ಕೂಡಿಗೆ, ಏ. 29: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಬಿಜೆಪಿ ವಿಧಾನಸಭೆ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಪರ ಮತಯಾಚನೆಯಲ್ಲಿ ಕೂಡುಮಂಗಳೂರು ಗ್ರಾ.ಪಂ. ಪ್ರಮುಖರು ತೊಡಗಿದ್ದರು.ಬಿಜೆಪಿಯ ಪರ ಕಾರ್ಯಕರ್ತರು ಕೂಡಿಗೆ ಪ್ರಮುಖ ಬೀದಿಗಳಲ್ಲಿ, ಡೈರಿ ಸರ್ಕಲ್ ಬಸವತ್ತೂರು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ಭಾಗವಹಿಸಿದ್ದರು.ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ತಾ.ಪಂ. ಸದಸ್ಯ ಗಣೇಶ್, ತಾಲೂಕು ಎಸ್‍ಸಿ ಮೋರ್ಚಾದ ಅಧ್ಯಕ್ಷ ಕುಮಾರಸ್ವಾಮಿ, ತಾಲೂಕು ಎಸ್‍ಟಿ ಮೋರ್ಚಾದ ಅಧ್ಯಕ್ಷ ಪ್ರಭಾಕರ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯೆ ಸಾವಿತ್ರಿ ರಾಜು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷೆ ನಿರ್ಮಲ, ಆರ್‍ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಕೂಡುಮಂಗಳೂರು ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಕೆ. ಕನಕ, ಬೂತ್ ಸಮಿತಿ ಅಧ್ಯಕ್ಷ ಆರ್. ಕೃಷ್ಣ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.