ಬೇಗೂರು ಗ್ರಾಮದ ದಾದೂ ಪೂವಯ್ಯ ಅವರ ಮನೆಯ ಮೇಲೆ ಗುಂಡಿನ ಧಾಳಿ ನಡೆದ ಸುದ್ದಿ ತಿಳಿದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸಂಕೇತ್ ಪೂವಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿದರು.ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಪ್ಪಿತಸ್ಥರನ್ನು ಕೂಡಲೇ ಪತ್ತೆ ಹಚ್ಚುವಂತೆ ಒತ್ತಾಯಿಸಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸುವಂತೆ ಮನವಿ ಮಾಡಿದರು.ಪೂರಕ ಸ್ಪಂದನ ನೀಡಿದ ಎಸ್.ಪಿ.ರಾಜೇಂದ್ರ ಪ್ರಸಾದ್ ಇಂದು ರಾತ್ರಿಯಿಂದಲೇ ಪೊಲೀಸರ ನಿಯೋಜನೆ ಮಾಡುವದಾಗಿ ತಿಳಿಸಿದರು.

-ಹೆಚ್.ಕೆ.ಜಗದೀಶ್