ಗೋಣಿಕೊಪ್ಪಲು. ಏ. 30: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಆಡಳಿತದಿಂದ ಮತದಾರ ರೋಷಿ ಹೋಗಿದ್ದು ಈ ಬಾರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದತ್ತ ಮತದಾರನ ವಲವು ಹೆಚ್ಚಾಗಿದೆ ಎಂದು vIರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಅಭಿಪ್ರಾಯ ಪಟ್ಟರು. ದ. ಕೊಡಗಿನ ಬಿರುನಾಣಿ ಬಸ್ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್ ಬಹಿರಂಗ ಸಭೆಯಲ್ಲಿ ಮಾತನಾಡಿ, ಈ ಭಾಗದಿಂದ ಆರಿಸಿ ಹೋದ ಶಾಸಕರು ಅಭಿವೃದ್ಧಿಗೆ ಶ್ರಮಿಸಲಿಲ್ಲ. ಸಂಸದರು ಕೂಡ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಲಿಲ್ಲ. ಈ ಭಾಗದಲ್ಲಿ ರೈತ ಆತ್ಮಹತ್ಯೆ ಆದಾಗ ನೊಂದ ಕುಟುಂಬಕ್ಕೆ ಕನಿಷ್ಟ ಸ್ಪಂಧಿಸುವ ಕೆಲಸ ಮಾಡಲಿಲ್ಲ. ಮತ ಪಡೆದು ಹೋದ ಜನಪ್ರತಿನಿಧಿಗಳು ಗ್ರಾಮೀಣ ಭಾಗಕ್ಕೆ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.

ಮಾಜಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಮಾತನಾಡಿ, ಈ ಬಾರಿ ಸಂಕೇತ್ ಪೂವಯ್ಯ ಅವರನ್ನು ಹೆಚ್ಚಿನ ಬಹುಮತದಿಂದ ಆರಿಸಿ ಕಳುಹಿಸುವಂತೆ ಮನವಿ ಮಾಡಿದರು.

ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್, ಕಾಂಗ್ರೆಸ್ ಸರ್ಕಾರದಿಂದ ಭಾಗ್ಯಗಳ ಯೋಜನೆ ಜನತೆಗೆ ಇನ್ನು ಸರಿಯಾಗಿ ತಲುಪಿಲ್ಲ. ರೈತರ ಸಮಸ್ಯೆ ಆಲಿಸಲಿಲ್ಲ. ಉತ್ತಮ ಸರ್ಕಾರಕ್ಕಾಗಿ ಈ ಬಾರಿ ಜೆಡಿಎಸ್‍ಗೆ ಮತ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಮಹಿಳಾ ಆಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಬಿರುನಾಣಿ ಜೆಡಿಎಸ್ ಸ್ಥಾನೀಯ ಅಧ್ಯಕ್ಷ ಕರ್ತಮಾಡ ಅಧ್ಯಕ್ಷ ನರೇಂದ್ರ, ಕಾರ್ಮಿಕ ಜಿಲ್ಲಾಧ್ಯಕ್ಷ ಪರಮಾಲೆ ಗಣೇಶ್, ಯುವ ಜೆಡಿಎಸ್‍ನ ಅಧ್ಯಕ್ಷ ಅಮ್ಮಂಡ ವಿವೇಕ್ ಮುಖಂಡರುಗಳಾದ ಚೋನಿರ ಸಜನ್ ಉತ್ತಪ್ಪ, ಉಳುವಂಗಡ ದತ್ತ, ನೆಲ್ಲಿರ ಉತ್ತಯ್ಯ, ಬೊಳ್ಳೇರ ಮುತ್ತಣ್ಣ,ಬೆಳ್ಯಪ್ಪ, ಪೊನ್ನಪ್ಪ, ಅಪ್ಪಣ್ಣ, ಕಿರಣ್ ಕೋಗಿಲೆವಾಡಿ, ಬೊಟ್ಟಂಗಡ ತಮ್ಮು ಮುಂತಾದವರು ಹಾಜರಿದ್ದರು.