ಸುಂಟಿಕೊಪ್ಪ, ಏ. 30: ಕೇಂದ್ರದ ನರೇಂದ್ರಮೋದಿ ಅವರ ಯೋಜನೆಗಳನ್ನು ರಾಜ್ಯ ಸರಕಾರ ನಮ್ಮ ಯೋಜನೆಗಳೆಂದು ಬೀಗುತ್ತಿರುವದೇ ರಾಜ್ಯ ಸರಕಾರದ ಸಾಧನೆ ಎಂದು ಅಪ್ಪಚ್ಚು ರಂಜನ್ ಟೀಕಿಸಿದರು.
ಬಿಜೆಪಿ ವತಿಯಿಂದ ಸುಂಟಿಕೊಪ್ಪ ವಾಹನ ಚಾಲಕರ ವೇದಿಕೆಯ ಮುಂಭಾಗದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಬೇರೆ ಬೇರೆ ಪಕ್ಷದವರು ಮತ ಪ್ರಚಾರಕ್ಕೆ ತೆರಳಿದಾಗ ತÀನ್ನನ್ನು ಯಾವದೇ ಅಭಿವೃದ್ಧಿ ಮಾಡದ ಶಾಸಕ ಎಂದು ಟೀಕಿಸುತ್ತಿದ್ದಾರೆ. ಅನವಶ್ಯಕ ಅಪಪ್ರಚಾರದಿಂದ ಅವರ ಗೌರವಕ್ಕೆ ಅವರೇ ಮಸಿ ಬಳಿದಂತೆ ಆಗುತ್ತದೆ ಎಂದರು.
ಕರ್ನಾಟಕ ಕಾಂಗ್ರೆಸ್ ಮುಕ್ತವನ್ನಾಗಿ ಮಾಡಿ ನರೇಂದ್ರ ಮೋದಿಯವರಿಗೆ ಜನ ಬಿಜೆಪಿಯನ್ನು ಅಧಿಕಾರದ ಗದ್ದುಗೇರಿಸುವಂತೆ ತಾ.ಪಂ.ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ ಜನರ ಕೆಲಸ ಮಾಡಬೇಕಾದ ಸರ್ಕಾರ ತನ್ನ 5 ವರ್ಷದ ಅವಧಿಯಲ್ಲಿ ದುರಾಡಳಿತದ ಆಡಳಿತವನ್ನು ನೀಡಿ ಜನರಲ್ಲಿ ಜಾತೀಯ ವಿಷ ಬೀಜವನ್ನು ಬಿತ್ತಿದೆ ಎಂದು ದೂರಿದರು.
ಕೇರಳ ರಾಜ್ಯ ಬಿಜೆಪಿ ಕಾರ್ಯದರ್ಶಿ ರಂಜಿತ್ ಕುಮಾರ್, ತಾ.ಪಂ.ಸದಸ್ಯೆ ವಿಮಲಾವತಿ, ಹೋಬಳಿ ಅಧ್ಯಕ್ಷ ದಾಸಂಡ ರಮೇಶ್, ನಗರಾಧ್ಯಕ್ಷ ಪಿ.ಆರ್. ಸುನೀಲ್ಕುಮಾರ್, ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್, ಗ್ರಾ.ಪಂ. ಸದಸ್ಯರುಗಳಾದ ಜ್ಯೋತಿ, ಗಿರಿಜಾ ಉದಯಕುಮಾರ್, ಮಾಜಿ ಅಧ್ಯಕ್ಷ ಬಿ.ಐ. ಭವಾನಿ, ಮಡಿಕೇರಿ ಕ್ಷೇತ್ರ ಅಧ್ಯಕ್ಷ ಕೋಮರಪ್ಪ, ಹಿಂದುಳಿದ ವರ್ಗಗಳ ಕಾರ್ಯದರ್ಶಿ ನಾಗೇಶ್ ಪೂಜಾರಿ, ನಗರ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್ ಮತ್ತಿತರರು ಇದ್ದರು.