ಗೋಣಿಕೊಪ್ಪ ವರದಿ, ಏ. 28: ಹಾಕಿ ಇಂಡಿಯ ಸಹಯೋಗದಲ್ಲಿ ಮದ್ಯ ಪ್ರದೇಶದ ಭೂಪಾಲ್‍ನಲ್ಲಿ ನಡೆದ ಬಾಲಕರ ಜೂನಿಯರ್ ಇಂಡಿಯಾ ನ್ಯಾಷನಲ್ ಚಾಂಪಿಯನ್‍ಶಿಪ್‍ನಲ್ಲಿ ಹಾಕಿ ಕೂರ್ಗ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. 3ನೇ ಸ್ಥಾನಕ್ಕೆ ಆಂದ್ರಪ್ರದೇಶದ ವಿರುದ್ದ ನಡೆದ ಪಂದ್ಯದಲ್ಲಿ ಹಾಕಿಕೂರ್ಗ್ 4-3 ಗೋಲುಗಳಿಂದ ಜಯ ಸಾಧಿಸಿತು. ಕೂರ್ಗ್ ಪರ ರಾಬಿನ್ 2, ಆಶಿಕ್ ಹಾಗೂ ಯತೀಶ್ ತಲಾ ಒಂದೊಂದು ಗೋಲು ಹೊಡೆದರು.
ಇದಕ್ಕೂ ಮೊದಲು ನಡೆದ ಸೆಮಿ ಫೈನಲ್‍ನಲ್ಲಿ ಹಾಕಿ ಕರ್ನಾಟಕ ವಿರುದ್ದ 2-4 ಗೋಲುಗಳಿಂದ ಸೋಲನುಭವಿಸಿ 3 ನೇ ಸ್ಥಾನಕ್ಕೆ ಪೈಪೋಟಿ ನಡೆಸಬೇಕಾಯಿತು.