ನಾಪೆÇೀಕ್ಲು, ಮೇ. 2: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಹದಿನೇಳನೇ ದಿನದ ಪಂದ್ಯಾಟದಲ್ಲಿ ಪರದಂಡ ತಂಡದ ಪರ ಪ್ರಜ್ವಲ್ ಪೂವಣ್ಣ ಹ್ಯಾಟ್ರಿಕ್ ಗೋಲು ದಾಖಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಬುಧವಾರ ನಡೆದ ಪಂದ್ಯಾಟದಲ್ಲಿ ಪರದಂಡ, ಮಾಚಂಡ, ಅಪ್ಪಾರಂಡ, ಕೊಕ್ಕಂಡ, ಕಲಿಯಂಡ, ಕುಂಡ್ಯೋಳಂಡ, ಚೆಪ್ಪುಡಿರ, ಸುಳ್ಳಿಮಾಡ, ಕುಟ್ಟಂಡ (ಅಮ್ಮತ್ತಿ), ನಂಬುಡುಮಾಡ, ತಿರುಟೆರ, ಪಾಡೆಯಂಡ ತಂಡಗಳು ಮುನ್ನಡೆ ಸಾಧಿಸಿವೆ.

ಪರದಂಡ ಮತ್ತು ಮೂಕಳಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಪರದಂಡ ತಂಡವು ಮೂಕಳಮಾಡ ತಂಡವನ್ನು 5-2 ಗೋಲಿನಿಂದ ಸೋಲಿಸಿತು. ಪರದಂಡ ತಂಡದ ಪರ ಪ್ರಜ್ವಲ್ ಪೂವಣ್ಣ ಹ್ಯಾಟ್ರಿಕ್ ಸೇರಿ 4 ಗೋಲು, ಮೊಣ್ಣಪ್ಪ ಒಂದು ಗೋಲು ದಾಖಲಿಸಿದರೆ, ಮೂಕಳಮಾಡ ತಂಡದ ಪರ ಗಣಪತಿ ಒಂದು ಗೋಲು ದಾಖಲಿಸಿದರು. ಬುಟ್ಟಿಯಂಡ ಮತ್ತು ಮಾಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಂಡ ತಂಡವು ಬುಟ್ಟಿಯಂಡ ತಂಡವನ್ನು 1-0 ಗೋಲಿನಿಂದ ಪರಾಭವಗೊಳಿಸಿತು. ಮಾಚಂಡ ತಂಡದ ಪರ ನೂತನ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕಾಳಿಮಾಡ ಮತ್ತು ಅಪ್ಪಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಪ್ಪಾರಂಡ ತಂಡವು ಕಾಳಿಮಾಡ ತಂಡವನ್ನು 1-0 ಗೋಲಿನ ಅಂತರದಿಂದ ಸೋಲಿಸಿತು.

ಅಪ್ಪಾರಂಡ ತಂಡದ ಪರ ಕಾಳಪ್ಪ ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಬಟ್ಟಿರ ಮತ್ತು ಕೊಕ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಕ್ಕಂಡ ತಂಡವು ಬಟ್ಟಿರ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಕೊಕ್ಕಂಡ ತಂಡದ ಪರ ರಾಜ, ಪೆÇನ್ನಣ್ಣ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಕಲಿಯಂಡ ಮತ್ತು ನುಚ್ಚಿಮಣಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡವು ನುಚ್ಚಿಮಣಿಯಂಡ ತಂಡವನ್ನು 4-1 ಗೋಲಿನಿಂದ ಮಣಿಸಿತು. ಕಲಿಯಂಡ ತಂಡದ ಪರ ಭರತ್ ಎರಡು, ರಾಜ, ಕಾರ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಪಟ್ರಪಂಡ ಮತ್ತು ಕುಂಡ್ಯೋಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಂಡ್ಯೋಳಂಡ ತಂಡವು ಪಟ್ರಪಂಡ ತಂಡವನ್ನು 1-0 ಗೋಲಿನಿಂದ ಮಣಿಸಿತು. ಕುಂಡ್ಯೋಳಂಡ ತಂಡದ ಪರ ಕಾರ್ಯಪ್ಪ ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಚೆಪ್ಪುಡಿರ ಮತ್ತು ಓಟೇರಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡಿರ ತಂಡವು ಓಟೇರಿರ ತಂಡವನ್ನು 6-0 ಗೋಲಿನ ಅಂತರದಿಂದ ಸೋಲಿಸಿತು.

ಚೆಪ್ಪುಡಿರ ತಂಡದ ಪರ ಚೇತನ್, ಸೋಮಣ್ಣ ತಲಾ ಎರಡು, ಪ್ರಣವ್, ವಚನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಸುಳ್ಳಿಮಾಡ ಮತ್ತು ಬಾಚಿನಾಡಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸುಳ್ಳಿಮಾಡ ತಂಡವು ಬಾಚಿನಾಡಂಡ ತಂಡವನ್ನು 6-0 ಗೋಲಿನ ಅಂರದಿಂದ ಮಣಿಸಿತು. ಸುಳ್ಳಿಮಾಡ ತಂಡದ ಪರ ಸಂಜು, ಧ್ಯಾನ್ ತಲಾ ಎರಡು, ದೀಪಕ್, ಭಜನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕುಟ್ಟಂಡ (ಅಮ್ಮತ್ತಿ) ಮತ್ತು ಬೊಟ್ಟಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಟ್ಟಂಡ ತಂಡವು ಬೊಟ್ಟಂಗಡ ತಂಡವನ್ನು ಟೈ ಬ್ರೇಕರ್‍ನ 5-4 ಗೋಲಿನಿಂದ ಸೋಲಿಸಿತು. ಮಾಚಮಾಡ ಮತ್ತು ನಂಬುಡುಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಂಬುಡುಮಾಡ ತಂಡವು ಮಾಚಮಾಡ ತಂಡವನ್ನು ಟೈ ಬ್ರೇಕರ್‍ನ 5-4 ಗೋಲಿನಿಂದ ಮಣಿಸಿತು. ತಿರುಟೆರ ಮತ್ತು ಕೋಡಿರ ತಂಡಗಳ ನಡುವಿನ ಪಂದ್ಯದಲ್ಲಿ ತಿರುಟೆರ ತಂಡವು ಕೋಡಿರ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ತಿರುಟೆರ ತಂಡದ ಪರ ಮುತ್ತಪ್ಪ, ವಿನು, ಪೂವಯ್ಯ ತಲಾ ಒಂದೊಂದು ಗೋಲು ದಾಖಲಿಸಿದರೆ, ಕೋಡಿರ ತಂಡದ ಪರ ರೋಶನ್ ಬೆಳ್ಯಪ್ಪ ಒಂದು ಗೋಲು ದಾಖಲಿಸಿದರು. ಪಾಡೆಯಂಡ ಮತ್ತು ಮಣವಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಪಾಡೆಯಂಡ ತಂಡವು ಮಣವಟ್ಟಿರ ತಂಡವನ್ನು 3-0 ಗೋಲಿನ ಅಂತರದಿಂದ ಪರಾಭವಗೊಳಿಸಿತು. ತಂಡದ ಪರ ಮಂದಣ್ಣ ಎರಡು, ಮುತ್ತಪ್ಪ ಒಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು.

ತಾ. 1 ರ ಫಲಿತಾಂಶ

ತಾ. 1ರಂದು ನಡೆದ ಪಂದ್ಯಾಟದಲ್ಲಿ ಬಲ್ಲಚಂಡ, ಕುಪ್ಪಂಡ, ಕೋಟೆರ, ಚೋಳಂಡ, ಚೌರೀರ (ಹೊದವಾಡ), ಮಾಪಂಗಡ, ಬೊಳ್ಳಂಡ, ಕೋಡಿಮಣಿಯಂಡ, ಚೌರೀರ (ಹೊದ್ದೂರು) ತಂಡಗಳು ಮುಂದಿನ ಸುತ್ತು ಪ್ರವೇಶಿಸಿತ್ತು.

ಬಲ್ಲಚಂಡ ಮತ್ತು ನಾಯಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಲ್ಲಚಂಡ ತಂಡವು ನಾಯಕಂಡ ತಂಡವನ್ನು ಪರಾಭವಗೊಳಿಸಿತು. ಕುಪ್ಪಂಡ (ಕೈಕೇರಿ) ಮತ್ತು ಪುಚ್ಚಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕುಪ್ಪಂಡ ತಂಡವು ಪುಚ್ಚಿಮಾಡ ತಂಡವನ್ನು ಸೋಲಿಸಿತು. ಕೋಟೆರ ಮತ್ತು ಬೊಳಕಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋಟೆರ ತಂಡವು ಬೊಳಕಾರಂಡ ತಂಡವನ್ನು ಮಣಿಸಿತು. ಚೋಳಂಡ ಮತ್ತು ಮುಕ್ಕಾಟಿರ (ಕಡಗದಾಳು) ತಂಡಗಳ ನಡುವಿನ ಪಂದ್ಯದಲ್ಲಿ ಚೋಳಂಡ ತಂಡವು ಮುಕ್ಕಾಟಿರ ತಂಡವನ್ನು ಸೋಲಿಸಿತು. ಚೌರೀರ (ಹೊದವಾಡ) ಮತ್ತು ಬೊಳ್ಳಾರಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೌರೀರ ತಂಡವು ಬೊಳ್ಳಾರಪಂಡ ತಂಡವನ್ನು ಸೋಲಿಸಿತು. ಚೌರೀರ ಅಚ್ಚಾಂಡಿರ ಮತ್ತು ಮಾಪಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಪಂಗಡ ತಂಡವು ಅಚ್ಚಾಂಡಿರ ತಂಡವನ್ನು ಮಣಿಸಿತು. ಬೊಳ್ಳಂಡ ಮತ್ತು ತೇಲಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ಳಂಡ ತಂಡವು ತೇಲಪಂಡ ತಂಡವನ್ನು ಸೋಲಿಸಿತು. ಕೋಡಿಮಣಿಯಂಡ ಮತ್ತು ನಾಮೆರ ತಂಡಗಳ ನಡುವಿನ ಪಂದ್ಯದಲ್ಲಿ ಕೋಡಿಮಣಿಯಂಡ ತಂಡವು ನಾಮೆರ ತಂಡವನ್ನು ಸೋಲಿಸಿತು. ಚೌರೀರ (ಹೊದ್ದೂರು) ಮತ್ತು ಮನೆಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೌರೀರ ತಂಡವು ಮನೆಯಪಂಡ ತಂಡವನ್ನು ಸೋಲಿಸಿತು.