ಮಡಿಕೇರಿ, ಏ. 30: ಮಡಿಕೇರಿ ವಕೀಲರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ಸಿ.ಟಿ. ಜೋಸೆಫ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಸಂಘದ ಎರಡು ವರ್ಷದ ಅವಧಿಗೆ ನಡೆಸಲಾದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾರೇರ ಕವನ್, ಉಪಾಧ್ಯಕ್ಷರಾಗಿ ಪಾಸುರ ಪ್ರೀತಮ್ ಉತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಜಿ. ಕಿಶೋರ್, ಖಜಾಂಚಿಯಾಗಿ ಬಾಳೆಕಜೆ ದೇವಿಪ್ರಸಾದ್, ಜಂಟಿ ಕಾರ್ಯದರ್ಶಿಯಾಗಿ ದೇವಜನ ಎಂ. ಕೇಶವ ಹಾಗೂ ಕಾರ್ಯಕಾರಿ ಮಂಡಳಿಯ ನಿರ್ದೇಶಕರುಗಳಾಗಿ ಮೊಂಟಡ್ಕ ಕೆ. ಅರುಣ್ ಕುಮಾರ್, ಪಾಂಡಿ ಟಿ. ಭಾನುಪ್ರಕಾಶ್, ಪಾಣತ್ತಲೆ ಆರ್. ಚಂದನ್, ಮುಂಡಂಡ ದಿವ್ಯ ನಂಜಪ್ಪ, ಡಿ.ಕೆ. ರಾಜೇಶ್, ಮೊಟ್ಟನ ಸಿ. ಜ್ಯೋತಿಶಂಕರ್, ಅನ್ನಡಿಯಂಡ ಜಿ. ಮುದ್ದಯ್ಯ ಮತ್ತು ಮಹಿಳಾ ನಿರ್ದೇಶಕರಾಗಿ ಜೆ. ಜೆನಿತ ಇಮ್ಯಾಕ್ಯುಲೇಟ್ ಆಯ್ಕೆಯಾಗಿದ್ದಾರೆ.