ವೀರಾಜಪೇಟೆ, ಏ. 29: ಜನತಾದಳ ನಗರ ಸಮಿತಿ ವತಿಯಿಂದ ಇಂದು ಅಧ್ಯಕ್ಷ ಪಿ.ಎ. ಮಂಜುನಾಥ್ ನೇತೃತ್ವದಲ್ಲಿ ಅಭ್ಯರ್ಥಿ ಸಂಕೇತ್ ಪೂವಯ್ಯ ಪರ ಮನೆ ಮನೆ ಪ್ರಚಾರಕ್ಕೆ ಇಲ್ಲಿನ ಗಾಂಧಿನಗರದಿಂದ ಚಾಲನೆ ನೀಡಲಾಯಿತು.ನಗರ ಸಮಿತಿಯ ಮಹಿಳಾ ಘಟಕ ಸೇರಿದಂತೆ ಪಕ್ಷದ ಕಾರ್ಯಕರ್ತರು ಜೆ.ಡಿಎಸ್. ಪಕ್ಷದ ಕುರಿತು ಮತದಾರರಿಗೆ ಅರಿವು ಮೂಡಿಸಿದರು.ಮನೆ ಮನೆ ಪ್ರಚಾರದ ಸಂದರ್ಭದಲ್ಲಿ ಅಮ್ಮಂಡ ವಿವೇಕ್, ರಾಕೇಶ್ ಬಿದ್ದಪ್ಪ, ರಂಜನ್ ನಾಯ್ಡು, ನಿತೀನ್, ಸಿ.ಗಣಪತಿ, ಎಂ.ಮದನ್, ಫಾಜಿಲ್, ಪ್ರೀತೇಶ್ ರೈ, ನಗರ ಮಹಿಳಾ ಘಟಕದ ಅಧ್ಯಕ್ಷೆ ಸುಮಾ, ಕಮಲ, ಶಾಂತಾ ಸರಸ್ವತಿ, ವೀಣಾ ಮತ್ತಿತರರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಬಳಿಕ ಕಾರ್ಯಕರ್ತರ ತಂಡ ಅರಸುನಗರಕ್ಕೆ ತೆರಳಿ ಪಕ್ಷದ ಪರ ಪ್ರಚಾರ ಮುಂದುವರೆಸಿದರು.