ತಾ. 1 ರಂದು ನಡೆದ ಪಂದ್ಯಾವಳಿಗೆ ತೂಟೇರ ತಂಡದೆದುರು ಮಜಲುಗದ್ದೆ ತಂಡದ ಕುಳ್ಳ ಆಟಗಾರನಾಗಿ ಮನು ಅಂಕಣಕ್ಕಿಳಿದು ಗಮನ ಸೆಳೆದರು. ಚಾಕಚಕ್ಯತೆಯ ಬ್ಯಾಟಿಂಗ್ನೊಂದಿಗೆ ಓಡಿ ರನ್ ಗಳಿಸಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡರು. ಅಲ್ಲದೆ ಉತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು.ಈ ತಂಡದಲ್ಲಿ ಇಬ್ಬರು ಯುವತಿಯರು, ಹಿರಿಯರು ಆಟವಾಡಿ ಗಮನ ಸೆಳೆದರು.