ಮಡಿಕೇರಿ, ಏ. 29: ಚುನಾವಣಾ ಪ್ರಣಾಳಿಕೆಯಲ್ಲಿ ಕೃಷಿಕರ ಮನವಿಗಳನ್ನು ಸೇರಿಸುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಅಧ್ಯಕ್ಷ ವೀರಪ್ಪ ಮೊಯ್ಲಿ ಅವರಿಗೆ ಈ ಕೆಳಗಿನಂತೆ ಮನವಿ ಮಾಡಿದೆ.
ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ತಂದುಕೊಡುವದು. ಬರ ಪರಿಸ್ಥಿತಿ ಇರುವದರಿಂದ ಕಾಫಿ ಬೆಳೆಗಾರರ ಎಲ್ಲಾ ಸಾಲ ಮನ್ನಾ ಮಾಡುವದು. ಕಾಡಾನೆ ಮತ್ತು ಕಾಡು ಪ್ರಾಣಿಗಳಿಂದ ರೈತರ ಬೆಳೆ ಮತ್ತು ಜೀವವನ್ನು ರಕ್ಷಿಸುವದು. ಕೃಷಿಕರಲ್ಲಿ ತಾರತಮ್ಯ ತೋರದೆ ಕಾಫಿ ಬೆಳೆಗಾರರಿಗೂ 10 ಅಶ್ವಶಕ್ತಿಯ ವಿದ್ಯುತ್ ಚಾಲಿತ ಮೋಟಾರ್‍ಗೆ ಉಚಿತವಾಗಿ 24 ಗಂಟೆ ವಿದ್ಯುತ್ ನೀಡುವದು. ಕೃಷಿ ಪತ್ತಿನ ಸಹಕಾರ ಸಂಸ್ಥೆಗಳಲ್ಲಿ 10 ಲಕ್ಷದವರೆಗೆ ಪಡೆದ ಬೆಳೆ ಸಾಲಕ್ಕೆ ಶೇ. 3 ರ ಬಡ್ಡಿ ದರದಲ್ಲಿ ಸಾಲ ನೀಡುವದು. ಕೃಷಿಕರಿಗೆ ಅವಶ್ಯಕವಾಗಿರುವ ಕಂದಾಯ ದಾಖಲಾತಿಗಳೆಲ್ಲವನ್ನೂ ಒಂದೇ ನಮೂನೆಯಲ್ಲಿ ನಮೂದಿಸುವ ವ್ಯವಸ್ಥೆಯನ್ನು ಜಾರಿಗೊಳಿಸುವದು. ಸಹಕಾರ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವದು.
ವಿವರಣೆ: ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ತಂದುಕೊಡುವದು. ಸರ್ಕಾರ ಸರ್ಕಾರಿ ಜಾಗದಲ್ಲಿ ಅನಧಿಕೃತ ಸಾಗುವಳಿ ಜಮೀನನ್ನು ತೆರವು ಗೊಳಿಸಲು ಮುಂದಾಗಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸಮಸ್ತ ಕಾಫಿ ಬೆಳೆಗಾರರ ಪರವಾಗಿ ಒಕ್ಕೂಟ ಈ ಕೆಳಕಂಡ ಬೇಡಿಕೆಗಳನ್ನು ಮುಂದಿಡುತ್ತಿದೆ.
ಪರಿಗಣಿಸಬಹುದಾದ ಷರತ್ತುಗಳು: ಕೇರಳ ಮತ್ತು ತಮಿಳುನಾಡು ರಾಜ್ಯದಲ್ಲಿ ಸರ್ಕಾರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಿರುವಂತೆ ಕರ್ನಾಟಕ ರಾಜ್ಯದಲ್ಲೂ ಸರ್ಕಾರಿ ಸಾಗುವಳಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಬೇಕು. 192/ಂ ಭೂಕಬಳಿಕೆ ಕಾಯ್ದೆ ತಿದ್ದುಪಡಿ ತಂದು ರಾಜ್ಯದಾದ್ಯಂತ ಗ್ರಾಮೀಣ ಭಾಗದ ಕೃಷಿ ಜಮೀನನ್ನು ಹೊರಗಿಡಬೇಕು. ರಾಜ್ಯದಾದ್ಯಂತ ರೈತ ಬೆಳೆಗಾರರು 5 ಎಕರೆವರೆಗೆ ಒತ್ತುವರಿ ಮಾಡಿರುವ ಜಮೀನನ್ನು ಸಕ್ರಮಗೊಳಿಸುವದು. ಪ್ರತಿ ಎಕರೆಗೆ ವಾರ್ಷಿಕ ರೂ. 1 ಸಾವಿರಗಳನ್ನು ಗುತ್ತಿಗೆ ಶುಲ್ಕವಾಗಿ ನಿಗದಿಗೊಳಿಸಬೇಕು. 5 ಎಕರೆಯಿಂದ 10 ಎಕರೆವರೆಗೆ ಪ್ರತಿ ಎಕರೆಗೆ ರೂ. 5 ಸಾವಿರಗಳನ್ನು ಗುತ್ತಿಗೆ ಶುಲ್ಕವಾಗಿ ನಿಗದಿಗೊಳಿಸಬೇಕು. 10 ಎಕರೆಯಿಂದ 25 ಎಕರೆವರೆಗೆ ಪ್ರತಿ ಎಕರೆಗೆ ರೂ. 10 ಸಾವಿರಗಳನ್ನು ಗುತ್ತಿಗೆ ಶುಲ್ಕವಾಗಿ ನಿಗದಿ ಗೊಳಿಸಬೇಕು. 25 ಎಕರೆ ಒಳಗಿನ ಒತ್ತುವರಿದಾರರಿಗೆ 90 ವರ್ಷಗಳ ಅವಧಿಗೆ ಕೃಷಿ ಜಮೀನನ್ನು ಗುತ್ತಿಗೆ ಆದಾರದಲ್ಲಿ ನೀಡಿ, ರೂ. 5 ಸಾವಿರಗಳನ್ನು ಮೌಲಿಕ ಬೆಲೆಯನ್ನಾಗಿ (Pಡಿemium) ಒತ್ತುವರಿದಾರರಿಂದ ಪಡೆಯಬೇಕು. 25 ಎಕರೆಗೆ ಮೇಲ್ಪಟ್ಟು ಪ್ರತಿ ಎಕರೆಗೆ ರೂ. 15 ಸಾವಿರಗಳನ್ನು ಗುತ್ತಿಗೆ ಶುಲ್ಕವಾಗಿ ನಿಗದಿಗೊಳಿಸಬೇಕು ಹಾಗೂ 90 ವರ್ಷಗಳ ಅವಧಿಗೆ ಕೃಷಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಿ, ಪ್ರತಿ ಎಕರೆಗೆ ಶೇ. 25 ರಷ್ಟನ್ನು ಕಾಡು ಜಾತಿಯ ಮರಗಳನ್ನು ಬೆಳೆಸುವದರ ಜೊತೆಗೆ, ಕಾಡನ್ನು ಉಳಿಸುವಂತೆ ಮಾಡುವದು ಹಾಗೂ ರೂ. 15000 ಗಳನ್ನು ಮೌಲಿಕ ಬೆಲೆಯನ್ನಾಗಿ (Pಡಿemium) ಒತ್ತುವರಿದಾರರಿಂದ ಪಡೆಯುವದು. ಕಾಫಿ ಉದ್ಯಮದಲ್ಲಿ, ಕಾಫಿ ಗಿಡಗಳನ್ನು ನೆಟ್ಟು ಬೆಳೆಸಲು ಪ್ರತಿ ವರ್ಷಕ್ಕೆ ರೂ. 50000 ವೆಚ್ಚ ಆಗಲಿದ್ದು. ಅದು ಫಸಲಿಗೆ ಬರಲು 15 ವರ್ಷಗಳು ಬೇಕು.
ಜೊತೆಗೆ ಕಾಫಿ ಬೆಳೆಯು ಬಹು ವಾರ್ಷಿಕ ಹಾಗೂ ದೀರ್ಘಕಾಲಿಕ ಬೆಳೆಯಾಗಿದ್ದು, 15 ವರ್ಷಕ್ಕೆ ರೂ. 7,50,000 ಖರ್ಚಾಗುತ್ತದೆ. ಹೀಗೆ ಅಧಿಕ ಬಂಡವಾಳದ ಕಾಫಿ ಉದ್ಯಮಕ್ಕೆ ಬಂಡವಾಳ ವಿನಿಯೋಗಿಸಲು ರೈತ ಬೆಳೆಗಾರರು ಬ್ಯಾಂಕ್‍ಗಳಿಂದ ಸಾಲವನ್ನು ಪಡೆದಿರುತ್ತಾರೆ.
ಆದ್ದರಿಂದ ಹಾಕಿದ ಬಂಡವಾಳವನ್ನು ತೆಗೆದುಕೊಳ್ಳಲು ದೀರ್ಘ ಸಮಯ ಬೇಕಾಗಿರುವದ ರಿಂದ, ಈ ಮೇಲ್ಕಂಡ ಅಂಶಗಳನ್ನು ಆದರಿಸಿ, 90 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ನೀಡಬೇಕು. ಕಾಫಿ ಮಂಡಳಿಯು 10 ಹೆಕ್ಟೇರ್‍ವರೆಗಿನ ಬೆಳೆಗಾರರನ್ನು ಸಣ್ಣ ಬೆಳೆಗಾರರೆಂದು ಗುರುತಿಸಿ, ಅವರುಗಳಿಗೆ ಕಾಫಿಯ ಗುಣಮಟ್ಟವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಕಣ ಗೋದಾಮು, ಮನೆ, ರಸ್ತೆ, ಕೂಲಿಲೈನು, ಪಲ್ಪರ್ ಘಟಕ, ಕೆರೆ ಮುಂತಾದ ಅಗತ್ಯ ಮೂಲಭೂತ ಸೌಕರ್ಯಕ್ಕಾಗಿ, ಸಹಾಯ ಧನವನ್ನು ನೀಡುತ್ತಿದೆ. ಈ ಮೇಲ್ಕಂಡ ಅಗತ್ಯ ಮೂಲಭೂತ ಸೌಕರ್ಯಕ್ಕಾಗಿ ಸರ್ಕಾರಿ ಜಮೀನು ಒತ್ತುವರಿಯಾಗಿರುವದರಿಂದ, ಮೇಲ್ಕಂಡ ಉದ್ದೇಶಕ್ಕೆ ಒತ್ತುವರಿ ಯಾಗಿರುವ 2 ಹೆಕ್ಟೇರ್‍ವರೆಗಿನ ಜಮೀನನ್ನು ಸಕ್ರಮಗೊಳಿಸಬೇಕಾಗಿದೆ.
ಬರ ಪರಿಸ್ಥಿತಿ ಇರುವದರಿಂದ ಕಾಫಿ ಬೆಳೆಗಾರರ ಎಲ್ಲಾ ಸಾಲ ಮನ್ನಾ ಮಾಡುವದು: ನಿರಂತರವಾದ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ತುತ್ತಾಗಿ ಕಾಫಿ ಬೆಳೆಗಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವದರಿಂದ ಇವರುಗಳು ಬ್ಯಾಂಕುಗಳಲ್ಲಿ ಪಡೆದಿರುವ ಸಾಲವನ್ನು ಸಂಪೂರ್ಣ ವಾಗಿ ಮನ್ನಾ ಮಾಡಬೇಕಾಗಿದೆ.
ಕಾಡಾನೆ ಮತ್ತು ಕಾಡು ಪ್ರಾಣಿಗಳಿಂದ ರೈತರ ಬೆಳೆ ಮತ್ತು ಜೀವವನ್ನು ರಕ್ಷಿಸುವದು: ಕಾಫಿ ಬೆಳೆಯುವ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿಯು ನಿರಂತರವಾಗಿ ಮುಂದುವರೆದಿದ್ದು, ಧಾಳಿಗೆ ಸಿಲುಕಿ ಜನತೆ ದಿನನಿತ್ಯ ಸಾವನಪ್ಪುತ್ತಿದ್ದಾರೆ ಹಾಗೂ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳು ಹಾಗೂ ರೈತರ ಬೆಳೆಗಳು ನಾಶ ಹೊಂದುತ್ತಿದ್ದು, ಇಲ್ಲಿನ ಜನತೆ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ.
ಕಾಡಾನೆಗಳ ಹಾವಳಿಯ ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಭಾಗಗಳಲ್ಲಿ ಹುಲಿ, ಚಿರತೆ, ಜಿಂಕೆ, ಮಂಗಗಳು, ಕಾಡು ಹಂದಿ ಮುಂತಾದ ಕಾಡು ಪ್ರಾಣಿಗಳ ಹಾಗೂ ಪಕ್ಷಿಯಾದ ನವಿಲಿನ ಹಾವಳಿಯು ಅಧಿಕಗೊಂಡಿದ್ದು ರೈತರಲ್ಲಿ ಆತಂಕ ಸೃಷ್ಟಿಸಿವೆ. ಆದ್ದರಿಂದ ಕೂಡಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಹಾಗೂ ಕಾಡು ಪ್ರಾಣಿಗಳನ್ನು ಹಿಡಿದು ಸ್ಥಳಾಂತರಿ ಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿಯೂ ಹಾಗೂ ಕಾಡಾನೆ ಹಾಗೂ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು, ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಿ, ಜನವಸತಿ ಪ್ರದೇಶ ಹಾಗೂ ರೈತರ ಹಿಡುವಳಿ ಜಮೀನುಗಳಿಗೆ ಕಾಡಾನೆ ಹಾಗೂ ಕಾಡು ಪ್ರಾಣಿಗಳು ಪ್ರವೇಶಿಸದಂತೆ, ಸೂಕ್ತ ಕ್ರಮ ಕೈಗೊಳ್ಳುವದು.
ಕೃಷಿಕರಲ್ಲಿ ತಾರತಮ್ಯ ತೋರದೆ ಕಾಫಿ ಬೆಳೆಗಾರರಿಗೂ 10 ಅಶ್ವಶಕ್ತಿಯ ವಿದ್ಯುತ್ ಚಾಲಿತ ಮೋಟಾರ್‍ಗೆ ಉಚಿತವಾಗಿ 24 ಗಂಟೆ ವಿದ್ಯುತ್ ನೀಡುವದು: ಕರ್ನಾಟಕದಲ್ಲಿ 18 ಲಕ್ಷ ಪಂಪ್‍ಸೆಟ್ ಬಳಕೆದಾರರು ಐಖಿ4ಂ ನಲ್ಲಿದ್ದು, 3,828 ಸಣ್ಣ ಐ.ಪಿ. ಸೆಟ್ ಬಳಕೆದಾರರನ್ನು ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಈ ಮೂರು ಜಿಲ್ಲೆಗಳಲ್ಲಿ ಐಖಿ4ಅ ನಲ್ಲಿ ಸೇರಿಸಿ ವರ್ಗೀಕರಿಸಲಾಗಿದೆ.
ಈ ಐಖಿ4ಅ ನಲ್ಲಿ ಬರುವ ಪಂಪ್‍ಸೆಟ್ ಬಳಕೆದಾರರೆಲ್ಲರೂ ಅತಿ ಸಣ್ಣ ಬಳಕೆದಾರರಾಗಿದ್ದು, 10 ಅಶ್ವಶಕ್ತಿಗಿಂತ ಕಡಿಮೆಯ ಪಂಪ್‍ಸೆಟ್ ವುಳ್ಳವರಾಗಿದ್ದು, ಇವರುಗಳನ್ನು ಸಹ ಐಖಿ4ಂ ನಲ್ಲಿ ಸೇರಿಸಬೇಕಾಗಿ ಕೋರಿಕೊಳ್ಳುತ್ತೇವೆ. ಇದರಿಂದ ಎಲ್ಲಾ ಕೃಷಿ ಬೆಳೆಗಳನ್ನು ಒಟ್ಟುಗೂಡಿಸಿ ದಂತಾಗುತ್ತದೆ.
ಕೃಷಿ ಪತ್ತಿನ ಸಹಕಾರ ಸಂಸ್ಥೆಗಳಲ್ಲಿ 10 ಲಕ್ಷದವರೆಗೆ ಪಡೆದ ಬೆಳೆಸಾಲಕ್ಕೆ ಶೇ. 3 ರ ಬಡ್ಡಿ ದರದಲ್ಲಿ ಸಾಲ ನೀಡುವದು: ರಾಜ್ಯದ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಲ್ಲಿ ರೂ. 3 ಲಕ್ಷದವರೆಗೆ ಬೆಳೆ ಸಾಲ ಪಡೆದ ಬೆಳೆಗಾರರಿಗೆ ಶೂನ್ಯ ಬಡ್ಡಿ ದರವನ್ನು ವಿಧಿಸುತ್ತಿದ್ದು, ರೂ. 3 ಲಕ್ಷದ ಮೇಲ್ಪಟ್ಟು ರೂ. 10 ಲಕ್ಷದವರೆಗೆ ಸಾಲ ಪಡೆದ ಬೆಳೆಗಾರರಿಗೆ ಸಂಪೂರ್ಣ ಹಣಕ್ಕೆ ಸಾಮಾನ್ಯ ಬಡ್ಡಿ ದರವನ್ನು (ಶೆ. 11.25) ವಿಧಿಸಲಾಗುತ್ತಿದೆ. ಇದರಿಂದ ಬೆಳೆಗಾ ರರಿಗೆ ಸಾಕಷ್ಟು ಹೊರೆ ಯಾಗಲಿದೆ. ಆದ್ದರಿಂದ 3 ಲಕ್ಷದ ಮೇಲ್ಪಟ್ಟು ರೂ. 10 ಲಕ್ಷದವರೆಗೆ ಸಾಲ ಪಡೆದ ಸಣ್ಣ ಬೆಳೆಗಾರರಿಗೆ (10 ಹೆಕ್ಟೇರ್ ತೋಟ ಹೊಂದಿದ ಬೆಳೆಗಾರರನ್ನು ಕಾಫಿ ಮಂಡಳಿ ಸಣ್ಣ ಬೆಳೆಗಾರರೆಂದು ಘೋಷಿಸಿದೆ) ಈ ಹಿಂದೆ ಇದ್ದಂತೆ ಶೇ. 3 ರ ಬಡ್ಡಿ ದರದಲ್ಲಿ ಸಾಲ ದೊರಕಿಸಿ ಕೊಡುವದು.
ಕೃಷಿಕರಿಗೆ ಅವಶ್ಯಕವಾಗಿರುವ ಕಂದಾಯ ದಾಖಲಾತಿಗಳೆಲ್ಲವನ್ನೂ ಒಂದೇ ನಮೂನೆಯಲ್ಲಿ ನಮೂದಿ ಸುವ ವ್ಯವಸ್ಥೆಯನ್ನು ಜಾರಿಗೊಳಿ ಸುವದು: ಕಂದಾಯ ಇಲಾಖೆಯಲ್ಲಿ ಕೃಷಿಕರ ಜಮೀನುಗಳಿಗೆ ಸಂಬಂಧಿಸಿ ದಂತೆ ನೀಡಲಾಗುತ್ತಿರುವ ಪಹಣಿ, ಇ.ಸಿ, ಮ್ಯುಟೇಷನ್, ಇನ್ನೂ ಮುಂತಾದ ದಾಖಲೆಗಳೆಲ್ಲವೂ ಒಂದೇ ನಮೂನೆಯಲ್ಲಿ ನಮೂದಾಗುವಂತೆ ಜಾರಿ ಮಾಡಬೇಕಾಗಿ ಮನವಿ.
ಸಹಕಾರ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವದು: ರೈತ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳಿಗೆ ಹಣವನ್ನು ಪೂರೈಸಿ, ಸಹಕಾರಿ ಸಂಸ್ಥೆಗಳ ಆರ್ಥಿಕ ವಹಿವಾಟುಗಳು ಸುಗಮವಾಗಿ ಸಾಗಲು ಹಾಗೂ ಪುನಶ್ಚೇತನಗೊಳ್ಳಲು ನೆರವು ನೀಡಬೇಕೆಂದು ಒಕ್ಕೂಟದ ಅಧ್ಯಕ್ಷ ಬಿ.ಎಸ್. ಜೈರಾಂ, ಕಾರ್ಯದರ್ಶಿ ಯು.ಎಂ. ತೀರ್ಥಮಲ್ಲೇಶ್ ತಿಳಿಸಿದ್ದಾರೆ.