ಗೋಣಿಕೊಪ್ಪ ವರದಿ, ಏ. 28: ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಅಮ್ಮಕೊಡವ ಜನಾಂಗದ ನಡುವೆ ನಡೆಯುತ್ತಿರುವ ಪುತ್ತಾಮನೆ ಕ್ರಿಕೆಟ್ ಕಪ್‍ನಲ್ಲಿ ನಾಳಿಯಮ್ಮನ, ಚಮ್ಮಣಮಾಡ, ಕೆ. ನಾಳಿಯಮ್ಮಂಡ, ಕೊಂಡಿಜಮ್ಮಂಡ, ಪಡಿಙರಮ್ಮಂಡ, ಅಚ್ಚಿಯಂಡ, ಬಾಚಮಂಡ ಹಾಗೂ ನಾಳ್ಯಮ್ಮನ ತಂಡಗಳು ಗೆಲವು ದಾಖಲಿಸಿದವು.

ಅತಿಥೇಯ ಪುತ್ತಾಮನೆ ಹಾಗೂ ಅಮ್ಮಕೊಡವ ಇಲೆವೆನ್ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ಪುತ್ತಾಮನೆ 8 ವಿಕೆಟ್ ಜಯ ಸಾಧಿಸಿತು. ಅಮ್ಮಕೊಡವ ಇಲೆವೆನ್ ಮೊದಲು ಬ್ಯಾಟ್ ಮಾಡಿ 3 ವಿಕೆಟ್‍ಗೆ 47 ರನ್‍ಗಳ ಗುರಿ ನೀಡಿತು. ಪುತ್ತಾಮನೆ 2 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.

ಕೆ. ನಾಳಿಯಮ್ಮಂಡ ತಂಡವು ನೆರೆಯಂಡಮಾಡ ವಿರುದ್ಧ 9 ವಿಕೆಟ್ ಗೆಲುವು ಪಡೆಯಿತು. ನೆರೆಯಂಡಮಾಡ 3 ವಿಕೆಟ್‍ಗೆ 45 ರನ್ ದಾಖಲಿಸಿತು. ಕೆ. ನಾಳಿಯಮ್ಮಂಡ 1 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿ ಗೆಲವು ಪಡೆಯಿತು.

ಕೊಂಡಿಜಮ್ಮಂಡ ತಂಡವು ಚೊಟ್ಟಕೊರಿಯಂಡ ವಿರುದ್ಧ 4 ರನ್‍ಗಳ ಗೆಲವು ಪಡೆಯಿತು. ಕೊಂಡಿಜಮ್ಮಂಡ 3 ವಿಕೆಟ್‍ಗೆ 80 ರನ್ ದಾಖಲಿಸಿತು. ಚೊಟ್ಟಕೊರಿಯಂಡ ತಂಡ 2 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಚೊಟ್ಟಕೊರಿಯಂಡ ಪರ ಕಶೀಶ್ 53, ರನ್, ಕೊಂಡಿಜಮ್ಮಂಡ ಪರ 6 ಸಿಕ್ಸರ್‍ಗಳೊಂದಿಗೆ ಕೀರ್ತನ್ 67 ರನ್ ಚಚ್ಚಿದರು.

ಪಡಿಙರಮ್ಮಂಡ ತಂಡವು ಪಾಡಿಯಮ್ಮಂಡ ವಿರುದ್ಧ 9 ವಿಕೆಟ್ ಗೆಲುವು ದಾಖಲಿಸಿತು. ಪಾಡಿಯಮ್ಮಂಡ 2 ವಿಕೆಟ್‍ಗೆ 85 ರನ್ ಗಳಿಸಿತು. ಪಡಿಙರಮ್ಮಂಡ ತಮಡವು 1 ವಿಕೆಟ್ ಕಳೆದುಕೊಂಡು ಯಶ್ವಂತ್ ಸಿಡಿಸಿದ 63 ರನ್‍ಗಳ ಕಾಣಿಕೆಯಿಂದ 9 ವಿಕೆಟ್ ಗೆಲವು ಪಡೆಯಿತು. ಪಾಡಿಯಮ್ಮಂಡ ಪರ ಕಾರ್ತಿಕ್ 32 ರನ್ ಗಳಿಸಿದರು.

ಚೆರಲಾತಮ್ಮಂಡ ತಂಡ ಗೈರು ಹಾಜರಾದ ಕಾರಣ ನಾಳಿಯಮ್ಮನ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಮಂಜುವಂಡ ತಂಡ ಗೈರಾಗುವ ಮೂಲಕ ಚಮ್ಮಣಮಾಡ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯುವಂತಾಯಿತು. ಅಣ್ಣೀರ ತಂಡ ಗೈರಾದ ಕಾರಣ ಬಾಚಮಂಡ ಗೆಲವು ಪಡೆಯಿತು.

ನಾಳ್ಯಮ್ಮನ ತಂಡವು ಚಮ್ಮಣಮಾಡ ವಿರುದ್ಧ 11 ರನ್‍ಗಳಿಂದ ಜಯ ಸಾಧಿಸಿತು. ನಾಳ್ಯಮ್ಮನ 2 ವಿಕೆಟ್‍ಗೆ 64 ರನ್ ಗಳಿಸಿತು. ಚಿಮ್ಮಣಮಾಡ 3 ವಿಕೆಟ್ ಕಳೆದುಕೊಂಡು 53 ರನ್ ದಾಖಲಿಸಿತು.

ಅಚ್ಚಿಯಂಡ ತಂಡವು ಚಿಲ್ಲಜಮ್ಮನ ವಿರುದ್ಧ 12 ರನ್‍ಗಳ ಗೆಲವು ದಾಖಲಿಸಿತು. ಅಚ್ಚಿಯಂಡ 3 ವಿಕೆಟ್‍ಗೆ 65 ರನ್ ದಾಖಲಿಸಿತು. ಚಿಲ್ಲಜಮ್ಮನ 5 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿ ಸೋಲನುಭವಿಸಿತು.