ಮಡಿಕೇರಿ, ಏ. 30: ನಗರದ ಗೌಳಿ ಬೀದಿಯಲ್ಲಿರುವ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ವಾರ್ಷಿಕ ಕರಗ ಉತ್ಸವವು ನಿನ್ನೆಯಿಂದ ಆರಂಭ ಗೊಂಡಿದೆ. ಸಂಪ್ರದಾಯ ದಂತೆ ಮುತ್ತು ಮಾರಿಯಮ್ಮ ಹಾಗೂ ಕಂಚಿ ಕಾಮಾಕ್ಷಮ್ಮ ದೇವತೆಗಳ ಬೇವಿನೆಲೆ ಯಿಂದ ಸಿಂಗಾರಗೊಂಡ ಕರಗ ಉತ್ಸವವು ನಗರದಲ್ಲಿ ಸಂಚರಿಸಿತು.
ಈ ಆಚರಣೆ ಮೂಲಕ ರೋಗ ರುಜಿನಗಳು, ಸಾಂಕ್ರಮಿಕ ಇತ್ಯಾದಿ ಕಾಯಿಲೆಗಳು ದೂರವಾಗಲಿದ್ದು, ಜನತೆಗೆ ಸುಭೀಕ್ಷೆ ಉಂಟಾಗಲಿದೆ ಎಂಬ ನಂಬಿಕೆಯಿಂದ ಉತ್ಸವ ನೆರವೇರಲಿದೆ. ತಾ. 1 ರಂದು (ಇಂದು) ದೇವಿಗೆ ವಿಶೇಷ ಪೂಜಾದಿಗಳು ನೆರವೇರಲಿದ್ದು, ತಾ. 2 ರಂದು (ನಾಳೆ) ಸನ್ನಿಧಿಯಲ್ಲಿ ಭಕ್ತರ ಸೇವೆ, ಮಹಾಪೂಜೆ ಬಳಿಕ ಉತ್ಸವ ಸಮಾಪನಗೊಳ್ಳಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ.