ಮಡಿಕೇರಿ, ಏ. 28: ಕೇಂದ್ರ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‍ಸಿ) ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಕಳೆದ ಬಾರಿಯ ಪರೀಕ್ಷೆಯಲ್ಲಿ 501ನೇ ರ್ಯಾಂಕ್‍ನ ಮೂಲಕ ಸಾಧನೆ ತೋರಿದ ಕೊಡಗಿನ ಮುಕ್ಕಾಟಿರ ಪುನೀತ್ ಕುಟ್ಟಯ್ಯ ಈ ಬಾರಿ ಮತ್ತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿದ್ದು, ತಮ್ಮ ಸ್ಥಾನವನ್ನು ಪಟ್ಟಿಯಲ್ಲಿ ಮತ್ತಷ್ಟು ಮುಂದೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ 501ನೇ ರ್ಯಾಂಕ್ ಗಳಿಸಿದ್ದ ಪುನೀತ್ ಪ್ರಸಕ್ತ ಸಾಲಿನಲ್ಲಿ 324ನೇ ರ್ಯಾಂಕ್‍ಗೆ ಜಿಗಿಯುವ ಮೂಲಕ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಬಾರಿ ಕರ್ನಾಟಕ ರಾಜ್ಯದ 27 ಮಂದಿ ಪರೀಕ್ಷೆಯಲ್ಲಿ ಸ್ಥಾನ ಗಳಿಸಿದ್ದು, ಪುನೀತ್ ಕೂಡ ಇವರಲ್ಲಿ ಒಬ್ಬರಾಗಿದ್ದಾರೆ.4ನೇ ಪ್ರಯತ್ನಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದ ಪುನೀತ್ ಎರಡನೇ ಬಾರಿ ವಿಫಲರಾಗಿದ್ದರು. ಆದರೂ ಹಿಂಜರಿಯದೆ ಮತ್ತೆ

(ಮೊದಲ ಪುಟದಿಂದ) ಪರೀಕ್ಷೆ ಎದುರಿಸಿದ ಅವರು ಮೂರನೇ ಪ್ರಯತ್ನದಲ್ಲಿ 501ನೇ ರ್ಯಾಂಕ್ ಗಳಿಸಿದ್ದರು. ಈ ಸಾಧನೆಯೊಂದಿಗೆ ಪ್ರಸ್ತುತ ದೆಹಲಿಯಲ್ಲಿ ಮಿನಿಸ್ಟ್ರಿ ಆಫ್ ಡಿಫೆನ್ಸ್‍ನಲ್ಲಿ ತರಬೇತಿಗೆ ನಿಯೋಜಿತರಾಗಿದ್ದರೂ ಪಟ್ಟು ಬಿಡದೆ ನಾಲ್ಕನೇ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದಾರೆ. ಇದರಲ್ಲಿ 324ನೇ ಸ್ಥಾನ ಗಳಿಸಿರುವದು ಇವರ ಶೇಷ್ಠ ಸಾಧನೆಯಾಗಿದೆ. ಸದ್ಯದ ಮಟ್ಟಿಗೆ ಪ್ರಸ್ತುತ ಪಡೆಯುತ್ತಿರುವ ಮಿನಿಸ್ಟ್ರಿ ಆಫ್ ಡಿಫೆನ್ಸ್ ತರಬೇತಿಯನ್ನು ಮುಂದುವರಿಸಲಿರುವದಾಗಿ ‘ಶಕ್ತಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದ ಅವರು, 324ನೇ ಸ್ಥಾನದ ಸಾಧನೆಗೆ ಯಾವ ಸ್ಥಾನಮಾನ ಭವಿಷ್ಯದಲ್ಲಿ ಸಿಗಲಿದೆ ಎಂಬದನ್ನು ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿರುª Àದಾಗಿ ಹೇಳಿದರು.

ಬೈರಂಬಾಡದ ನಿವಾಸಿ ದೇವಣಗೇರಿ ಮುಕ್ಕಾಟಿರ ಪ್ರಕಾಶ್ ಬೆಳ್ಯಪ್ಪ ಹಾಗೂ ಜಮುನಾ ಅಕ್ಕಮ್ಮ (ತಾಮನೆ ಬಡುವಂಡ) ದಂಪತಿಯ ಪುತ್ರರಾಗಿರುವ ಪುನೀತ್ ಕುಟ್ಟಯ್ಯ ಅವರು ಈ ಹಿಂದೆ ಸೆಂಟ್ರಲ್ ಆರ್ಮ್‍ಡ್ ಫೋರ್ಸ್ ನಡೆಸಿದ ಪರೀಕ್ಷೆಯಲ್ಲಿಯೂ ರಾಷ್ಟ್ರಮಟ್ಟದಲ್ಲಿ 8ನೇ ಸ್ಥಾನಗಳಿಸಿ ಕೊಡಗಿಗೆ ಕೀರ್ತಿ ತಂದವರಾಗಿದ್ದಾರೆ.