ಶನಿವಾರಸಂತೆ, ಏ. 30: ಕರ್ತವ್ಯ ನಿಮಿತ್ತ ಮೋಟಾರ್ ಬೈಕ್‍ನಲ್ಲಿ ಅರಣ್ಯ ಇಲಾಖೆ ಕಚೇರಿಯತ್ತ ತೆರಳುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಮತ್ತೊಂದು ಬೈಕ್‍ನ ಸವಾರರು ಹಿಂಬದಿಯಿಂದ ಬಂದು ಡಿಕ್ಕಿ ಪಡಿಸಿದ ಪರಿಣಾಮ ಅರಣ್ಯ ಇಲಾಖೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.
ನಿಲುವಾಗಿಲು ಗ್ರಾಮದ ಚಂದ್ರಪ್ಪ ಗಾಯಾಳು, ಇವರು ಚಾಲಿಸುತ್ತಿದ್ದ ಬೈಕಿಗೆ ಮೂವರು ಸವಾರರಿದ್ದ ಮತ್ತೊಂದು ಬೈಕ್ ಬಂದು ಡಿಕ್ಕಿಯಾಗಿದ್ದು, ಮೂವರು ಸವಾರರಲ್ಲಿ ಒಬ್ಬ ಸವಾರ ಗಾಯಗೊಂಡಿದ್ದಾನೆ. ಉಳಿದಿಬ್ಬರು ಸವಾರರು ತಕ್ಷಣ ಬೈಕ್‍ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುಗಳಾದ ಚಂದ್ರಪ್ಪ ಹಾಗೂ ಡಿಕ್ಕಿ ಪಡಿಸಿ ಗಾಯಗೊಂಡ ಬೈಕ್ ಸವಾರನನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.