ಗೋಣಿಕೊಪ್ಪಲು,ಏ.29: ಕೇಂದ್ರದ ಮೋದಿ ಸರ್ಕಾರ ಆಮದು ನೀತಿಯ ಮೇಲೆ ನಿರ್ಬಂಧ ವಿಧಿಸದ ಕಾರಣ ಇಂದು ಕೊಡಗಿನ ಕಾಫಿ ಹಾಗೂ ಕಾಳುಮೆಣಸು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಬೆಳೆಗಾರರ ಸಾಲಮನ್ನಾ, ಕಾಫಿ ಉದ್ಯಮದ ಪುನಶ್ಚೇತನಕ್ಕೆ ಸಬ್ಸಿಡಿ ಸೌಲಭ್ಯ ಕಲ್ಪಿಸಿತ್ತು. ಆದರೆ, ಮೋದಿ ಸರ್ಕಾರ ರೈತರು, ಕಾಫಿ ಕೃಷಿಕರ ಸಂಕಷ್ಟಕ್ಕೆ ಸ್ಪಂದಿಸದೆ ಸಬ್ಸಿಡಿಯನ್ನೂ ಕೈಬಿಟ್ಟು ಅನ್ಯಾಯವೆಸಗಿರುವದಾಗಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ದೋಷಾರೋಪಣೆ ಮಾಡಿದರು. ಇಂದು ಹಾತೂರು ಗ್ರಾ.ಪಂ.ವ್ಯಾಪ್ತಿಯ ಕೈಕೇರಿ ಹರಿಜನ ಕಾಲೋನಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸಿದ್ಧಗೊಳಿಸಿದ ತೆರೆದ ಜೀಪಿನಲ್ಲಿ ಬಹಿರಂಗ ಚುನಾವಣಾ ಪ್ರಚಾರ ಆರಂಭಿಸಿದರು.
ಪೆÇನ್ನಂಪೇಟೆ ಪ್ರತ್ಯೇಕ ತಾಲೂಕಿಗಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ತಾನೂ ತಿಂಗಳಾನುಗಟ್ಟಲೆ ಹೋರಾಟ ನಡೆಸಿದ್ದೆ. ಹುಣಸೂರಿಗೆ ಕೊಂಗಾಣ ನೀರು ಸರಬರಾಜು ಯೋಜನೆ ಜಾರಿ ವಿಚಾರದಲ್ಲಿಯೂ ಕಾಂಗ್ರೆಸ್ ಪಕ್ಷದ ಹುಣಸೂರು ಶಾಸಕರ ವಿರುದ್ಧ ಹೋರಾಟ ಮಾಡಿದ್ದೆ. ಕಂಬದ ಕಡ ಆಣೆಕಟ್ಟು ಹೋರಾಟದಿಂದ ತಾನು ಜಿಲ್ಲೆಯ ಪರವಾದ ಹೋರಾಟ ದಲ್ಲಿಯೇ ತೊಡಗಿಸಿ ಕೊಂಡು ಬಂದಿದ್ದೇನೆ ಎಂದರು.
ರಾಜ್ಯದ ಬಡಜನತೆಯ ಸಂಕಷ್ಟವನ್ನು ಆಲಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಹಲವು ಜನಪ್ರಿಯ ಕಾರ್ಯಕ್ರಮ ಜಾರಿಗೆ ತಂದಿದ್ದು, ಯಾರದೇ ವ್ಯಕ್ತಿಗತ ತೇಜೋವಧೆ ತನ್ನ ಗುರಿಯಲ್ಲ. ಸಿದ್ಧರಾಮಯ್ಯ ಸರ್ಕಾರ ಮತ್ತೆ ಬರಲು ತನಗೆ ಮತಚಲಾಯಿಸಲು ಮನವಿ ಮಾಡಿದರು.
ಕಾಂಗ್ರೆಸ್ ಪ್ರಮುಖ ನೆರವಂಡ ಉಮೇಶ್ ಸಿದ್ದರಾಮಯ್ಯ ಸರ್ಕಾರ ಉಳಿಸಿಕೊಳ್ಳಲು ಸಹಕಾರ ನೀಡಲು ಮನವಿ ಮಾಡಿದರು. ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಪ್ರಗತಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಲು ಮನವಿ ಮಾಡಿದರು.
ಇಂದು ಅರುಣ್ಮಾಚಯ್ಯ ತಮ್ಮ ಬೆಂಬಲಿಗರೊಂದಿಗೆ ಕೈಕೇರಿ, ಗೋಣಿಕೊಪ್ಪಲು, ದೇವರಪುರ, ತಿತಿಮತಿ, ಮಾಯಮುಡಿ, ಅರುವತ್ತೊಕ್ಕಲುವಿನಲ್ಲಿ ಪ್ರಚಾರ ಕಾರ್ಯ ಕೈಗೊಂಡರು.
ಪೆÇನ್ನಂಪೇಟೆ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಕುಸುಮಾ ಜೋಯಪ್ಪ, ಕುಪ್ಪಂಡ ಜಯ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ರೆಹಮಾನ್ ಬಾಪು, ಮಾಜಿ ಕಾಫಿ ಮಂಡಳಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ, ಹಾತೂರುವಿನ ರೂಪಾ ಭೀಮಯ್ಯ, ಮತ್ರಂಡ ದಿಲ್ಲು, ಕೊಲ್ಲೀರ ಬೋಪಣ್ಣ, ಅಜಿತ್ ಅಯ್ಯಪ್ಪ, ಓಬಿಸಿ ಗೋಣಿಕೊಪ್ಪಲು ನಗರಾಧ್ಯಕ್ಷ ನಾರಾಯಣ ಸ್ವಾಮಿ ನಾಯ್ಡು, ಕಾಂಗ್ರೆಸ್ ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ, ಕುಲ್ಲಚಂಡ ಗಣಪತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿ.ಎನ್.ಪ್ರಕಾಶ್, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಅರವಿಂದ್ ಕುಟ್ಟಪ್ಪ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಸರಚಂಗಪ್ಪ, ಸಾಜಿ ಅಚ್ಯುತ್ತನ್, ತಾ.ಪಂ.ಸದಸ್ಯೆ ಆಶಾಜೇಮ್ಸ್, ಮುಂತಾದವರು ಉಪಸ್ಥಿತರಿದ್ದರು. ಇಂದು ಗೋಣಿಕೊಪ್ಪಲು ಪ್ರಚಾರ ಸಂದರ್ಭ ಬಿಜೆಪಿಯ ಸಕ್ರಿಯ ಕಾರ್ಯಕರ್ತ, ವಕೀಲ ಸಂದೇಶ್ ನೆಲ್ಲಿತ್ತಾಯ ಕಾಂಗ್ರೆಸ್ ಸೇರ್ಪಡೆಗೊಂಡರು.