ಮಡಿಕೇರಿ, ಏ. 29: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಮೈದಾನದಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ಬಂಗಾರಕೋಡಿ, ಸುಳ್ಯಕೋಡಿ, ಕಾಂಗಿರ, ಅಯ್ಯಂಡ್ರ- ಕಾಳೇರಮ್ಮನ, ಬಲ್ಯಾಟನ ಹಾಗೂ ಮೂಲೆ ಮಜಲು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.ಇಂದು ನಡೆದ ಪಂದ್ಯದಲ್ಲಿ ಪೋರೆಕುಂಜಿಲನ 7 ವಿಕೆಟ್‍ಗೆ 46 ರನ್ ಗಳಿಸಿತು. ಪಾರೆಮಜಲು 5 ವಿಕೆಟ್‍ಗೆ 47 ರನ್ ಗಳಿಸಿ ಜಯಗಳಿಸಿತು. ನೈಯ್ಯಣಿ 6 ವಿಕೆಟ್‍ಗೆ 57 ರನ್ ಗಳಿಸಿದರೆ ಬಂಗಾರಕೋಡಿ 5 ವಿಕೆಟ್‍ಗೆ 58 ರನ್ ಗಳಿಸಿ ಜಯಗಳಿಸಿತು. ಕುಂಡ್ಯನ 2 ವಿಕೆಟ್‍ಗೆ 83 ರನ್ ಬಾರಿಸಿದರೆ ಸುಳ್ಯಕೋಡಿ 6 ವಿಕೆಟ್‍ಗೆ 86 ರನ್ ಗಳಿಸಿ ಗೆಲುವು ಸಾಧಿಸಿತು. ಹೊಸೋಕ್ಲು (ಬೈರುಡ) 6 ವಿಕೆಟ್‍ಗೆ 36 ರನ್ ಗಳಿಸಿದರೆ ಬಾಳಾಡಿ 8 ವಿಕೆಟ್‍ಗೆ 37 ರನ್ ಗಳಿಸಿ ಗೆಲುವು ಸಾಧಿಸಿತು. ಚಿಯ್ಯಂಡಿ 4 ವಿಕೆಟ್‍ಗೆ 58 ರನ್ ಬಾರಿಸಿದರೆ ಮೂಲೆಮಜಲು 1 ವಿಕೆಟ್‍ಗೆ 60 ರನ್ ಬಾರಿಸಿ ಗೆಲುವು ಸಾಧಿಸಿತು. ಮೂಟೇರ 7 ವಿಕೆಟ್‍ಗೆ 51 ರನ್ ಗಳಿಸಿದರೆ ಕಾಂಗಿರ 1 ವಿಕೆಟ್‍ಗೆ 52 ರನ್ ಗಳಿಸಿ ಜಯಸಾಧಿಸಿತು.
ಕಾಸ್ಪಾಡಿ 6 ವಿಕೆಟ್‍ಗೆ 51 ರನ್ ಗಳಿಸಿದರೆ ಪೂಜಾರಿರ 53 ರನ್ ಗಳಿಸಿ ಜಯಗಳಿಸಿತು.
ಉಳುವಾರನ 4 ವಿಕೆಟ್‍ಗೆ 49 ರನ್ ಗಳಿಸಿದರೆ ಅಯ್ಯಂಡ್ರ 3 ವಿಕೆಟ್‍ಗೆ 55 ರನ್ ಬಾರಿಸಿ ಜಯಗಳಿಸಿತು. ಚಿಕೋಡಿ (ಅವಂದೂರು) 7 ವಿಕೆಟ್‍ಗೆ 64 ರನ್ ಗಳಿಸಿದರೆ ಬಲ್ಯಟನ 1 ವಿಕೆಟ್‍ಗೆ 68 ರನ್ ಗಳಿಸಿ ಗೆಲುವು ಸಾಧಿಸಿತು. ಬೈಮನ 5 ವಿಕೆಟ್‍ಗೆ 63 ರನ್ ಗಳಿಸಿದರೆ ಕಾಳೇರಮ್ಮನ 1 ವಿಕೆಟ್‍ಗೆ 64 ರನ್ ಗಳಿಸಿ ಜಯಗಳಿಸಿತು. ಬಾಳಾಡಿ 3 ವಿಕೆಟ್‍ಗೆ 58 ರನ್ ಗಳಿಸಿದರೆ, ಬಂಗಾರಕೋಡಿ 4 ವಿಕೆಟ್‍ಗೆ 59 ರನ್ ಗಳಿಸಿ ಜಯಗಳಿಸಿತು. ಸುಳ್ಯಕೋಡಿ 3 ವಿಕೆಟ್‍ಗೆ 62 ರನ್ ಗಳಿಸಿದರೆ, ಪಾರೆಮಜಲು 7 ವಿಕೆಟ್‍ಗೆ 54 ರನ್ ಗಳಿಸಿ ಜಯಗಳಿಸಿತು. ಪೂಜಾರಿರ ‘ಎ’ 4 ವಿಕೆಟ್‍ಗೆ 52 ರನ್ ಗಳಿಸಿದರೆ, ಮೂಲೆಮಜಲು 1 ವಿಕೆಟ್‍ಗೆ 53 ರನ್ ಗಳಿಸಿ ಜಯಗಳಿಸಿತು.