ಬೆಂಗಳೂರು, ಏ. 30: 2017-18ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನ ಗಳಿಸಿದೆ. ಕಳೆದ ಸಾಲಿನಲ್ಲಿ 4ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 76.12 ಫಲಿತಾಂಶದೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಪರೀಕ್ಷೆಗೆ ಕುಳಿತ ಒಟ್ಟು 6,148 ಮಂದಿ ವಿದ್ಯಾರ್ಥಿಗಳ ಪೈಕಿ 4,680 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 5,149 ಮಂದಿ ಈ ಸಾಲಿನ ವಿದ್ಯಾರ್ಥಿಗಳಲ್ಲಿ 4,322 ಮಂದಿ ಉತ್ತೀರ್ಣರಾಗಿದ್ದಾರೆ, ಮರು ಪರೀಕ್ಷೆ ಬರೆದಿದ್ದ 954 ಮಂದಿ ಪೈಕಿ 348 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ 2,918 ಮಂದಿ ಬಾಲಕರ ಪೈಕಿ 1,999 ಮಂದಿ ಉತ್ತೀರ್ಣರಾಗಿದ್ದು, 3,230 ಬಾಲಕಿಯರ ಪೈಕಿ 2,681 ಮಂದಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ 1,637 ವಿದ್ಯಾರ್ಥಿಗಳ ಪೈಕಿ 1,037 ಮಂದಿ ಉತ್ತೀರ್ಣರಾಗಿದ್ದು, 873 ಮಂದಿ ಪ್ರಸಕ್ತ ಸಾಲಿನವರಾಗಿದ್ದು, 157 ಮಂದಿ ಮರು ಪರೀಕ್ಷೆ ಬರೆದವರಾಗಿದ್ದಾರೆ. 450 ಮಂದಿ ಬಾಲಕರು ಹಾಗೂ 587 ಮಂದಿ ಬಾಲಕಿಯರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 3,272 ಮಂದಿ ಪೈಕಿ 2,608 ಮಂದಿ ಉತ್ತೀರ್ಣರಾಗಿದ್ದು, 2,447 ಮಂದಿ ಈ ಸಾಲಿನವರಾಗಿದ್ದು, 159 ಮಂದಿ ಮರು ಪರೀಕ್ಷೆ ಬರೆದವರಾಗಿದ್ದಾರೆ. 1,113 ಮಂದಿ ಬಾಲಕರು, 1,495 ಮಂದಿ ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 1,239 ಮಂದಿ ಪೈಕಿ 1,035 ಮಂದಿ ಉತ್ತೀರ್ಣರಾಗಿದ್ದು, 1,002 ಮಂದಿ ಈ ಸಾಲಿನವರಾಗಿದ್ದು, 32 ಮಂದಿ ಮರು ಪರೀಕ್ಷೆ ಬರೆದವರಾಗಿದ್ದಾರೆ. 436 ಮಂದಿ ಬಾಲಕರು ಹಾಗೂ 599 ಮಂದಿ ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ನಗರ ಪ್ರದೇಶದಲ್ಲಿ 3,468 ಮಂದಿ ಪರೀಕ್ಷೆ ಬರೆದಿದ್ದು, 2,645 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 2,453 ಮಂದಿ ಈ ಸಾಲಿನವರಾ ಗಿದ್ದು, 186 ಮಂದಿ ಮರು ಪರೀಕ್ಷೆ ಬರೆದವರಾಗಿದ್ದಾರೆ. 1,134 ಮಂದಿ ಬಾಲಕರು, 1,511 ಮಂದಿ ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ 2,680 ಮಂದಿ ಪರೀಕ್ಷೆ ಬರೆದಿದ್ದು, 2,035 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 1,869 ಮಂದಿ ಈ ಸಾಲಿನವರಾಗಿದ್ದು, 162 ಮಂದಿ ಮರು ಪರೀಕ್ಷೆ ಬರೆದವರಾಗಿದ್ದಾರೆ. 265 ಮಂದಿ ಬಾಲಕರು ಹಾಗೂ 1,170 ಮಂದಿ ಬಾಲಕಿಯರು ಉತ್ತೀರ್ಣರಾಗಿದ್ದಾರೆ.

-ಬಿ.ಜಿ. ರವಿಕುಮಾರ್