ಮಡಿಕೇರಿ, ಮೇ 2: ಹತ್ತು ಕುಟುಂಬ ಹದಿನೆಂಟು ಗೋತ್ರಗಳ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಆಟದ ಮೈದಾನದಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ ಕಳೆದ ಬಾರಿಯ ಪೈಕೇರ ಕಪ್ ಚಾಂಪಿಯನ್ ತಂಡವಾದ ತಳೂರು ಹಾಗೂ ಹಿಂದಿನ ಕುಟ್ಟನ ಕಪ್ ಚಾಂಪಿಯನ್ ತಂಡವಾದ ಕೊಂಬಾರನ ತಂಡಗಳು ಪ್ರಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ತೇನನ ತಂಡ 6 ವಿಕೆಟ್‍ಗೆ 64 ರನ್ ಗಳಿಸಿದರೆ, ಪಾಕಮುಕ್ಕಾಟಿ ಎ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಬೈಲೆ ತಂಡ 3 ವಿಕೆಟ್‍ಗೆ 112 ರನ್ ಗಳಿಸಿದರೆ, ಕಣಜಾಲು ತಂಡ 5 ವಿಕೆಟ್‍ಗೆ 40 ರನ್ ಗಳಿಸಿ, 72 ರನ್‍ಗಳ ಅಂತರದಿಂದ ಸೋಲನುಭವಿಸಿತು. ಸೂದನ ತಂಡ 4 ವಿಕೆಟ್‍ಗೆ 45 ರನ್ ಗಳಿಸಿದರೆ, ಕುದುಕುಳಿ ಬಿ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ತಳೂರು ತಂಡ 2 ವಿಕೆಟ್‍ಗೆ 99 ರನ್ ಗಳಿಸಿದರೆ, ಕೋಳಿಮಾಡು ತಂಡ 4 ವಿಕೆಟ್ ಕಳೆದುಕೊಂಡು 72 ರನ್‍ಗಳಿಸಿ, 27 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕುಕ್ಕುನೂರು ತಂಡ 7 ವಿಕೆಟ್‍ಗೆ 73 ರನ್ ಗಳಿಸಿದರೆ, ಪಾಕಮುಕ್ಕಾಟಿ ಎ ತಂಡ 3 ವಿಕೆಟ್ ನಷ್ಟದಲ್ಲಿ ಗುರಿ ಸೇರಿತು.

ಕುಡೆಕಲ್ಲು ಎ ತಂಡ 1 ವಿಕೆಟ್‍ಗೆ 103 ರನ್ ಗಳಿಸಿದರೆ, ಬೈಲೆ ತಂಡ 6 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿ, 39 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕರ್ಣಯ್ಯನ ತಂಡ 8 ವಿಕೆಟ್‍ಗೆ 30 ರನ್ ಗಳಿಸಿದರೆ, ತಳೂರು ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲಪಿತು. ಕೊಂಬಾರನ ತಂಡ 5 ವಿಕೆಟ್‍ಗೆ 92 ರನ್ ಗಳಿಸಿದರೆ, ಕುದುಕುಳಿ ಬಿ ತಂಡ 3 ವಿಕೆಟ್‍ಗೆ 77 ರನ್ ಗಳಿಸಿ 17 ರನ್‍ಗಳ ಅಂತರದಿಂದ ಸೋಲನುಭವಿಸಿತು.

ಮತ್ತೊಂದು ಪಂದ್ಯದಲ್ಲಿ ಕುಡೆಕಲ್ಲು ಬಿ ತಂಡ 5 ವಿಕೆಟ್‍ಗೆ 105 ರನ್ ಗಳಿಸಿದರೆ, ತಳೂರು ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಕೊಂಬಾರನ ತಂಡ 4 ವಿಕೆಟ್‍ಗೆ 88 ರನ್ ಗಳಿಸಿದ್ದು, ಪಾಕಮುಕ್ಕಾಟಿ ತಂಡ 6 ವಿಕೆಟ್‍ಗೆ 63 ರನ್ ಗಳಿಸಿ 25 ರನ್‍ಗಳ ಅಂತರದಿಂದ ಸೋಲನುಭವಿಸಿತು.

ತಾ. 1ರ ಪಂದ್ಯಾಟ

ತಾ. 1 ರಂದು ನಡೆದ ಪಂದ್ಯಾವಳಿಯಲ್ಲಿ ಕಡ್ಲೇರ ಬಿ ತಂಡ ಮನಿಯಪ್ಪನ ತಂಡವನ್ನು ಸೋಲಿಸಿದರೆ, ಕುಕ್ಕನೂರು ತಂಡ ಮೇಡ್ತನ ತಂಡವನ್ನು ಸೋಲಿಸಿತು. ಕುಡೆಕಲ್ಲು ಎ ತಂಡ ಸಿರಕಜೆ ತಂಡವನ್ನು ಮಣಿಸಿದರೆ, ಯಂಕನ ತಂಡ ಪೋರೆಯನ ತಂಡವನ್ನು ಸೋಲಿಸಿತು. ಕರ್ಣಯ್ಯನ ತಂಡ ಕಾನಡ್ಕ ತಂಡವನ್ನು ಸೋಲಿಸಿದರೆ, ಪೂಟೇರ ತಂಡ ಮಜಲುಗದ್ದೆ ತಂಡವನ್ನು ಸೋಲಿಸಿತು.

ಕೊಂಬಾರನ ತಂಡ ಪರಪ್ಪುಮನೆ ತಂಡವನ್ನು ಮಣಿಸಿದರೆ, ಅಂಚೆಮನೆ ತಂಡ ಎಡಿಕೇರಿ ತಂಡವನ್ನು ಸೋಲಿಸಿತು. ಕುದುಕುಳಿ ಬಿ ತಂಡ ಓಡಿಯನ ತಂಡವನ್ನು ಸೋಲಿಸಿದರೆ, ಕೋಳಿಮಾಡು ತಂಡ ಚೀಯಪ್ಪನ ತಂಡವನ್ನು ಮಣಿಸಿತು. ಕುಕ್ಕುನೂರು ತಂಡ ಯಂಕನ ತಂಡವನ್ನು ಸೋಲಿಸಿದರೆ, ಕುಡೆಕಲ್ಲು ತಂಡ ಕಡ್ಲೇರ ತಂಡವನ್ನು ಸೋಲಿಸಿತು. ಕರ್ಣಯ್ಯನ ತಂಡ ಅಂಚೆಮನೆ ತಂಡವನ್ನು ಮಣಿಸಿದರೆ, ಕೊಂಬಾರನ ತಂಡ ತೂಟೇರ ತಂಡವನ್ನು ಸೋಲಿಸಿತು.