ನಾಪೆÇೀಕ್ಲು, ಏ. 29: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಹದಿನಾಲ್ಕನೇ ದಿನದ ಪಂದ್ಯಾಟದಲ್ಲಿ 15 ತಂಡಗಳು ಮುನ್ನಡೆ ಸಾಧಿಸಿವೆ.ಭಾನುವಾರ ನಡೆದ ಪಂದ್ಯಾಟದಲ್ಲಿ ಐತಿಚಂಡ, ಮಾಚಂಗಡ, ಬಾಳೆಯಡ, ಕಾಂಡಂಡ, ಮುಂಡೋಟಿರ, ಕಡೇಮಾಡ, ಮೇಚಿಯಂಡ, ಮುಳ್ಳಂಡ, ಕೊಟ್ರಮಾಡ, ಕರೋಟಿರ, ಬೇರೆರ, ಚೋಕಿರ, ಕಳ್ಳಿಚಂಡ ಕರ್ತಮಾಡ, ನಂದಿನೆರವಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ತಾತಂಡ ಮತ್ತು ಐತಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಐತಿಚಂಡ ತಂಡವು ತಾತಂಡ ತಂಡವನ್ನು 5-1 ಗೋಲಿನಿಂದ ಮಣಿಸಿತು. ಐತಿಚಂಡ ತಂಡದ ಪರ ಪೂವಯ್ಯ ಎರಡು, ಚಂಗಪ್ಪ, ರಮೇಶ್, ದಿವಿನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ತಾತಂಡ ತಂಡದ ಪರ ಬೋಪಣ್ಣ ಒಂದು ಗೋಲು ದಾಖಲಿಸಿದರು. ಮಾಚಂಗಡ ಮತ್ತು ಬಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಂಗಡ ತಂಡವು ಬಲ್ಲಂಡ ತಂಡವನ್ನು 4-0 ಗೋಲಿನ ಅಂತರದಿಂದ ಸೋಲಿಸಿತು. ಮಾಚಂಗಡ ತಂಡದ ಪರ ಮೋಹಿತ್, ಭರತ್, ಕುಶ, ಅಯ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಬಾಳೆಯಡ ಮತ್ತು ಅಲ್ಲುಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾಳೆಯಡ ತಂಡವು ಅಲ್ಲುಮಾಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ಬಾಳೆಯಡ ತಂಡದ ಪರ ಪವನ್ ಸೋಮಯ್ಯ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಕಾಂಡಂಡ ಮತ್ತು ಮುಕ್ಕಾಟಿರ (ಮಾದಾಪುರ)ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಂಡಂಡ ತಂಡವು ಮುಕ್ಕಾಟಿರ ತಂಡವನ್ನು 4-0 ಗೋಲಿನ ಅಂತರದಿಂದ ಸೋಲಿಸಿತು. ಕಾಂಡಂಡ ತಂಡದ ಪರ ಬೋಪಯ್ಯ ಮೂರು, ಆದಿತ್ಯ ಅಪ್ಪಣ್ಣ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಚಂಗುಲಂಡ ಮತ್ತು ಮುಂಡೋಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮುಂಡೋಟಿರ ತಂಡವು ಚಂಗುಲಂಡ ತಂಡವನ್ನು 4-0 ಗೋಲಿನ ಅಂತರದಿಂದ ಮಣಿಸಿತು. ಮುಂಡೋಟಿರ ತಂಡದ ಪರ ಅಭಿಷೇಕ್ ಕಾರ್ಯಪ್ಪ ಮೂರು, ದರ್ಶನ್ ದೇವಯ್ಯ ಒಂದು ಗೋಲು ದಾಖಲಿಸಿದರು. ಕಡೇಮಾಡ ಮತ್ತು ಮೂಡೆರ ತಂಡಗಳ ನಡುವಿನ ಪಂದ್ಯದಲ್ಲಿ ಕಡೇಮಾಡ ತಂಡವು ಮೂಡೆರ ತಂಡವನ್ನು 2-0 ಗೋಲಿನ ಅಂತರದಿಂದ ಸೋಲಿಸಿತು. ಕಡೇಮಾಡ ತಂಡದ ಪರ ಮಂದಣ್ಣ, ಚರ್ಮಣ್ಣ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಚಪ್ಪಂಡ ಮತ್ತು ಮೇಚಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೇಚಿಯಂಡ ತಂಡವು ಚಪ್ಪಂಡ ತಂಡವನ್ನು 2-1 ಗೋಲಿನಿಂದ ಸೋಲಿಸಿತು. ಮೇಚಿಯಂಡ ತಂಡದ ಪರ ದೇವಯ್ಯ, ಸುನಿಲ್ ನಾಣಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಚಪ್ಪಂಡ ತಂಡದ ಪರ ಬೋಪಣ್ಣ ಒಂದು ಗೋಲು ದಾಖಲಿಸಿದರು. ಕುಂಡ್ರಂಡ ಮತ್ತು ಮುಳ್ಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಮುಳ್ಳಂಡ ತಂಡವು ಕುಂಡ್ರಂಡ ತಂಡವನ್ನು 4-2 ಗೋಲಿನಿಂದ ಸೋಲಿಸಿತು. ಮುಳ್ಳಂಡ ತಂಡದ ಪರ ಅಂಜನ್ ಎರಡು, ಕರಣ್, ಅಜಯ್ ತಲಾ ಒಂದೊಂದು ಗೋಲು ದಾಖಲಿಸಿದರು.

ಕುಂಡ್ರಂಡ ತಂಡದ ಪರ ಅನಿಲ್ ಮುದ್ದಪ್ಪ ಒಂದು ಗೋಲು ದಾಖಲಿಸಿದರು. ಬೊಳ್ಳೆರ ಮತ್ತು ಕೋಟ್ರಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕೋಟ್ರಮಾಡ ತಂಡವು ಬೊಳ್ಳೆರ ತಂಡವನ್ನು 1-0 ಗೋಲಿನ ಅಂತರದಿಂದ ಸೋಲಿಸಿತು. ತಂಡದ ಪರ ರೋಶನ್ ತಮ್ಮಯ್ಯ ಒಂದು ಗೋಲು ದಾಖಲಿಸಿದರು. ಅಣ್ಣಾಳಮಾಡ ಮತ್ತು ಕರೋಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕರೋಟಿರ ತಂಡವು ಅಣ್ಣಾಳಮಾಡ ತಂಡವನ್ನು 5-0 ಗೋಲಿನಿಂದ ಸೋಲಿಸಿತು. ತಂಡದ ಪರ ಬೋಪಣ್ಣ, ಪೂವಣ್ಣ ತಲಾ ಎರಡೆರಡು, ಸಚಿನ್ ಸೋಮಯ್ಯ ಒಂದು ಗೋಲು ದಾಖಲಿಸಿದರು. ಬೇರೆರ ಮತ್ತು ಮಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೇರೆರ ತಂಡವು ಮಲ್ಲಂಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ತಂಡದ ಪರ ಗಣಪತಿ ಒಂದು ಗೋಲು ದಾಖಲಿಸಿದರು. ಚೋಕಿರ ಮತ್ತು ಅಲ್ಲಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೋಕಿರ ತಂಡವು ಅಲ್ಲಾರಂಡ ತಂಡವನ್ನು ಟೈ ಬ್ರೇಕರ್‍ನ 4-2 ಗೋಲಿನಿಂದ ಪರಾಭವಗೊಳಿಸಿತು. ಚೋಕಿರ ತಂಡದ ಪರ ದೀಪಕ್, ಕರಣ್, ನರುಣ್ ನಾಚಪ್ಪ, ಅಕ್ಷಿತ್ ಚಿಟ್ಟಿಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಅಲ್ಲಾರಂಡ ತಂಡದ ಪರ ಗೌತಮ್, ಕಿರಣ್ ತಲಾ ಒಂದೊಂದು ಗೋಲು ದಾಖಲಿಸಿದರು. ಕಳ್ಳಿಚಂಡ ಮತ್ತು ಬೊಳ್ಳಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಳ್ಳಿಚಂಡ ತಂಡವು ಬೊಳ್ಳಿಯಂಡ ತಂಡವನ್ನು 5-0 ಗೋಲಿನ ಅಂತರದಿಂದ ಸೋಲಿಸಿತು. ತಂಡದ ಪರ ಸಾವನ್, ಬೋಪಣ್ಣ ತಲಾ ಎರಡೆರಡು ಗೋಲು, ದರ್ಶನ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕರ್ತಮಾಡ (ಬಿರುನಾಣಿ) ತಂಡ ದಾಸಂಡ ತಂಡವನ್ನು ಟೈ ಬ್ರೇಕರ್‍ನಲ್ಲಿ 3-2 ಗೋಲಿನಿಂದ ಸೋಲಿಸಿತು. ನಂದಿನೆರವಂಡ ತಂಡ ಐನಂಡ ತಂಡವನ್ನು ಟೈಬ್ರೇಕರ್‍ನಲ್ಲಿ 3-2 ಗೋಲಿನಿಂದ ಮಣಿಸಿತು.