ಗೋಣಿಕೊಪ್ಪ ವರದಿ, ಏ. 29: ಅಖಿಲ ಅಮ್ಮಕೊಡವ ಸಮಾಜ, ಪುತ್ತಮನೆ ಕುಟುಂಬ, ಕೋತೂರು ಶ್ರೀಕೃಷ್ಣ ಅಮ್ಮಕೊಡವ ಸಂಘ, ಗೋಣಿಕೊಪ್ಪ ಕಾವೇರಿ ಅಮ್ಮಕೊಡವ ಮಹಿಳಾ ಸಮಾಜ ಹಾಗೂ ಮಾಯಮುಡಿ ಕಂಗಳತ್ತ್ನಾಡ್ ಅಮ್ಮಕೊಡವ ಸಮಾಜ ಸಹಯೋಗದಲ್ಲಿ ನಡೆಯುತ್ತಿರುವ ಅಮ್ಮಕೊಡವ ಜನಾಂಗದ ಪುತ್ತಾಮನೆ ಕ್ರಿಕೆಟ್ ಕಪ್ನಲ್ಲಿ ಅಮ್ಮತ್ತೀರ ಹಾಗೂ ಆಂಡಮಾಡ ತಂಡಗಳು ಸೆಮಿ ಫೈನಲ್ಗೆ ಲಗ್ಗೆ ಇಟ್ಟಿವೆ.ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆದ ಎರಡು ಕ್ವಾರ್ಟರ್ ಫೈನಲ್ನಲ್ಲಿ ಉಭಯ ತಂಡಗಳು ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿನ ನಿರೀಕ್ಷೆಯಲ್ಲಿದೆ.
ಅಮ್ಮತ್ತೀರ ತಂಡವು ಚೊಟ್ಟೋಳಿಯಮ್ಮಂಡವನ್ನು 17 ರನ್ಗಳಿಂದ ಮಣಿಸಿ ಸೆಮಿ ಫೈನಲ್ ಪ್ರವೇಶ ಪಡೆಯಿತು. ಅಮ್ಮತ್ತೀರ 5 ವಿಕೆಟ್ ಕಳೆದುಕೊಂಡು 92 ರನ್ಗಳ ಗುರಿ ನೀಡಿತು. ಚೊಟ್ಟೋಳಿಯಮ್ಮಂಡ 5 ವಿಕೆಟ್ ಕಳೆದುಕೊಂಡು 74 ರನ್ಗಳನಷ್ಟೆ ಗಳಿಸಿತು.
ಆಂಡಮಾಡ ತಂಡವು ಗುಂಬೀರ ತಂಡವನ್ನು 10 ವಿಕೆಟ್ಗಳಿಂದ ಸೋಲಿಸಿತು. ಗುಂಬೀರ ಮೊದಲು ಬ್ಯಾಟ್ ಮಾಡಿ 4 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿತು. ಆಂಡಮಾಡ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು.
1 ಹಾಗೂ 2ನೇ ಸುತ್ತಿನ ಪಂದ್ಯಗಳಲ್ಲಿ ಕೊಂಡಿಜಮ್ಮಂಡ, ಅಚ್ಚಿಯಂಡ, ಬಾನಂಡ, ಚೊಟ್ಟೋಳಿಯಮ್ಮಂಡ, ಗುಂಬೀರ, ಬಲ್ಯಂಡ ಹಾಗೂ ಹೆಮ್ಮಚ್ಚಿಮನೆ ತಂಡಗಳು ಗೆಲುವು ದಾಖಲಿಸಿತು.
ಕೊಂಡಿಜಮ್ಮಂಡ ತಂಡವು ನೆರೆಯಂಡಮ್ಮಂಡ ವಿರುದ್ಧ 33 ರನ್ಗಳ ಗೆಲುವು ಪಡೆಯಿತು. ಕೊಂಡಿಜಮ್ಮಂಡ ತಂಡವು 3 ವಿಕೆಟ್ ಕಳೆದುಕೊಂಡು 80 ರನ್ ದಾಖಲಿಸಿತು. ನೆರೆಯಂಡಮ್ಮಂಡ 1 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಅಚ್ಚಿಯಂಡ ತಂಡವು ಪಡಿಞರಮ್ಮಂಡ ವಿರುದ್ಧ 19 ರನ್ಗಳ ಜಯ ಸಾಧಿಸಿತು. ಅಚ್ಚಿಯಂಡ ತಂಡದ ದಿಲಿಪ್ ಬಾರಿಸಿದ 55 ರನ್ಗಳ ನೆರವಿನಿಂದ 3 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿತು. ಪಡಿಙರಮ್ಮಂಡ ತಂಡವು 4 ವಿಕೆಟ್ ಕಳೆದುಕೊಂಡು 46 ರನ್ ದಾಖಲಿಸಿತು.
ಬಾನಂಡ ತಂಡವು ಬಾಚಮಂಡ ತಂಡವನ್ನು 17 ರನ್ಗಳಿಂದ ಮಣಿಸಿತು. ಬಾನಂಡ 5 ವಿಕೆಟ್ಗೆ 70 ರನ್ಗಳ ಗುರಿ ನೀಡಿತು. ಬಾಚಮಂಡ 4 ವಿಕೆಟ್ ಕಳೆದುಕೊಂಡು 52 ರನ್ ದಾಖಲಿಸಿ ಸೋಲೊಪ್ಪಿಕೊಂಡಿತು.
ಚೊಟ್ಟೋಳಿಯಮ್ಮಂಡ ತಂಡವು ನಾಳ್ಯಮ್ಮನ ವಿರುದ್ಧ 17 ರನ್ಗಳ ಗೆಲುವು ಪಡೆಯಿತು. ಚೊಟ್ಟೋಳಿಯಮ್ಮಂಡ 5 ವಿಕೆಟ್ ಕಳೆದುಕೊಂಡು 91 ರನ್ ದಾಖಲಿಸಿದರು. ನಾಳ್ಯಮ್ಮನ 6 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು. ಚೊಟ್ಟೋಳಿಯಮ್ಮಂಡ ಸಾಜನ್ 55 ರನ್ ಸಿಡಿಸಿದರು.
ಗುಂಬೀರ ತಂಡ ಕೊಂಡಿಜಮ್ಮಂಡವನ್ನು 16 ರನ್ಗಳಿಂದ ಸೋಲಿಸಿತು. ಗುಂಬೀರ 8 ವಿಕೆಟ್ಗೆ 68 ರನ್ ದಾಖಲಿಸಿತು. ಕೊಂಡಿಜಮ್ಮಂಡ 5 ವಿಕೆಟ್ ಕಳೆದುಕೊಂಡು 52 ರನ್ ಗಳಿಸಿ ಸೋಲನುಭವಿಸಿತು.
ಬಲ್ಯಂಡ ತಂಡವು ಅಚ್ಚಿಯಂಡ ವಿರುದ್ಧ 47ರನ್ಗಳ ದೊಡ್ಡ ಮೊತ್ತದ ಗೆಲುವು ದಾಖಲಿಸಿತು. ಬಲ್ಯಂಡ ಶರತ್ ಬಾರಿಸಿದ 63 ರನ್ಗಳ ಸಹಾಯದಿಂದ ಕೇವಲ 1 ವಿಕೆಟ್ ಕಳೆದುಕೊಂಡು 118 ರನ್ ದಾಖಲಿಸಿತು. ಅಚ್ಚಿಯಂಡ 3 ವಿಕೆಟ್ ಕಳೆದುಕೊಂಡು 71 ರನ್ ಗಳಿಸಿ ಹೀನಾಯವಾಗಿ ಸೋಲನುಭವಿಸಿತು.
ಹೆಮ್ಮಚ್ಚಿಮನೆ ತಂಡ ಬಾನಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ಬಾನಂಡ 3 ವಿಕೆಟ್ಗೆ 46 ರನ್ ಗಳಿಸಿತು. ಹೆಮ್ಮಚ್ಚಿಮನೆ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಇಂದು ಸಮಾರೋಪ
ಮದ್ಯಾಹ್ನ 1 ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಸಂಜೆ 4.30ಕ್ಕೆ ಸಮಾರೋಪ ನಡೆಯಲಿದೆ. ಈ ಸಂದರ್ಭ ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು, ಜನಾಂಗದ ಪ್ರಮುಖರುಗಳಾದ ಪುತ್ತಾಮನೆ ಗಣೇಶ್, ಮನ್ನಕಮನೆ ಬಾಲಕೃಷ್ಣ, ಪಾಡಿಯಮ್ಮಂಡ ಮುತ್ತಮಯ್ಯ, ಸ್ವಾತಿ ರವಿ, ಬಲ್ಯಂಡ ದಿನು, ಪುತ್ತಾಮನೆ ಶ್ರೀನಿವಾಸ್, ಪುತ್ತಾಮನೆ ಅರುಣ, ಪುತ್ತಾಮನೆ ಅಶೋಕ್, ರೋಶನ್, ಸುಕುಮಾರ್ ಹಾಗೂ ರಾಧಾ ಗಣೇಶ್ ಪಾಲ್ಗೊಳ್ಳಲಿದ್ದಾರೆ.