ಮಡಿಕೇರಿ, ಏ.28: ಧಾರ್ಮಿಕ ಶಿಕ್ಷಣವನ್ನು ನೀಡುತ್ತಾ ಬರುತ್ತಿರುವ ಸುಂಟಿಕೊಪ್ಪದ ಸುನ್ನಿ ಶಾಫಿ ಮಸೀದಿಯ ದರ್ಸ್ನ 12ನೇ ವಾರ್ಷಿಕೋತ್ಸವ ಮೇ 1 ರಂದು ಸಂಜೆ ನಡೆಯಲಿದೆಯೆಂದು ತಜಿಕ್ಕಿಯತ್ತ್ ತುಲಬಾ ದರ್ಸ್ ಸಂಘಟನೆ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘÀಟನೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸಿರ್ ಮುಸ್ಲಿಯಾರ್ ಅಂದು ದರ್ಸ್ ವಾರ್ಷಿಕೋತ್ಸವ ಮತ್ತು ದರ್ಸ್ನಿಂದ ಶಿಕ್ಷಣ ಪಡೆದು ಉನ್ನತ ಶಿಕ್ಷಣದ ಸಲುವಾಗಿ ಕೇರಳದ ಪಟ್ಟಿಕಾಡುವಿನ ಜಾಮಿಯಾ ನೂರಿಯ್ಯಾ ಕಾಲೇಜಿಗೆ ತೆರಳಲಿರುವ ಅಬ್ದುಲ್ ಸಮದ್ ಮಸ್ಲಿಯಾರ್ ಶನಿವಾರಸಂತೆ ಹಾಗೂ ಅಬ್ದುಲ್ ನಾಸೀರ್ ಮುಸ್ಲಿಯಾರ್ ಎಡಪಾಲ ಅವರ ಬೀಳ್ಕೊಡುಗೆ ಸಮಾರಂಭವು ನಡೆಯಲಿದೆ ಎಂದು ತಿಳಿಸಿದರು.
ವಾರ್ಷಿಕೋತ್ಸವ ಸಮಾರಂಭವನ್ನು ಸಂಜೆ 6.30 ಗಂಟೆಗೆ ಕೊಡಗು ಜಿಲ್ಲಾ ಉಪ ಖಾಜಿ ಶೈಖುನಾ ಅಬ್ದುಲ್ಲಾ ಪೈಝಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದರ್ಸ್ನ ಗುರುಗಳಾದ ಶೈಖುನಾ ಉಸ್ತಾದ್ ಉಸ್ಮಾನ್ ಫೈಝಿ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಕೇರಳದ ಸೂಫಿವರ್ಯ ಬಶೀರ್ ಬಾಖವಿ ಕೀಶೇರಿ ಪಾಲ್ಗೊಂಡು ದುಆದ ನೇತೃತ್ವ ವಹಿಸÀಲಿದ್ದಾರೆ.ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಮುಖ್ಯ ಮಸೀದಿಗಳ ಅಧ್ಯಕ್ಷರುಗಳು, ಆಡಳಿತ ಮಂಡಳಿಯ ಪ್ರಮುಖರು, ಉಲಮಾ ಉಮರಾಗಳು ಭಾಗವಹಿಸಲಿ ದ್ದಾರೆಂದು ತಿಳಿಸಿದರು.
ಮಸೀದಿಯ ದರ್ಸ್ಗಳಲ್ಲಿ 10 ವರ್ಷಗಳ ಕಾಲ ಧಾರ್ಮಿಕ ವಿದ್ಯೆಯನ್ನು ಪಡೆಯುವವರು ಉನ್ನತ ಶಿಕ್ಷಣವನ್ನು ಕೇರಳದ ಜಾಮಿಯಾ ನೂರಿಯ್ಯಾ ಪಟ್ಟಿಕಾಡುವಿನಲ್ಲಿ ಪಡೆಯುತ್ತಾರೆಂದು ಮಾಹಿತಿ ನೀಡಿದ ಅಬ್ದುಲ್ ನಾಸಿರ್ ಮುಸ್ಲಿಯಾರ್, ಪ್ರಸ್ತುತ ಕೊಡಗಿನಲ್ಲಿ ಹಾಗೂ ಕೇರಳದಲ್ಲಿ ಮಸೀದಿಯ ದರ್ಸ್ಗಳ ಮೂಲಕ ಧಾರ್ಮಿಕ ಶಿಕ್ಷಣ ಪಡೆಯುವ ಕ್ರಮ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿಯೂ ಸುಂಟಿಕೊಪ್ಪ ದರ್ಸ್ನಲ್ಲಿ 23 ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದರ್ಸ್ನ ಅಧ್ಯಕ್ಷರಾದ ಅಬ್ದುಲ್ ಸಮದ್ ಮುಸ್ಲಿಯಾರ್, ಉಪಾಧ್ಯಕ್ಷರಾದ ಜುನೈದ್ ಮುಸ್ಲಿಯಾರ್, ಸಹಕಾರ್ಯದರ್ಶಿ ಅಮೀರ್ ಮುಸ್ಲಿಯಾರ್, ಸದಸ್ಯರಾದ ರಝಾಕ್ ಮುಸ್ಲಿಯಾರ್ ಉಪಸ್ಥಿತರಿದ್ದರು.