7 ವಿಕೆಟ್‍ಗೆ 33 ರನ್ ಗಳಿಸಿದರೆ, ಪೈಕೇರ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಪಾಕ ಮುಕ್ಕಾಟಿ ತಂಡದ ಚಂದ್ರಕಾಂತ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಕುಂಚಡ್ಕ ತಂಡ 8 ವಿಕೆಟ್‍ಗೆ 65 ರನ್ ಗಳಿಸಿದರೆ, ಕುಂಬಳಚೇರಿ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕುಂಬಳಚೇರಿ ಲೋಚನ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಮೇಲ್ಚೆಂಬು ತಂಡ 7 ವಿಕೆಟ್‍ಗೆ 47 ರನ್ ಗಳಿಸಿದರೆ, ಕಟ್ಟೆಮನೆ ತಂಡ 3 ವಿಕೆಟ್ ನಷ್ಟದಲ್ಲಿ 50 ರನ್ ಗಳಿಸಿ ಗುರಿ ಸಾಧಿಸಿತು. ಮೇಲ್ಚೆಂಬು ಗಿರೀಶ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಪೈಕೇರ ತಂಡ 5 ವಿಕೆಟ್‍ಗೆ 55 ರನ್ ಗಳಿಸಿದರೆ, ಬಡುವಂಡ್ರ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಬಡುವಂಡ್ರ ಭರತ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.

ಹೊಸೋಕ್ಲು ತಂಡ 4 ವಿಕೆಟ್‍ಗೆ ಸರಾಸರಿ 100 ರನ್ ಪೇರಿಸಿದರೆ, ಮಂಞಂಡ್ರ ತಂಡ 3 ವಿಕೆಟ್ ಕಳೆದುಕೊಂಡು ಕೇವಲ 36 ರನ್ ಮಾತ್ರ ಗಳಿಸಿ 64 ರನ್‍ಗಳ ಭಾರೀ ಅಂತರದಿಂದ ಸೋಲನುಭವಿಸಿತು. ಮಂಞಂಡ್ರ ಸುರೇಶ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಹೊಸೋಕ್ಲು ಸುರೇಶ್ 5 ಸಿಕ್ಸರ್‍ನೊಂದಿಗೆ 40 ರನ್ ಗಳಿಸಿ ಗಮನ ಸೆಳೆದರು.

ತೆಕ್ಕಡೆ ತಂಡ ಇಳಂದಿಲ ತಂಡದೆದುರು 113 ರನ್‍ಗಳನ್ನು ಕಲೆ ಹಾಕಿದರೆ, ಇಳಂದಿಲ 6 ವಿಕೆಟ್‍ಗೆ 45 ರನ್ ಮಾತ್ರ ಗಳಿಸಿ, 68 ರನ್‍ಗಳ ಭಾರೀ ಅಂತರದಿಂದ ಸೋಲನುಭವಿಸಿತು. ಇಳಂದಿಲ ಚೇತನ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ತೆಕ್ಕಡೆ ಚೇತನ್ 5 ಸಿಕ್ಸರ್‍ಗಳೊಂದಿಗೆ 38 ರನ್ ಗಳಿಸಿ ಗಮನ ಸೆಳೆದರು. ಮತ್ತೊಂದು ಪಂದ್ಯದಲ್ಲಿ ಕಟ್ಟೆಮನೆ ತಂಡ 7 ವಿಕೆಟ್‍ಗೆ 47 ರನ್ ಗಳಿಸಿದರೆ, ಬೊಳ್ತಜ್ಜಿ ತಂಡ 2 ವಿಕೆಟ್‍ಗೆ 50 ರನ್ ಗಳಿಸಿ ಗುರಿ ತಲಪಿತು. ಕಟ್ಟೆಮನೆ ಸೋನಾಜಿತ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಕೋಚನ ತಂಡ 7 ವಿಕೆಟ್‍ಗೆ 62 ರನ್ ಗಳಿಸಿದರೆ, ಪಾಣತ್ತಲೆ ತಂಡ 9 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿ 9 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕುಂಬಳಚೇರಿ ತಂಡ 3 ವಿಕೆಟ್‍ಗೆ 53 ರನ್ ಗಳಿಸಿದರೆ, ತೆಕ್ಕಡೆ ತಂಡ 1 ವಿಕೆಟ್ ನಷ್ಟದಲ್ಲಿ 57 ರನ್ ಗಳಿಸಿ ಗುರಿ ಸಾಧಿಸಿತು. ಅರಿಯನ ತಂಡ 2 ವಿಕೆಟ್‍ಗೆ 71 ರನ್ ಗಳಿಸಿದರೆ, ಮಂಞಪುರ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಬೊಳ್ತಜ್ಜೆ ತಂಡ 7 ವಿಕೆಟ್‍ಗೆ 80 ರನ್ ಗಳಿಸಿದರೆ, ಬಡುವಂಡ್ರ ತಂಡ 5 ವಿಕೆಟ್‍ಗೆ 70 ರನ್ ಗಳಿಸಿ 10 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬಡುವಂಡ್ರ ಧನಂಜಯ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ತೆಕ್ಕಡೆ ತಂಡ 3 ವಿಕೆಟ್‍ಗೆ 66 ರನ್ ಗಳಿಸಿದರೆ, ಹೊಸೋಕ್ಲು ತಂಡ ಎಲ್ಲಾ ವಿಕೆಟ್ ಕಳೆದುಕೊಂಡು 52 ರನ್ ಗಳಿಸಿ 14 ರನ್‍ಗಳ ಅಂತರದಿಂದ ಸೋಲನುಭವಿಸಿತು.