ಚೆಟ್ಟಳ್ಳಿ, ಏ. 29: ಮೊಟ್ಟಮೊದಲ ಬಾರಿಗೆಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ರಾಷ್ಟ್ರೀಯ ಪಕ್ಷವಾದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಯುವಕ ಚೀಯಂಡಿರ ಕಿಶನ್ಉತ್ತಪ್ಪ ಅವರನ್ನು ಚುನಾವಣಾ ಅಧಿಕಾರಿ ಮುಂದೆ ತಾ. 23 ರಂದು ನಾಮಪತ್ರ ಸಲ್ಲಿಸಿ ಚುನಾವಣಾ ಸಿದ್ಧತೆ ನಡೆಸತೊಡಗಿದರು. ಆದರೆ ನಾಮಪತ್ರಗಳ ಪರಿಶೀಲನೆಯ ವೇಳೆ ಎ.ಫಾರಂಗೆ ಪಕ್ಷದ ಅಧ್ಯಕ್ಷರ ಸಹಿ ಇಲ್ಲದ ಕಾರಣ ಕಿಶನ್ ಉತ್ತಪ್ಪ ಅವರನ್ನು ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿದರು.
ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ಯಾದವ್ ರವರ ಸಹಿ ಬಿ. ಫಾರಂನಲ್ಲಿದ್ದು ಎ. ಫಾರಂಗೆ ಸಹಿ ಬಿಟ್ಟು ಹೋದ್ದರಿಂದ ಕಿಶನ್ಉತ್ತಪ್ಪ ಪಕ್ಷದ ಸೈಕಲ್ ಚಿಹ್ನೆಯಡಿ ಚುನಾಣೆಗೆ ಸ್ಪರ್ಧಿಸಲು ಸಾಧ್ಯವಾಗದೆ ಸ್ವತಂತ್ರ ಅಭ್ಯರ್ಥಿಯಾದರು. ಸೈಕಲ್ ಚಿಹ್ನೆ ಬಿಟ್ಟು ಆಟೋ ಹಾಗೂ ಬ್ಯಾಟನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಮೊದಲ ಸ್ವತಂತ್ರ ಅಭ್ಯರ್ಥಿ ಆಟೋ ಚಿಹ್ನೆಯನ್ನು ಆಯ್ಕೆ ಮಾಡಿದರಿಂದ ಬ್ಯಾಟ್ ಚಿಹ್ನೆಯೊಂದೇ ಕಿಶನ್ಗೆ ದೊರಕಿದೆ.
ಪಕ್ಷದಿಂದಲೇ ಅಭ್ಯರ್ಥಿಯಾಗಿ ನಿಲ್ಲಬೇಕಿದ್ದ ಕಿಶನ್ಉತ್ತಪ್ಪ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿದರಿಂದ ಚುನಾವಣಾ ಅಖಾಡದಿಂದ ದೂರ ಉಳಿದು ನಾಮಪತ್ರ ವಾಪಾಸ್ ಪಡೆಯುವ ಬಗ್ಗೆ ಪಕ್ಷದ ನಾಯಕರಿಗೆ ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಲಾಗಿತ್ತು. ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯು, ರಾಜ್ಯ ಯುವ ಘಟಕದ ಅಧ್ಯಕ್ಷÀ ಕಿರಣ್ ಚಿಟ್ಟಿಯವರು ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ವರ್ಧಿಸಲು ಒತ್ತಾಯಿಸಿದ್ದು ಪಕ್ಷದ ವತಿಯಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
-ಕರುಣ್ ಕಾಳಯ್ಯ