ಮಡಿಕೇರಿ, ಏ. 29: ಮೇಕೇರಿಯ ಕಿಝರ್ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆದಿದ್ದು, ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮಸೀದಿಯ ಮುಂದಿನ ಮೂರು ವರ್ಷದ ಅವಧಿಯ ವಾರ್ಷಿಕ ಮಹಾಸಭೆ ತಾ. 24 ರಂದು ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆದು ಮಸೀದಿಗೆ ನೂತನ ಸಮಿತಿಯನ್ನು ರಚಿಸಲಾಯಿತು.ನೂತನ ಅಧ್ಯಕ್ಷರಾಗಿ ಎಂ.ಕೆ. ಸಲೀಂ, ಗೌರವ ಅಧ್ಯಕ್ಷರಾಗಿ ಎಂ.ಜೆ. ಹಸನ್ ಭಾಷಾ, ಉಪಾಧ್ಯಕ್ಷರಾಗಿ ಎಂ.ಯು. ಹನೀಫ್, ಕಾರ್ಯದರ್ಶಿಯಾಗಿ ಎಂ.ಈ. ಅಮೀರ್, ಎಂ.ಎಲ್. ರಹೀಮ್, ಮೊಹಮ್ಮದ್ ಹ್ಯಾರೀಸ್, ಖಜಾಂಚಿಯಾಗಿ ಸೈಯ್ಯದ್ ಜಮರುದ್ದೀನ್, ಉಪಕಾರ್ಯದರ್ಶಿಯಾಗಿ ಎಂ.ಯು. ರಫೀಕ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕೆ.ಪಿ. ಹ್ಯಾರೀಸ್, ಪಯ್ಯತಡ್ಕ ಇಬ್ರಾಹೀಂ, ಅಬ್ದುಲ್ ಗಫಾರ್, ಟಿ.ಯಂ. ಉಸ್ಮಾನ್, ಎಂ.ಎಸ್. ರಫೀಕ್, ಎಂ.ಐ. ಅಬೂಬಕರ್ ಆಯ್ಕೆಗೊಂಡರು. ಸ್ವಾಗತ ಹಾಗೂ ವಂದನಾರ್ಪಣೆಯನ್ನು ಹಮೀದ್ ಮುಸ್ಲಿಯಾರ್ ನೆರವೇರಿಸಿದರು.