ಮಡಿಕೇರಿ, ಏ. 30: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆರಂಭಗೊಂಡಿರುವ ಮಡ್ಲಂಡ ಕಪ್ ಕ್ರಿಕೆಟ್ ಹಬ್ಬದಲ್ಲಿ 7 ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯದಲ್ಲಿ ಮಾಳೆಯಂಡ 5 ವಿಕೆಟ್‍ಗೆ 75 ರನ್ ಗಳಿಸಿದರೆ, ಮರುವಂಡ 2 ವಿಕೆಟ್‍ಗೆ 62 ರನ್ ಬಾರಿಸಿ ಸೋಲು ಕಂಡಿತು. ಕೇಕಣಮಾಡ 1 ವಿಕೆಟ್‍ಗೆ 148 ರನ್ ಗಳಿಸಿದರೆ, ಕಚಪಾಣೀರ 7 ವಿಕೆಟ್‍ಗೆ 46ರನ್ ಗಳಿಸಿ ಸೋಲು ಕಂಡಿತು. ಕೊಟ್ರಂಗಡ 2 ವಿಕೆಟ್‍ಗೆ 123 ರನ್ ಗಳಿಸಿದರೆ, ಐತಿಚಂಡ 4 ವಿಕೆಟ್‍ಗೆ 75 ರನ್ ಬಾರಿಸಿ ಸೋಲನುಭವಿಸಿತು. ಮಣವಟ್ಟಿರ 4 ವಿಕೆಟ್‍ಗೆ 151 ರನ್ ಗಳಿಸಿದರೆ, ಉದಿನಾಡಂಡ 4 ವಿಕೆಟ್‍ಗೆ 63 ರನ್ ಗಳಿಸಿ ಸೋಲನುಭವಿಸಿತು. ಕುಟ್ಟಂಡ (ಅಮ್ಮತ್ತಿ) 3 ವಿಕೆಟ್‍ಗೆ 72 ರನ್ ಗಳಿಸಿದರೆ, ಕಾಂಗೀರ 3 ವಿಕೆಟ್‍ಗೆ 71 ರನ್ ಗಳಿಸಿ ಸೋಲುಕಂಡಿತು. ಬೊಟ್ಟಂಗಡ 6 ವಿಕೆಟ್‍ಗೆ 80 ರನ್ ಗಳಿಸಿದರೆ, ಅಜ್ಜಮಕ್ಕಡ 7 ವಿಕೆಟ್‍ಗೆ 63 ರನ್ ಗಳಿಸಿ ಸೋಲುಕಂಡಿತು. ಬಯವಂಡ ತಂಡ ಮಾಳೇಟಿರ ತಂಡವನ್ನು ಮಣಿಸಿತು.
ಇಂದಿನ ಪಂದ್ಯಗಳು
ಮೈದಾನ -1
ಬೆ. 9ಕ್ಕೆ ಚೆಟ್ಟಿರ v/s ತೊತ್ತಿಯಂಡ
10ಕ್ಕೆ ಮಂಡೀರ (ಮಾದಾಪುರ) v/s ಬೈರೇಟಿರ
11ಕ್ಕೆ ಕೋಡಿರ v/s ಮಾಯನಮಡ
12ಕ್ಕೆ ಚೆರುವಾಳಂಡ v/s ಮಂಡಂಗಡ
ಮ. 1 ಕ್ಕೆ ಮುರುವಂಡ v/s ನಾಮೇರ
2 ಕ್ಕೆ ಗೀಜಗಂಡ v/s ಕುಂಡ್ಯೋಳಂಡ
3ಕ್ಕೆ ಚೀಕಂಡ v/s ತೀತೀರ (ಹರಿಹರ)
ಮೈದಾನ -2
ಬೆ. 9.30 ಕ್ಕೆ ಮಂದನೆರವಂಡ v/s ಕಲ್ಲುಮಾಡಂಡ
11.30ಕ್ಕೆ ಕರಿನೆರವಂಡ v/s ಕೊಕ್ಕಲೆಮಾಡ
ಮ.12.30ಕ್ಕೆ ತಾತಪಂಡ v/s ಕಂಗಂಡ
1.30ಕ್ಕೆ ಉಡುವೇರ v/s ಪಟ್ಟಡ
2.30ಕ್ಕೆ ಕಾಳಚಂಡ v/s ಚೊಟ್ಟೆಯಂಡ
3.30ಕ್ಕೆ ಬೊಳ್ಳೇಪಂಡ v/s ಕನ್ನಿಗಂಡ