ಕೂಡಿಗೆ, ಏ. 29: ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮೊದಲಿನಿಂದ ಲೂ ಹೆಚ್ಚು ಗಮನ ಹರಿಸುತ್ತಾ ಬಂದಿದ್ದು, ಜಿ.ಪಂ. ಅಧ್ಯಕ್ಷೆ ಹಾಗೂ ಸದಸ್ಯರಾಗಿ ಉತ್ತಮ ಕೆಲಸಗಳನ್ನು ನಿರ್ವಹಿಸಿರುತ್ತೇನೆ. ಅದೇ ಮಾದರಿ ಯಲ್ಲಿ ಜಿಲ್ಲೆಯ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಚಿಂತನೆ ಮಾಡಲಾಗುವದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಚುನಾವಣಾ ಪ್ರಚಾರ ಸಭೆಯಲ್ಲಿ ನುಡಿದರು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ಸಮಿತಿಯ ಸದಸ್ಯ ಟಿ.ಪಿ. ಹಮೀದ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜಿಲ್ಲಾ ಎಸ್‍ಟಿ ಘಟಕದ ಅಧ್ಯಕ್ಷ ವಸಂತ್, ಎಸ್‍ಸಿ ಘಟಕದ ಅಧ್ಯಕ್ಷ ಜಯೇಂದ್ರ, ಗ್ರಾ.ಪಂ. ಸದಸ್ಯ ಪುಷ್ಪ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.