ವೀರಾಜಪೇಟೆ, ಏ. 29 : ಕಳೆದ 12 ಚುನಾವಣೆಗಳಲ್ಲೂ ಜನತೆಯ ಸೇವೆ ಮಾಡುವ ನೆಪದಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಜನ ಸೇವೆ ಮಾಡದೆ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸದೆ ಮುಗ್ಧ ಮತದಾರರನ್ನು ವಂಚಿಸಿದ್ದಾರೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ದೂರಿದರು. ಮೈತಾಡಿ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನತಾದಳದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಜನತಾದಳ ಪಕ್ಷ ಅಧಿಕಾರಕ್ಕೆ ಬಂದರೆ ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ನೇರ ಸ್ಪಂದನಕ್ಕೆ ಅವಕಾಶ ಸಿಗಲಿದೆ ಎಂದರು.ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್ ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‍ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಮುಕ್ತವಾಗಿ ಗೆಲುವು ಸಾಧಿಸಲು ಸಾಧ್ಯವಾಗಲಿದೆ. ಪಕ್ಷದ ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯನ್ನು ಮೈಲಿಗೆ ಮಾಡುವ ಹುನ್ನಾರದಲ್ಲಿದೆ ಎಂದು ಆರೋಪಿಸಿ ದರು. ಸಭೆಯನ್ನು ದ್ದೇಶಿಸಿ ಬಾಳೆಕುಟ್ಟೀರ ದಿನಿ, ಅಮ್ಮಂಡ ವಿವೇಕ್ ಮಾತ ನಾಡಿದರು. ವೇದಿಕೆಯಲ್ಲಿ ಅಮ್ಮಂಡ ಸುಬ್ಬಯ್ಯ, ಪೂವಯ್ಯ, ಇಟ್ಟೀರ ಸಂಪತ್, ಕುಯ್ಮಂಡ ರಾಕೇಶ್, ಪಂದ್ಯಂಡ ರವಿ, ಸಣ್ಣುವಂಡ ರಾಜ, ಕುವಲೆ ಸರ್ಫುದ್ದೀನ್, ಅಮ್ಮಂಡ ಪೆಮ್ಮಯ್ಯ, ಮಾತಂಡ ಭಾಗ್ಯ ಉಪಸ್ಥಿತರಿದ್ದರು. ಬಹಿರಂಗ ಸಭೆಯ ನಂತರ ಸಂಕೇತ್ ಪೂವಯ್ಯ ಹಾಗೂ ಕಾರ್ಯಕರ್ತರು ಮೈತಾಡಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.