ನಾಪೆÇೀಕ್ಲು, ಏ. 30: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕುಲ್ಲೇಟಿರ ನಮ್ಮೆಯ ವಿಶೇಷ ಆಕರ್ಷಣೆಯಾಗಿ ಮೇ.4ರಂದು ಪೆÇಮ್ಮಕ್ಕಡ ನಮ್ಮೆಯನ್ನು ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜನನಿ ಪೆÇಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜನನಿ ಪೆÇಮ್ಮಕ್ಕಡ ಕೂಟ ಹಾಗೂ ಕುಲ್ಲೇಟಿರ ಹಾಕಿ ನಮ್ಮೆಯ ಆಯೋಜಕರು ಏರ್ಪಡಿಸಿರುವ ಪೆÇಮ್ಮಕ್ಕಡ ನಮ್ಮೆಯನ್ನು ಹಾಕಿ ಮೈದಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವದು. ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವದ ಅಂಗವಾಗಿ ಅಂದು ಹಾಕಿ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿದ್ದು, ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಹಿಳೆಯರಿಗೆ ವೈವಿಧ್ಯಮಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಪುಷ್ಪಗಳ ಜೋಡಣೆ, ಅಡುಗೆ ಸ್ಪರ್ಧೆ,ಪಿಕ್ ಅಂಡ್ ಆಕ್ಟ್, “ಕೊಡವ ಮಂಗಲ ಅಂದು ಇಂದು” ವಿಷಯದ ಕುರಿತು ಚರ್ಚಾ ಸ್ಪರ್ಧೆ, ಫ್ಯಾಷನ್ಶೋ, ವಾಲಗ ನೃತ್ಯ, ಸಮೂಹ ನೃತ್ಯ ಹಾಗೂ ಬಲೂನ್ ಒಡೆಯುವ ಮನರಂಜನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮೇ.4 ರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ. ಜಿಲ್ಲೆಯ ಎಲ್ಲಾ ಮಹಿಳಾ ಸಂಘಗಳ ಸದಸ್ಯರು, ವಿವಿಧ ಕುಟುಂಬಗಳ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದರು. ಅಡುಗೆ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಕಜ್ಜಾಯ, ಚಿರೋಟಿ, ಚಕ್ಕುಲಿ, ಬಾಳೆ ಹಣ್ಣಿನ ಬಜ್ಜಿ ಹಾಗೂ ನಿಂಬೆ ಉಪ್ಪಿನಕಾಯಿ( ಪ್ರಮಾಣ:ಕಾಲು ಕೆ.ಜಿ.) ತಯಾರಿಸಿ ತರುವಂತೆ ಹೇಳಿದರು.
ಗೋಷ್ಠಿಯಲ್ಲಿ ಕುಲ್ಲೇಟಿರ ಜ್ಯೋತಿ ನಾಚಪ್ಪ, ಸುಮಿ ರಾಜೇಶ್, ರೀಟಾ ಕಾಳಪ್ಪ, ಹೇಮಾ ಅರುಣ್, ವಿಮ್ಲು ಮಂದಪ್ಪ, ಯಶೋಧ ಚಿಟ್ಟಿಯಪ್ಪ ಇದ್ದರು.