ನಾಪೆÇೀಕ್ಲು, ಮೇ. 30: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಹದಿನೈದನೇ ದಿನದ ಪಂದ್ಯಾಟದಲ್ಲಿ ಮುಕ್ಕಾಟಿರ ತಂಡದ ಪರ ಆದಿತ್ಯ ಸೋಮಣ್ಣ ಹಾಗೂ ಚಿಯ್ಯಣ್ಣ ಮೂರು ಗೋಲು ದಾಖಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸೋಮವಾರ ನಡೆದ ಪಂದ್ಯಾಟದಲ್ಲಿ ಕೊಂಗಂಡ, ಬೊಳ್ಯಪಂಡ, ಕುಯ್ಯಮಂಡ, ಕೇಲೇಟಿರ, ಚೆಕ್ಕೆರ, ಕಟ್ಟೆರ, ಐಚಂಡ, ಮುಕ್ಕಾಟಿರ (ಬೋಂದ), ಕೋದಂಡ, ಚಂದಪಂಡ, ಆಲೆಮಾಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಕೊಂಗಂಡ ಮತ್ತು ಮಲ್ಲಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಂಗಂಡ ತಂಡವು ಮಲ್ಲಮಾಡ ತಂಡವನ್ನು 4-0 ಗೋಲಿನಿಂದ ಸೋಲಿಸಿತು. ಕೊಂಗಂಡ ತಂಡದ ಪರ ಪೂವಣ್ಣ ಎರಡು, ಕರಣ್ ಕಾಳಪ್ಪ, ನಾಚಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಬೊಳ್ಯಪಂಡ ಮತ್ತು ಮೊರ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ಯಪಂಡ ತಂಡವು ಮೊರ್ಕಂಡ ತಂಡವನ್ನು 2-0 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಬೊಳ್ಯಪಂಡ ತಂಡದ ಪರ ಸತೀಶ್, ಗ್ಯಾನ್ ಗಣಪತಿ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಅಮ್ಮೇಕಂಡ ಮತ್ತು ಕುಯ್ಯಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಕುಯ್ಯಮಂಡ ತಂಡವು ಅಮ್ಮೇಕಂಡ ತಂಡವನ್ನು 3-1 ಗೋಲಿನಿಂದ ಪರಾಭವಗೊಳಿಸಿತು.

ಕುಯ್ಯಮಂಡ ತಂಡದ ಪರ ಲೋಕೇಶ್ ಚಿಣ್ಣಪ್ಪ, ಬೋಪಣ್ಣ, ಕಾಳಯ್ಯ ತಲಾ ಒಂದೊಂದು ಗೋಲು ದಾಖಲಿಸಿದರೆ, ಅಮ್ಮೇಕಂಡ ತಂಡದ ಪರ ಸುಬ್ರಮಣಿ ಒಂದು ಗೋಲು ದಾಖಲಿಸಿದರು. ಕೇಲೇಟಿರ ಮತ್ತು ಕಲ್ಮಾಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೇಲೇಟಿರ ತಂಡವು ಕಲ್ಮಾಡಂಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ಕೇಲೇಟಿರ ತಂಡದ ಪರ ಚಮನ್ ಚಂಗಪ್ಪ ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಚೆಕ್ಕೆರ ಮತ್ತು ಪಾಲೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಕ್ಕೆರ ತಂಡವು ಪಾಲೆಯಂಡ ತಂಡವನ್ನು 4-0 ಗೋಲಿನ ಅಂತರದಿಂದ ಸೋಲಿಸಿತು. ಚೆಕ್ಕೆರ ತಂಡದ ಪರ ಆಕರ್ಷ್ ಎರಡು, ಸೋಮಯ್ಯ ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಕಟ್ಟೆರ ಮತ್ತು ಜಮ್ಮಡ ತಂಡಗಳ ನಡುವಿನ ಪಂದ್ಯದಲ್ಲಿ ಕಟ್ಟೆರ ತಂಡವು ಜಮ್ಮಡ ತಂಡವನ್ನು 2-1 ಗೋಲಿನ ಅಂತರದಿಂದ ಸೋಲಿಸಿತು. ಕಟ್ಟೆರ ತಂಡದ ಪರ ಕುಶಾಲಪ್ಪ, ಬಿದ್ದಯ್ಯ ತಲಾ ಒಂದೊಂದು ಗೋಲು ದಾಖಲಿಸಿದರೆ, ಜಮ್ಮಡ ತಂಡದ ಪರ ತಶಿನ್ ತಮ್ಮಯ್ಯ ಒಂದು ಗೋಲು ದಾಖಲಿಸಿದರು. ಅಮ್ಮಂಡ ಮತ್ತು ಐಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಐಚಂಡ ತಂಡವು ಅಮ್ಮಂಡ ತಂಡವನ್ನು 2-1 ಗೋಲಿನಿಂದ ಮಣಿಸಿತು. ಐಚಂಡ ತಂಡದ ಪರ ಕುಮಾರ್, ನಾಣಯ್ಯ ತಲಾ ಒಂದೊಂದು ಗೋಲು ದಾಖಲಿಸಿದರೆ, ಅಮ್ಮಂಡ ತಂಡದ ಪರ ಬೋಪಣ್ಣ ಒಂದು ಗೋಲು ದಾಖಲಿಸಿದರು. ಮುಕ್ಕಾಟಿರ (ಬೋಂದ) ಮತ್ತು ಉದಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಉದಿಯಂಡ ತಂಡವನ್ನು 3-0 ಗೋಲಿನ ಅಂತರದಿಂದ ಮಣಿಸಿತು. ಮುಕ್ಕಾಟಿರ ತಂಡದ ಪರ ಆದಿತ್ಯ ಸೋಮಣ್ಣ ಮೂರು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು.

ಮಾಪಣಮಾಡ ಮತ್ತು ಕೋದಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋದಂಡ ತಂಡವು ಮಾಪಣಮಾಡ ತಂಡವನ್ನು 2-0 ಗೋಲಿನ ಅಂತರದಿಂದ ಸೋಲಿಸಿತು. ಕೋದಂಡ ತಂಡದ ಪರ ದ್ರುವ್ ಗಣಪತಿ, ಯಶಸ್ ಕಾರ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಚಂದಪಂಡ ಮತ್ತು ಹಂಚೆಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಚಂದಪಂಡ ತಂಡವು ಹಂಚೆಟ್ಟಿರ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಚಂದಪಂಡ ತಂಡದ ಪರ ಆಕಾಶ್ ಚಂಗಪ್ಪ ಎರಡು, ಮದನ್ ಕಾರ್ಯಪ್ಪ ಒಂದು ಗೋಲು ದಾಖಲಿಸಿದರು. ಆಲೆಮಾಡ ಮತ್ತು ನಡಿಕೇರಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಆಲೆಮಾಡ ತಂಡವು ನಡಿಕೇರಿಯಂಡ ತಂಡವನ್ನು 5-1 ಗೋಲಿನ ಅಂತರದಿಂದ ಸೋಲಿಸಿತು. ಆಲೆಮಾಡ ತಂಡದ ಪರ ಚಿಯ್ಯಣ್ಣ ನಾಲ್ಕು, ಉತ್ತಪ್ಪ ಒಂದು ಗೋಲು ದಾಖಲಿಸಿದರೆ, ನಡಿಕೇರಿಯಂಡ ತಂಡದ ಪರ ಬಿಪಿನ್ ಅಪ್ಪಚ್ಚು ಒಂದು ಗೋಲು ದಾಖಲಿಸಿದರು.