ಮಡಿಕೇರಿ, ಏ. 30: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಮೈದಾನದಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ಬಂಗಾರಕೋಡಿ ಹಾಗೂ ಅಯ್ಯಂಡ್ರ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಇಂದು ನಡೆದ ಪಂದ್ಯದಲ್ಲಿ ಕೋಚನ ತಂಡ 4 ವಿಕೆಟ್‍ಗೆ 56 ರನ್ ಗಳಿಸಿತು. ಎದುರಾಳಿ ಪುದಿಯನೆರವನ 38 ರನ್‍ಗೆ ಆಲೌಟ್ ಆಗಿ ಸೋಲು ಕಂಡಿತು. ಗುಡ್ಡೆಮನೆ 4 ವಿಕೆಟ್‍ಗೆ 56 ರನ್ ಗಳಿಸಿತು. ಮಂಞÁಪುರ 6 ವಿಕೆಟ್‍ಗೆ 59 ರನ್ ಗಳಿಸಿ ಜಯ ಸಾಧಿಸಿತು. ಕಾಳಮನೆ 3 ವಿಕೆಟ್‍ಗೆ 73 ರನ್ ಗಳಿಸಿತು. ಎದುರಾಳಿ ಬಲ್ಯಾಟನ 4 ವಿಕೆಟ್‍ಗೆ 73 ರನ್ ಬಾರಿಸಿ ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ ಸೂಪರ್ ಓವರ್‍ನಲ್ಲಿ ಬಲ್ಯಾಟನ ಜಯ ಗಳಿಸಿತು. ಅಯ್ಯಂಡ್ರ 5 ವಿಕೆಟ್‍ಗೆ 81 ರನ್ ಗಳಿಸಿದರೆ, ಕಾಂಗೀರ 5 ವಿಕೆಟ್‍ಗೆ 59 ರನ್ ಗಳಿಸಿ ಸೋಲು ಕಂಡಿತು. ಬಂಗಾರಕೋಡಿ 4 ವಿಕೆಟ್‍ಗೆ 88 ರನ್ ಗಳಿಸಿದರೆ, ಮಂಞÁಪುರ 4 ವಿಕೆಟ್‍ಗೆ 57 ರನ್ ಗಳಿಸಿ ಸೋಲುನುಭವಿಸಿತು. ಕೋಚನ 5 ವಿಕೆಟ್‍ಗೆ 54 ರನ್ ಗಳಿಸಿದರೆ, ಸುಳ್ಯಕೋಡಿ 4 ವಿಕೆಟ್‍ಗೆ 57 ರನ್ ಬಾರಿಸಿ ಗೆಲುವು ಸಾಧಿಸಿತು. ಕಾಳೇರಮ್ಮನ 8 ವಿಕೆಟ್‍ಗೆ 57 ರನ್ ಗಳಿಸಿದರೆ, ಅಯ್ಯಂಡ್ರ 4 ವಿಕೆಟ್‍ಗೆ 58 ರನ್ ಗಳಿಸಿ ಜಯ ಸಾಧಿಸಿತು.
ಮೂಲೆಮಜಲು 5 ವಿಕೆಟ್‍ಗೆ 63 ರನ್ ಗಳಿಸಿದರೆ, ಬಲ್ಯಾಟನ 6 ವಿಕೆಟ್‍ಗೆ 66 ರನ್ ಗಳಿಸಿ ಗೆಲುವು ಸಾಧಿಸಿತು. ಕಣಜಾಲ್ 2 ವಿಕೆಟ್‍ಗೆ 135 ರನ್ ಗಳಿಸಿದರೆ, ಕುಲ್ಲಚೆಟ್ಟಿ (ಕೈಕಾಡು) 2 ವಿಕೆಟ್‍ಗೆ 103 ರನ್ ಗಳಿಸಿ ಸೋಲನುಭವಿಸಿತು. ಬಲ್ಯಾಟನ 4 ವಿಕೆಟ್‍ಗೆ 41 ರನ್ ಗಳಿಸಿದರೆ, ಬಂಗಾರಕೋಡಿ 3 ವಿಕೆಟ್‍ಗೆ 46 ರನ್ ಗಳಿಸಿ ಜಯ ಸಾಧಿಸಿತು. ಸುಳ್ಯಕೋಡಿ 8 ವಿಕೆಟ್‍ಗೆ 50 ರನ್ ಗಳಿಸಿದರೆ, ಅಯ್ಯಂಡ್ರ 4 ವಿಕೆಟ್‍ಗೆ 54 ರನ್ ಗಳಿಸಿ ಜಯ ಸಾಧಿಸಿತು.
ಇಂದಿನ ಪಂದ್ಯಗಳು
ಮೈದಾನ - 1
ಮೇಡತನ v/s ಕುಕ್ಕುನೂರು
ಪೋರೆಯನ (ಕುಯ್ಯಂಗೇರಿ) v/s ಯಂಕನ
ಮಜಲುಗದ್ದೆ v/s ತೊಟೇರ
ಕೊಂಬಾರನ v/s ಪರಪ್ಪುಮನೆ
ಓಡಿಯನ v/s ಕುದುಕುಳಿ ‘ಎ’
ಮತ್ತು ದ್ವಿತೀಯ ಸುತ್ತಿನ ಪಂದ್ಯಗಳು
ಮೈದಾನ - 2
ಮನಿಯಪ್ಪನ v/s ಕಡ್ಲೇರ ‘ಎ’
ಕೊಡೆಕಲ್ಲು v/s ಸಿರಕಜ್ಜೆ
ಕರ್ಣಯ್ಯನ v/s ಕಾನಡ್ಕ
ಅಂಚೆಮನೆ v/s ಎಡಿಕೇರಿ
ಚಿಯಪ್ಪನ v/s ಕೋಳಿಮಾಡು
ಮತ್ತು ದ್ವಿತೀಯ ಸುತ್ತಿನ ಪಂದ್ಯಗಳು