ವೀರಾಜಪೇಟೆ, ಏ. 30 : ವೀರಾಜಪೇಟೆ ಜೈನರಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮ ಕಲಶೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ತಾ. 27ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಬ್ರಹ್ಮ ಕಲಶೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಪೂಜಾ ವಿಧಿ ವಿಧಾನಗಳೊಂದಿಗೆ ಮಹಾ ಸುದರ್ಶನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಪ್ರಾಕಾರ, ಬಲಿ ನಂತರ ರಾತ್ರಿ ಮಹಾ ಪೂಜೆ ನಡೆಯಿತು.
ತಾ. 28 ರಂದು ಅಷ್ಟಬಂಧ ಬ್ರಹ್ಮ ಕಲಶೋತ್ಸವವು ವೇದಮೂರ್ತಿ ಪುಂಡರೀಶ ಅರಳಿತ್ತಾಯ ತಂತ್ರಿ ನೇತೃತ್ವದಲ್ಲಿ ನಡೆದು. ಬೆಳಿಗ್ಗೆ ದ್ವಾದಶ ನಾರಿಕೇಳ ಗಣ ಹೋಮ, ಪ್ರತಿಷ್ಠಾ ಹೋಮ, ಕಲಶಾಭಿಷೇಕ, ಅಷ್ಟ ಚತ್ವಾರಿ ಕಲಶ ಪೂಜೆ, ಅಷ್ಟಬಂಧ ಲೇಪನ ಬ್ರಹ್ಮಕಲಶಾಭಿಷೇಕ, ಮಹಾಪೂಜಾ ಸೇವೆ, ನಂತರ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಎನ್. ಜಿ. ಕಾಮತ್, ಸದಸ್ಯರಾದ ರವಿಂದ್ರ ಕಾಮತ್, ಜೆ.ಎನ್.ಪುಷ್ಪರಾಜ್, ಸಂಪತ್ ಕುಮಾರ್, ಚಂದ್ರ ಪ್ರಸಾದ್ ಮುಂತಾದವರು ಹಾಜರಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ಇಂದು ವಾರ್ಷಿಕ ಉತ್ಸವ
ನಾಪೆÇೀಕ್ಲು : ಹೊದವಾಡ ಗ್ರಾಮದ ಶ್ರೀ ಅಮ್ಮನವರ ದೇವಳದ ವಾರ್ಷಿಕೋತ್ಸವವು ಮೇ. 1 (ಇಂದು) ರ ಮಂಗಳವಾರ ನಡೆಯಲಿದೆ. ಈ ಪ್ರಯುಕ್ತ ಮಹಾಪೂಜೆ, ದೇವರ ದರ್ಶನ, ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ.
ದೇವರ ಉತ್ಸವ
ಮಡಿಕೇರಿ : ಇಲ್ಲಿಗೆ ಸಮೀಪದ ಕೆ. ನಿಡುಗಣೆ ಕೂಟುಹೊಳೆಯ ಶ್ರೀ ಕುಂದುಮುಂಡಿ ಮಾರಿಯಮ್ಮ ದೇವಸ್ಥಾನದ 112ನೇ ವರ್ಷದ ಉತ್ಸವ ಮೇ. ತಾ. 1 ರಂದು (ಇಂದು) ಆರಂಭಗೊಳ್ಳಲಿದೆ. ಬೆಳಿಗ್ಗೆ 6-30 ಗಂಟೆಗೆ ಶುದ್ಧ ಕಲಶದೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ತಾ. 2 ರಂದು 9-00 ಗಂಟೆಗೆ ವಿಶೇಷ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಾರ್ಷಿಕ ಉತ್ಸವ
ಸಿದ್ದಾಪುರ : ಸಿದ್ದಾಪುರದ ಹೆರೂರು ಬಳಿ ಇರುವ ಶ್ರೀ ವರಾಹಿ ರೂಪಿನಿ ದೊಡ್ಡಮ್ಮ ತಾಯಿ ದೇವಾಲಯದ ವಾರ್ಷಿಕೋತ್ಸವವು ಮೇ.5 ಹಾಗೂ 6 ರಂದು ಬಾಡಗಕೇರಿಯ ಮೃತ್ಯುಂಜಯ ದೇವಾಲಯದ ಶ್ರೀ ಹರೀಶ್ ಭಟ್ರವರ ನೇತೃತ್ವದಲ್ಲಿ ನಡೆಯಲಿದೆ. 5 ರಂದು ಸಂಜೆ ಶುದ್ಧಿ ಸುದರ್ಶನಹೋಮ, ಸಂಜೆ 6 ರಿಂದ 10 ಗಂಟೆಯವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಮೇ.6 ರಂದು ಬೆಳಗ್ಗೆ 8 ಗಂಟೆಗೆ ಸ್ಥಳ ಶುದ್ಧಿ ಮಹಾಗಣಪತಿ ಹೋಮ, ಬೆಳಗ್ಗೆ 9 ಗಂಟೆಗೆ ನವಕ ಕಲಶ ಪೂಜೆ, ಮದ್ಯಾಹ್ನ ದೇವಿಯ ಪೂಜೆ, ಮಹಾಮಂಗಳಾರತಿ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀಭದ್ರಕಾಳಿ ಉತ್ಸವ
ಮಡಿಕೇರಿ : ಶ್ರೀಮಂಗಲ ಕಾಯಿಮಾನಿ ಶ್ರೀ ಭದ್ರಕಾಳಿ ಅಯ್ಯಪ್ಪ ದೇವರ ದೇವಾಲಯದಲ್ಲಿ ಮೇ 3 ರಿಂದ 4 ರವರೆಗೆ ದೈ ವಾರ್ಷಿಕ ಉತ್ಸವ ನಡೆಯಲಿದೆ. ಮೇ 3 ರಂದು ರಾತ್ರಿ 8.30 ಗಂಟೆಗೆ ಕಾಯಿಮಾನಿ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಬೊಳ್ಕಾಟ್, ತೀರ್ಥ ಪ್ರಸಾದ, ಮೇ 4 ರಂದು ಪೂರ್ವಾಹ್ನ 10.30 ಗಂಟೆಗೆ ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ, ಅಪರಾಹ್ನ 3.30 ಗಂಟೆಗೆ ಕುದುರೆ ಮುಡಿಯೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ, ಸಾಯಂಕಾಲ 7.30 ಗಂಟೆಗೆ ಮಹಾ ಮಂಗಳಾರತಿ ನೆರವೇರಲಿದೆ ಎಂದು ದೇವಾಲಯ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.
ಇಂದು ದುರ್ಗಾಪೂಜೆ
ಮಡಿಕೇರಿ : ತಾ. 1 ರಂದು (ಇಂದು) ಸಂಜೆ 6-30 ಗಂಟೆಗೆ ಮಡಿಕೇರಿಯ ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ಸಾಮೂಹಿಕ ದುರ್ಗಾಪೂಜೆಯನ್ನು ಏರ್ಪಡಿಸಲಾಗಿದೆ.