ಮಡಿಕೇರಿ, ಏ. 30: ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಕ್ರೀಡಾಪಟುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ದ್ವಿತೀಯ ವರ್ಷದ ಚೇರಂಬಾಣೆ ಸೂಪರ್ ಲೀಗ್ (ಸಿಎಸ್‍ಎಲ್) ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
ಇದರಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ಪ್ರತಿ ತಂಡಗಳಿಗೂ 7 ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಇದರಲ್ಲಿ 4 ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿದವು. ಅರ್ಹತಾ ಸುತ್ತಿನಲ್ಲಿ ಹೊರಬಿದ್ದು, ಶೂಟರ್ಸ್ ಹಾಗೂ ಸ್ಪಾರ್ಟನ್ ವಾರಿಯರ್ಸ್ ಫೈನಲ್ ಪ್ರವೇಶಿಸಿದವು. ಫೈನಲ್ ಹಣಾಹಣಿಯಲ್ಲಿ ಸ್ಪಾರ್ಟನ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 84 ರನ್‍ಗಳ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ ಶೂಟರ್ಸ್ ತಂಡವು 24 ರನ್‍ಗಳ ಸೋಲನ್ನು ಅನುಭವಿಸಿತು. ಪಂದ್ಯಾವಳಿಯಲ್ಲಿ ಉತ್ತಮ ದಾಂಡಿಗನಾಗಿ ಸ್ಪಾರ್ಟನ್ ತಂಡದ ನಿತಿನ್, ಉತ್ತಮ ಬೌಲರ್‍ನಾಗಿ ರಾಫಿ, ಸರಣಿ ಪುರುಷೋತ್ತಮನಾಗಿ ಸ್ಪಾರ್ಟನ್ ವಾರಿಯರ್ಸ್‍ನ ತೌಶಿಫ್ ಪಡೆದುಕೊಂಡರು. ಸ್ಪಾರ್ಟನ್ ವಾರಿಯರ್ಸ್ ಮೊದಲ ಬಹುಮಾನ ರೂ. 25,000 ಹಾಗೂ ಪಾರಿತೋಷಕ ಶೂಟರ್ಸ್ ದ್ವಿತೀಯ ಬಹುಮಾನ 10,000 ರೂ ಹಾಗೂ ಪಾರಿತೋಷಕ ಪಡೆದುಕೊಂಡವು.