ಸಿದ್ದಾಪುರ, ಏ. 30 : ಇತ್ತೀಚೆಗೆ ಮಂಗಳೂರಿ ನಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಹೊಸೋಕ್ಲು ಚಿಣ್ಣಪ್ಪ ಅವರು 4 ಚಿನ್ನದ ಪದಕ ಪಡೆದುಕೊಂಡಿದ್ದಾರೆ. 1500 ಮೀ ಓಟ, 5000 ಮೀ ಓಟ, 10ಸಾವಿರ ಮೀ ಓಟ ಹಾಗೂ 4*400 ಮೀ ರಿಲೆಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಮಾತ್ರವಲ್ಲದೇ ಅಕ್ಟೋಬರ್‍ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಏಷಿಯನ್ ಮಾಸ್ರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.